ಶಿವಮೊಗ್ಗ: ಜಿಲ್ಲೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಮತ್ತು ಇಸ್ಪೀಟ್ ದಂಧೆಯು ಆನ್ ಲೈನ್ ಆ್ಯಪ್ ಮೂಲಕ ಜೋರಾಗಿ ನಡೆಯುತ್ತಿದೆ. ತಂತ್ರಜ್ಞಾನ (Technology) ಬಳಿಸಿಕೊಂಡು ಎಲ್ಲವನ್ನು ಆ್ಯಪ್ ಮೂಲಕವೇ ನಡೆಯುತ್ತಿವೆ. ಇದರಿಂದ ದಂಧೆಕೋರರನ್ನು ಹಿಡಿಯುವುದು ಪೊಲೀಸರಿಗೆ ಸುಲಭದ ಕೆಲಸ ಆಗಿರಲಿಲ್ಲ. ಈ ದಂಧೆಗಳಿಗೆ ಕಡಿವಾಣ ಹಾಕಲು ಶಿವಮೊಗ್ಗ(Shivamogga) ಎಸ್ಪಿ ಮಿಥುನ್ ಕುಮಾರ್ ಅವರು ವಿಶೇಷ ತಂಡ ರಚನೆ ಮಾಡಿದ್ದರು. ಇದೀಗ ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ಆಡುತಿದ್ದವರ ಮೇಲೆ ವಿಶೇಷ ತಂಡ ದಾಳಿ ಮಾಡಿದೆ. ಶಿವಮೊಗ್ಗ ಮತ್ತು ಭದ್ರಾವತಿ ವ್ಯಾಪ್ತಿಯ ಕ್ರಿಕೆಟ್ ಬೆಟ್ಟಿಂಗ್ ಕಿಂಗ್ ಪಿನ್ ಸತೀಶ್ ಎಂಬಾತನನ್ನ ಪೊಲೀಸರು ಬಲೆಗೆ ಬೀಳಿಸಿದ್ದಾರೆ. ಈತನ ಮೂವರು ಸಹಚರರು ಎಸ್ಕೇಪ್ ಆಗಿದ್ದಾರೆ. ಮೊದಲ ದಾಳಿಯಲ್ಲಿ 7,20,000 ರೂ. ನಗದು ಹಣ, 3 ಮೊಬೈಲ್ ಫೋನ್ ಮತ್ತು 1 ಬೈಕ್ ಸೀಜ್ ಮಾಡಿದ್ದಾರೆ.
ಕಾರ್ತಿಕ್ ತನ್ನ ಸ್ನೇಹಿತನಾದ ಸತೀಶ್ನ ಆನ್ ಲೈನ್ ವೆಬ್ ಸೈಟ್/ಆಪ್‌ನಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆಡಿಸುತ್ತಿದ್ದನು. ಕಾರ್ತಿಕ್ ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ಆಡಿ ಹೆಚ್ಚಿನ ಹಣವನ್ನು ಗಳಿಸಿಕೊಡುತ್ತೇವೆಂದು ಹೇಳಿದ್ದನು. 3 ರಿಂದ 4 ವರ್ಷಗಳಿಂದ ಸತೀಶ್ನಿಗೆ ಹಣವನ್ನು ಕೊಡುತ್ತಾ ಬಂದಿದ್ದನು. ಆದರೆ, ಆತನು ನಾನು ಕೊಟ್ಟ ಹಣವನ್ನು ವಾಪಸ್ ಕೊಡದೇ ಬೆಟ್ಟಿಂಗ್ನಲ್ಲಿ ಹಣ ಹೋಯಿತು ಎಂದಿದ್ದನು. ಹೌದು ಮೂರು ಲಕ್ಷ ಹಣ ಸತೀಶ್ ವಾಪಸ್ ಕೊಟ್ಟಿರಲಿಲ್ಲ. ಈ ಹಿನ್ನಲೆಯಲ್ಲಿ ಆನ್ ಲೈನ್ ಅ್ಯಪ್ ಮೂಲಕ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಸತೀಶ್ ಮತ್ತು ಆತನ ಸಹಚರರು ಪೊಲೀಸ್ ಬಲೆಗೆ ಬಿದ್ದಿದ್ದಾರೆ.
ಇದನ್ನೂ ಓದಿ:ಮತದಾನದ ಬೆನ್ನೆಲೆ ರಾಜ್ಯದಲ್ಲಿ ಹೆಚ್ಚಾದ ರಾಜಕೀಯ ಬೆಟ್ಟಿಂಗ್: ಅಭ್ಯರ್ಥಿಗಳ ಪರ ಬಾಜಿಗಿಳಿದ ಅಭಿಮಾನಿಗಳು
ಈ ನಡುವೆ ಆರೋಪಿತ ಸತೀಶ್ನು ಆನ್ ಲೈನ್ ಬೆಟ್ಟಿಂಗ್ ಆಪ್/ವೆಬ್ ಸೈಟ್ಗಳಲ್ಲಿ ಹೂಡಿಕೆ ಮಾಡಿದ್ದ ಒಟ್ಟು 18,26,336 ರೂ. ಹಣ ಕೂಡ ಸೀಜ್ ಮಾಡಿದ್ದಾರೆ. ಈ ಸಂಧರ್ಭದಲ್ಲಿ 2 ಆ್ಯಪಲ್ ಫೋನ್ ಕೂಡ ಪತ್ತೆಯಾಗಿವೆ. ಈ ಎರಡು ದಾಳಿಯಲ್ಲಿ ಪೊಲೀಸರು ಒಟ್ಟು 25, 46330 ಲಕ್ಷ ರೂ. ಜಪ್ತಿ ಮಾಡಿದ್ದಾರೆ. ಒಟ್ಟು 5 ಮೊಬೈಲ್ ಫೋನ್ಗಳು ಮತ್ತು ಒಂದು ಬೈಕ್ ಸೀಜ್ ಆಗಿವೆ. ಹೀಗೆ ಮಲೆನಾಡಿನಲ್ಲಿ ಕಳೆದ ಕೆಲವು ತಿಂಗಳಿನಿಂದ ಐಪಿಎಲ್ ಬೆಟ್ಟಿಂಗ್ ಸೇರಿದಂತೆ ಇತರೆ ಆನ್ ಲೈನ್ ಗೇಮ್ಗಳ ಮೂಲಕ ಜೂಜು ದಂಧೆ ಜೋರಾಗಿ ನಡೆಯುತ್ತಿದೆ.
ಆ್ಯಪ್ಗಳ ಮೂಲಕ ದಂಧೆಗಳು ಜೋರಾಗಿ ನಡೆಯುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ಗೇಮ್ಗಳ ಮೂಲಕವೂ ಜೂಜು ಜೋರಾಗಿ ನಡೆಯುತ್ತಿದೆ. ಪೊಲೀಸರು ಇಂತಹ ಆನ್ ಲೈನ್ ಗೇಮ್ ಮೂಲಕ ಜೂಜು ದಂಧೆಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮೊಬೈಲ್ ಮೂಲಕ ಈ ಆನ್ ಲೈನ್ ಮೂಲಕ ಜೂಜಾಟ ದಂಧೆಯು ಜೋರಾಗಿ ನಡೆಯುತ್ತಿದೆ. ಅದರಲ್ಲೂ ಕಾಲೇಜ್ ಯುವಕರು ಹೆಚ್ಚು ಅನ್ ಲೈನ್ ಗೇಮ್ಸ್ ಗಳಿಗೆ ಬಲಿಪಶುಗಳಾಗುತ್ತಿದ್ದಾರೆ. ಆನ್ ಲೈನ್ನಲ್ಲಿ ಜೂಜಾಟದಲ್ಲಿ ಹಣ ಕಳೆದುಕೊಳ್ಳುತ್ತಿದ್ದಾರೆ. ಈ ಕುರಿತು ಪೊಲೀಸರು ಇನ್ನೂ ಹೆಚ್ಚು ಜಾಗೃತಿ ಮೂಡಿಸಬೇಕೆಂದು ಪೋಷಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:Bangalore: ಬೆಟ್ಟಿಂಗ್ ಅಡ್ಡೆ ಮೇಲೆ ಪೊಲೀಸ್ ದಾಳಿ; ಸೂಕ್ತ ತನಿಖೆ ನಡೆಸದ ಪಿಎಸ್ಐ ಸೇರಿ ಐವರು ಅಮಾನತು
ಮಲೆನಾಡಿನಲ್ಲಿ ಅಕ್ರಮ ದಂಧೆಗಳು ತುಂಬಾ ಸ್ಮಾರ್ಟ್ ಆಗಿ ಆನ್ ಲೈನ್ ಆ್ಯಪ್ಗಳ ಮೂಲಕ ನಡೆಯುತ್ತಿವೆ. ಇದನ್ನು ತಡೆಯಲು ಪೊಲೀಸರು ಸಾಕಷ್ಟು ಹರಸಾಹಸ ಪಡುತ್ತಿದ್ದಾರೆ. ಸದ್ಯ ಆನ್ ಲೈನ್ ಮೂಲಕ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಕಿಂಗ್ ಪಿನ್ ಮತ್ತು ಆತನ ಸಹಚರರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಈ ಮೂಲಕ ಪೋಷಕರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ವರದಿ: ಬಸವರಾಜ್ ಯರಗಣವಿ ಟವಿ9 ಶಿವಮೊಗ್ಗ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ