ನಿಖರ ಫಲಿತಾಂಶ ನುಡಿದವರಿಗೆ 10 ಲಕ್ಷ ರೂ. ಬಹುಮಾನ, ಜ್ಯೋತಿಷಿಗಳಿಗೆ ಫಲಿತಾಂಶದ ಸವಾಲ್

224 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ಮುಗಿದಿದ್ದು, ನಾಳೆ (ಮೇ.13) ರಂದು ಮತ ಎಣಿಕೆ ಆರಂಭವಾಗಲಿದೆ. ಇದಕ್ಕೂ ಮುನ್ನ ಯಾವ ಜ್ಯೋತಿಷಿಗಳಿಗೆ ನಿಖರವಾದ ಫಲಿತಾಂಶ ಹೇಳುತ್ತಾರೆ ಅವರಿಗೆ ಮಂಗಳೂರಿಗೆ ವಿಚಾರವಾದಿಯೊಬ್ಬರು ಬಂಪರ್​ ಆಫರ್​​ ನೀಡಿದ್ದಾರೆ.

Follow us
ವಿವೇಕ ಬಿರಾದಾರ
|

Updated on:May 12, 2023 | 1:02 PM

ಮಂಗಳೂರು: 224 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ಮುಗಿದಿದ್ದು, ನಾಳೆ (ಮೇ.13) ರಂದು ಮತ ಎಣಿಕೆ ಆರಂಭವಾಗಲಿದೆ. ನಾಳೆ ಈ ಹೊತ್ತಿಗಾಗಲೇ ಒಂದು ಹಂತಕ್ಕೆ ಫಲಿತಾಂಶ ಪ್ರಕಟವಾಗಿರುತ್ತದೆ. ಈ ಹಿನ್ನೆಲೆ ಬಿಜೆಪಿ, ಕಾಂಗ್ರೆಸ್​ ಮತ್ತು ಜೆಡಿಎಸ್​​ ಪಕ್ಷಗಳು ಫಲಿತಾಂಶಕ್ಕಾಗಿ ತುದಿಗಾಲಿನಲ್ಲಿ ನಿಂತಿದ್ದು, ಸರ್ಕಾರ ರಚನೆಗಾಗಿ ಈಗಾಗಲೇ ಸಕಲ ಸಿದ್ದತೆಗಳನ್ನು ಮಾಡಿಕೊಂಡಿವೆ. ಈಗಾಗಲೇ ಸಮಾಜಿಕ ಜಾಲತಾಣಗಳಲ್ಲಿ ಜ್ಯೋತಿಷಿಗಳು ಯಾವ ಪಕ್ಷ ಪೂರ್ಣ ಬಹುಮತ ಪಡೆಯುತ್ತೆ ಎಂದು ಭವಿಷ್ಯ ಹೇಳುತ್ತಿದ್ದಾರೆ. ಇದನ್ನು ಕಂಡ ವಿಚಾರವಾದಿಯೊಬ್ಬರು ಜ್ಯೋತಿಷಿಗಳಿಗೆ ಬಂಪರ್​ ಆಫರ್​ ನೀಡಿದ್ದಾರೆ.

ಮಂಗಳೂರಿನ ವಿಚಾರವಾದಿ ಫ್ರೊ.ನರೇಂದ್ರ ನಾಯಕ್ ಯಾವ ಜ್ಯೋತಿಷಿ ನಿಖರವಾದ ಫಲಿತಾಂಶ ನುಡಿಯುತ್ತಾರೆ ಅವರಿಗೆ 10 ಲಕ್ಷ ರೂ. ಬಹುಮಾನ ನೀಡಲು ನಿರ್ಧರಿಸಿದ್ದಾರೆ. ಈಗಾಗಲೇ 20ಕ್ಕೂ ಹೆಚ್ಚು ಜ್ಯೋತಿಷಿಗಳು ಅಂಚೆ ಮೂಲಕ ಫಲಿತಾಂಶದ ಉತ್ತರ ಬರೆದು ಕಳುಹಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ನಲ್ಲಿ ಗರಿಗೆದರಿದ ‘ತಂತ್ರಗಾರಿಕೆ’:ಫಲಿತಾಂಶಕ್ಕೂ ಮುನ್ನವೇ ಪಕ್ಷೇತರರಿಗೆ ಜಗದೀಶ್ ಶೆಟ್ಟರ್ ಮೂಲಕ ಗಾಳ

ಈ ಬಗ್ಗೆ ಟಿವಿ9 ಪ್ರತಿನಿಧಿಯೊಂದಿಗೆ ಮಾತನಾಡಿದ ಫ್ರೊ.ನರೇಂದ್ರ ನಾಯಕ್ ಈ ಚುನಾವಣೆಗೆ ಸಂಬಂಧಿಸಿದಂತೆ 20 ಪ್ರಶ್ನೆಗಳನ್ನು ಕೇಳಿದ್ದೇನೆ. ಯಾವ ಪಕ್ಷಕ್ಕೆ ‌ಎಷ್ಟು ಸೀಟು ಬರುತ್ತೆ ಎಂದು ಹೇಳಬೇಕು. ಕೆಲವು ಅಭ್ಯರ್ಥಿಗಳ ಪಡೆಯುವ ಮತಗಳನ್ನೂ ಸರಿಯಾಗಿ ಹೇಳಬೇಕು. ಜ್ಯೋತಿಷಿಗಳಿಗೆ ಈ ಪಂಥದಲ್ಲಿ ಮೊದಲ ಪ್ರಾಶಸ್ತ್ಯ ನೀಡುತ್ತೇನೆ. 20 ರಲ್ಲಿ 19 ಪ್ರಶ್ನೆಗಳಿಗೆ ನಿಖರ ಉತ್ತರ ನೀಡಿದರೂ 10 ಲಕ್ಷ ರೂ. ಬಹುಮಾನ ನೀಡುತ್ತೇನೆ ಎಂದು ಹೇಳಿದ್ದಾರೆ.

ಜ್ಯೋತಿಷಿಗಳು ಮದುವೆ ಸೇರಿದಂತೆ ಇತರ ಬಗ್ಗೆ ಭವಿಷ್ಯ ಹೇಳುತ್ತಾರೆ. ಈ ಚುನಾವಣೆ ಬಗ್ಗೆ ನಿಖರ ಫಲಿತಾಂಶ ಹೇಳಲಿ ಎಂದು ಸವಾಲ್​ ಹಾಕಿದ್ದಾರೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:48 pm, Fri, 12 May 23