Karnataka Assembly Polls Result 2023: ಬೆಂಗಳೂರಿನ 28 ಕ್ಷೇತ್ರಗಳ ಮತ ಎಣಿಕಾ ಕೇಂದ್ರಗಳ ವಿವರ ಇಲ್ಲಿದೆ
ಬಿಬಿಎಂಪಿ ವ್ಯಾಪ್ತಿಯ 28 ಕ್ಷೇತ್ರಗಳಿಗೆ ನಾಳೆ ಬೆಳಗ್ಗೆ 8 ಗಂಟೆಯಿಂದ ಏಕಕಾಲಕ್ಕೆ ಮತ ಎಣಿಕೆ ಶುರುವಾಗಲಿದೆ. ಎಲ್ಲೆಲ್ಲಿ?ಯಾವ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ ಎನ್ನುವ ವಿವರ ಇಲ್ಲಿದೆ.
ಬೆಂಗಳೂರು: ಈ ಬಾರಿ ಕರ್ನಾಟಕದಲ್ಲಿ ದಾಖಲೆಯ ಶೇ.73.19ರಷ್ಟು ಮತದಾನವಾಗಿದೆ. ರಾಜ್ಯದ ಭವಿಷ್ಯವನ್ನ ನಿರ್ಧರಿಸುವ ವಿಧಾನಸಭೆ ಚುನಾವಣೆ ಫಲಿತಾಂಶ (Karnataka Assembly Election Result 2023) ನಾಳೆ (ಮೇ 13) ಪ್ರಕಟವಾಗಲಿದೆ. ಬೆಳಗ್ಗೆ 8 ಗಂಟೆಯಿಂದಲೇ ಮತ ಎಣಿಕೆ ಕಾರ್ಯ ಆರಂಭವಾಗಲಿದ್ದು, ಎಲ್ಲಾರಿ ರೀತಿಯ ಸಿದ್ಧತೆಗಳು ಮಾಡಿಕೊಳ್ಳ,ಲಾಗುತ್ತಿದೆ. ಇನ್ನು ನಾಳೆ ಮತ ಎಣಿಕೆಗೆ ಸಿಲಿಕಾನ್ ಸಿಟಿ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರದ ಮತ ಎಣಿಕೆಗೆ ತಯಾರಿ ನಡೆದಿದೆ. ಬಿಬಿಎಂಪಿ ವ್ಯಾಪ್ತಿಯ 8802 ಮತಗಟ್ಟೆಗಳಲ್ಲಿ ಮೇ 10ರಂದು ಮತದಾನ ನಡೆದಿತ್ತು. 28 ಕ್ಷೇತ್ರಗಳ 389 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಬಿಬಿಎಂಪಿ ವ್ಯಾಪ್ತಿಯ 28 ಕ್ಷೇತ್ರಗಳಿಗೆ ನಾಳೆ ಬೆಳಗ್ಗೆ 8 ಗಂಟೆಯಿಂದ ಏಕಕಾಲಕ್ಕೆ ಮತ ಎಣಿಕೆ ಶುರುವಾಗಲಿದೆ. ಎಲ್ಲೆಲ್ಲಿ?ಯಾವ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ ಎನ್ನುವ ವಿವರ ಇಲ್ಲಿದೆ.
1. ಬೆಂಗಳೂರು ಸೆಂಟ್ರಲ್ – BMS ಕಾಲೇಜ್ ಬಸವನಗುಡಿ
- RR ನಗರ
- ಶಿವಾಜಿನಗರ
- ಶಾಂತಿನಗರ
- ಗಾಂಧಿನಗರ
- ರಾಜಾಜಿನಗರ
- ಚಾಮರಾಜಪೇಟೆ
- ಚಿಕ್ಕಪೇಟೆ
2. ಬೆಂಗಳೂರು ದಕ್ಷಿಣ – SSMRV ಕಾಲೇಜ್ ಜಯನಗರ
- ಗೋವಿದರಾಜ್ ನಗರ
- ವಿಜಯನಗರ
- ಬಸವನಗುಡಿ
- ಪದ್ಮನಾಭನಗರ
- ಬಿಟಿಎಮ್ ಲೇಔಟ್
- ಜಯನಗರ
- ಬೊಮ್ಮನಹಳ್ಳಿ
3. ಬೆಂಗಳೂರು ಉತ್ತರ – ಮೌಂಟ್ ಕಾರ್ಮಲ್ ಕಾಲೇಜ್ ವಸಂತನಗರ
- ಕೆ ಅರ್ ಪುರಂ
- ಮಾಹಾಲಕ್ಷ್ಮಿ ಲೇಔಟ್
- ಮಲ್ಲೇಶ್ವರಂ
- ಹೆಬ್ಬಾಳ
- ಪುಲಕೇಶಿನಗರ
- ಸರ್ವಜ್ಞನಗರ
- ಸಿ ವಿ ರಾಮನ್ ನಗರ
4. ಬೆಂಗಳೂರು – ನಗರ ( Urabn) ಸೆಂಟ್ ಜೋಷಫ್ ಕಾಲೇಜ್ ವಿಟಲ್ ಮಲ್ಯಾ ರಸ್ತೆ
- ಯಲಹಂಕ
- ಬ್ಯಾಟರಾಯನಪುರ
- ಯಶವಂತಪುರ
- ದಾಸರಹಳ್ಳಿ
- ಮಾಹದೇವಪುರ
- ಬೆಂಗಳೂರು ದಕ್ಷಿಣ
- ಆನೆಕಲ್
ರಾಜ್ಯದ ಮತ್ತಷ್ಟು ಸುದ್ದಿ ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:46 am, Fri, 12 May 23