ಕೊಪ್ಪಳ: 4.3 ಎಕರೆ ಬತ್ತದ ಗದ್ದೆ, 50 ಲಕ್ಷ ಬೆಲೆ ಬಾಳುವ ಬಿಲ್ಡಿಂಗ್ ಬೆಟ್ಟಿಂಗ್
ವಿಧಾನಸಭೆ ಚುನಾವಣೆ (Karnataka Assembly Election) ಮತದಾನ ಪ್ರಕ್ರಿಯೆ ಮೇ.10 ರಂದು ಭರ್ಜರಿಯಾಗಿ ನಡೆದಿದ್ದು, ರಾಜ್ಯಾದ್ಯಂತ 73.19 ಪ್ರತಿಶತ ಮತದಾನವಾಗಿದೆ. ಅದರಂತೆ ನಾಳೆ(ಮೇ.13) ರಾಜ್ಯದ 2615 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಈ ಮಧ್ಯೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ತಮ್ಮ ತಮ್ಮ ಕ್ಷೇತ್ರದ ಅಭ್ಯರ್ಥಿಯ ಮೇಲೆ ಮತದಾರರು ಬೆಟ್ಟಿಂಗ್ ಕಟ್ಟುತ್ತಿದ್ದಾರೆ.
ಕೊಪ್ಪಳ: ವಿಧಾನಸಭೆ ಚುನಾವಣೆ (Karnataka Assembly Election) ಮತದಾನ ಪ್ರಕ್ರಿಯೆ ಮೇ.10 ರಂದು ಭರ್ಜರಿಯಾಗಿ ನಡೆದಿದ್ದು, ರಾಜ್ಯಾದ್ಯಂತ 73.19 ಪ್ರತಿಶತ ಮತದಾನವಾಗಿದೆ. ಅದರಂತೆ ನಾಳೆ(ಮೇ.13) ರಾಜ್ಯದ 2615 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಈ ಮಧ್ಯೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ತಮ್ಮ ತಮ್ಮ ಕ್ಷೇತ್ರದ ಅಭ್ಯರ್ಥಿಯ ಮೇಲೆ ಮತದಾರರು ಬೆಟ್ಟಿಂಗ್ ಕಟ್ಟುತ್ತಿದ್ದಾರೆ. ಅದರಂತೆ ಇದೀಗ ಕೊಪ್ಪಳದಲ್ಲೂ ಕೊಟ್ಟಿಗಟ್ಟಲೆ ಬಾಜಿ ಕಟ್ಟಲು ಶಿವರಾಜ ತಂಗಡಗಿ ಬೆಂಬಲಿಗರು ಮುಂದಾಗಿದ್ದಾರೆ. ಹೌದು ಜಿಲ್ಲೆಯ ಕನಕಗಿರಿ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಕಾರಟಗಿಯ ಸತ್ಯ ಪ್ರಕಾಶ ಚೌದರಿ ಅಂದಾಜು 1.5 ಕೋಟಿ ಮೌಲ್ಯದ ಆಸ್ತಿ ಬೆಟ್ಟಿಂಗ್ ಕಟ್ಟಲು ಮುಂದಾಗಿದ್ದು, ಬೆಟ್ಟಿಂಗ್ ಕಟ್ಟುವವರು ಇಂದು(ಮೇ.12) ಸಂಜೆಯವರೆಗೆ ಸಂಪರ್ಕ ಮಾಡಿ ಎಂದು ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದಾರೆ. ಚೆಲ್ಲೂರು ಕ್ಯಾಂಪ್ ಕಾಲುವೆ ಪಕ್ಕದ ಸರ್ವೆ ನಂಬರ್ 115ಬಿಪಿ 4.3 ಎಕರೆ ಬತ್ತದ ಗದ್ದೆ ( ಅಂದಾಜು 1 ಕೋಟಿ ), 50 ಲಕ್ಷ ಬೆಲೆ ಬಾಳುವ ಬಿಲ್ಡಿಂಗ್ ಪಂದ್ಯಕ್ಕೆ ಇಟ್ಟಿದ್ದಾರೆ.
ಚುನಾವಣೆ ಗೆಲುವು ಸೋಲಿನ ಮೇಲೆ ಛಾಪಾಕಾಗದದಲ್ಲಿ 5ಲಕ್ಷದ ಬೆಟ್ಟಿಂಗ್ ಅಗ್ರಿಮೆಂಟ್
ಮೈಸೂರು: ಈಗಾಗಲೇ ಕ್ಷೇತ್ರಗಳಲ್ಲಿ ಸೋಲು ಗೆಲುವಿನ ಮಾತು ಕೇಳಿ ಬರುತ್ತಿದೆ. ಅದರಂತೆ ಇದೀಗ ಚುನಾವಣೆ ಗೆಲುವು ಸೋಲಿನ ಬೆಟ್ಟಿಂಗ್ ಛಾಪಾಕಾಗದದಲ್ಲಿ 5ಲಕ್ಷದ ಬೆಟ್ಟಿಂಗ್ ಅಗ್ರಿಮೆಂಟ್ ಮಾಡಿಕೊಂಡಿರುವ ಕುರಿತು ಹೆಚ್.ಡಿ ಕೋಟೆ ಕ್ಷೇತ್ರದಲ್ಲಿ ಹರಿದಾಡುತ್ತಿದೆ. ಹೌದು ಜಯರಾಮ ನಾಯಕ, ಪ್ರಕಾಶ್ ಹಾಗೂ ಶಿವರಾಜ್ ನಡುವೆ ಅಗ್ರಿಮೆಂಟ್ ಮಾಡಿಕೊಳ್ಳಲಾಗಿದ್ದು, ಪ್ರಕಾಶ್ ಹಾಗೂ ಶಿವರಾಜ್ ಜೆಡಿಎಸ್ ಅಭ್ಯರ್ಥಿ ಪರ ಮತ್ತು ಜಯರಾಮ ನಾಯ್ಕ ಕಾಂಗ್ರೆಸ್ ಅಭ್ಯರ್ಥಿ ಪರ ತಲಾ 5 ಲಕ್ಷ ಬೆಟ್ಟಿಂಗ್ ಕಟ್ಟಿ ಅಗ್ರಿಮೆಂಟ್ ಮಾಡಿಕೊಂಡಿದ್ದಾರೆ. ಇಬ್ಬರ 10 ಲಕ್ಷ ಹಣವನ್ನ ಪೂಜಾ ಎಲೆಕ್ಟ್ರಾನಿಕ್ ಅಂಗಡಿ ಮಾಲೀಕ ನೇಮಿಚಂದ್ ಬಳಿ ನೀಡಲಾಗಿರುವ ಬಗ್ಗೆ ಉಲ್ಲೇಖವಾಗಿದ್ದು, ಒಂದು ವೇಳೆ ಬಿಜೆಪಿ ಗೆದ್ದರೆ ಇಬ್ಬರು ಹಣ ವಾಪಸ್ಸು ಪಡೆಯುವ ಬಗ್ಗೆ ಒಪ್ಪಂದ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:Karnataka Assembly Elections 2023: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ದಾಖಲೆ: ಶೇಕಡಾ 73.19ರಷ್ಟು ಮತದಾನ
ಮೈಸೂರಿನಲ್ಲಿ ಮುಂದುವರಿದ ಬೆಟ್ಟಿಂಗ್ ಭರಾಟೆ; ಕಾಂಗ್ರೆಸ್ ಮುಖಂಡನಿಂದ 1 ಎಕರೆ 37 ಗುಂಟೆ ಜಮೀನು ಬೆಟ್ಟಿಂಗ್
ಮೈಸೂರು: ನಗರದಲ್ಲಿ ಬೆಟ್ಟಿಂಗ್ ಭರಾಟೆ ಮುಂದುವರೆದಿದೆ. ಕಾಂಗ್ರೆಸ್ ಮುಖಂಡ ಜಮೀನು ಬೆಟ್ಟಿಂಗ್ ಸವಾಲು ಹಾಕಿದ್ದಾನೆ. ಹೌದು ಪಿರಿಯಾಪಟ್ಟಣ ತಾಲ್ಲೂಕು ಹಾರನಹಳ್ಳಿ ಗ್ರಾಮದ ಯೋಗೇಶ್ ಗೌಡ ಎಂಬಾತ ಪಿರಿಯಾಪಟ್ಟಣ ಕೈ ಅಭ್ಯರ್ಥಿ ಕೆ ವೆಂಕಟೇಶ್ ಗೆಲ್ಲುತ್ತಾರೆ ಎಂದು ಬರೊಬ್ಬರಿ 1 ಎಕರೆ 37 ಗುಂಟೆ ಜಮೀನು ಕಟ್ಟುತ್ತೇನೆ ಯಾರು ಬೇಕಾದರೂ ಬರಬಹುದು. ಜೊತೆಗೆ ನನ್ನ ಹೆಂಡತಿ ಮಕ್ಕಳ ಸಹಿ ಹಾಕಿಸಿಕೊಟ್ಟು ಅಗ್ರಿಮೆಂಟ್ ಕೂಡ ಮಾಡಿಕೊಡುತ್ತೇನೆ ಎಂದು ಕೈ ಮುಖಂಡ ವಿಡಿಯೋ ಮೂಲಕ ಸವಾಲು ಹಾಕಿದ್ದಾರೆ.
ಇನ್ನಷ್ಟು ಚುನಾವಣಾ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ