AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಲಭೆಗ್ರಸ್ಥ ಶಿವಮೊಗ್ಗದಲ್ಲಿ ನೆಮ್ಮದಿ ಇಲ್ಲದ ಬದುಕು, ಮನೆ ಬಿಟ್ಟು ರಸ್ತೆಯಲ್ಲಿ ದೀಪಾವಳಿ ಆಚರಿಸಿ ಸಂಭ್ರಮಿಸಿದ ಪೊಲೀಸರು

Shivamogga Police: ಟ್ರಾಫಿಕ್ ಠಾಣೆ ಇನ್ಸ್ಪೆಕ್ಟರ್ ಸಂತೋಷ್ ಕುಮಾರ್ ನೇತೃತ್ವದಲ್ಲಿ ದೀಪಾವಳಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಶಿವಮೊಗ್ಗದ ಶಿವಪ್ಪನಾಯಕ ವೃತ್ತದಲ್ಲಿ ಹಣತೆ ಬೆಳಗಿಸಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ ಪೊಲೀಸರು.

ಗಲಭೆಗ್ರಸ್ಥ ಶಿವಮೊಗ್ಗದಲ್ಲಿ ನೆಮ್ಮದಿ ಇಲ್ಲದ ಬದುಕು, ಮನೆ ಬಿಟ್ಟು ರಸ್ತೆಯಲ್ಲಿ ದೀಪಾವಳಿ ಆಚರಿಸಿ ಸಂಭ್ರಮಿಸಿದ ಪೊಲೀಸರು
ಶಿವಮೊಗ್ಗದ ಪೊಲೀಸರಿಂದ ರಸ್ತೆಯಲ್ಲಿ ದೀಪಾವಳಿ ಆಚರಣೆ
TV9 Web
| Edited By: |

Updated on: Oct 27, 2022 | 6:25 PM

Share

ಶಿವಮೊಗ್ಗ: ಗಲಭೆಗ್ರಸ್ಥ ಶಿವಮೊಗ್ಗದಲ್ಲಿ ನೆಮ್ಮದಿ ಇಲ್ಲದ ಬದುಕು ಸಾಗಿಸುತ್ತಿದ್ದಾರೆ ಪೊಲೀಸರು. ಕಳೆದ 1 ವರ್ಷದಿಂದ ಪೊಲೀಸರ ನೆಮ್ಮದಿಯನ್ನೇ ಕಿತ್ತುಕೊಂಡಿರುವ ಶಿವಮೊಗ್ಗದ ಕ್ರೈಂ ಘಟನೆಗಳು ಹಾಗಿವೆ. ರಾಷ್ಟ್ರಾದ್ಯಂತ ಸದ್ದು ಮಾಡಿದ್ದ ಶಿವಮೊಗ್ಗದಲ್ಲಿ ನಡೆದಿದ್ದ ಹಲವು ಘಟನೆಗಳು, ಜನಾಕ್ರೋಶ ಸಹಿಸಿಕೊಂಡು, ಹಗಲಿರುಳು ಕೆಲಸ ಮಾಡುತ್ತಿರುವ ಶಿವಮೊಗ್ಗ ಪೊಲೀಸರ ಪರಿಸ್ಥಿತಿ ಇದಾಗಿದೆ. ಇದೀಗ ಮನೆ ಬಿಟ್ಟು ನಡುರಸ್ತೆಯಲ್ಲಿ ದೀಪಾವಳಿ ಆಚರಿಸಿ, ಸಂಭ್ರಮಿಸಿದ್ದಾರೆ ಪೊಲೀಸರು.

ಶಿವಮೊಗ್ಗದ ಪೊಲೀಸರಿಂದ ರಸ್ತೆಯಲ್ಲಿ ದೀಪಾವಳಿ ಆಚರಣೆ:

ಟ್ರಾಫಿಕ್ ಠಾಣೆ ಇನ್ಸ್ಪೆಕ್ಟರ್ ಸಂತೋಷ್ ಕುಮಾರ್ ನೇತೃತ್ವದಲ್ಲಿ ದೀಪಾವಳಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಶಿವಮೊಗ್ಗದ ಶಿವಪ್ಪನಾಯಕ ವೃತ್ತದಲ್ಲಿ ಹಣತೆ ಬೆಳಗಿಸಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ ಪೊಲೀಸರು. ದೀಪಾವಳಿ ಸಂಭ್ರಮದಲ್ಲಿ ಖುದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಭಾಗಿಯಾದರು. ಸ್ವತಃ ತಾವೂ ಹಣತೆ ಹಚ್ಚಿ, ಸಿಬ್ಬಂದಿಗೆ ಹಬ್ಬದ ಶುಭಾಶಯ ತಿಳಿಸಿದರು ಎಸ್ಪಿ ಮಿಥುನ್ ಕುಮಾರ್. ಪೊಲೀಸ್ ಇಲಾಖೆಯಲ್ಲಿ 24 ಗಂಟೆಯೂ ಡ್ಯೂಟಿ ಇರುತ್ತೆ. ನಮ್ಮ ಸಿಬ್ಬಂದಿ ಪೈಕಿ ಯಾರಿಗೂ ಮನೆಗೆ ಹೋಗಲು ಆಗಿಲ್ಲ. ದೀಪಾವಳಿಯ ಖುಷಿ ನಮಗೂ ಇದೆ. ರಸ್ತೆಯಲ್ಲಿಯೇ ಹಬ್ಬ ಆಚರಿಸಿದ್ದೇವೆ ಎಂದು ಎಸ್ಪಿ ಮಿಥುನ್ ಕುಮಾರ್ ಈ ಸಂದರ್ಭದಲ್ಲಿ ಹೇಳಿದರು.

ಶಿವಮೊಗ್ಗ ನಗರದಲ್ಲಿ 4 ಅಹಿತಕರ ಘಟನೆಗಳು ನಡೆದಿವೆ

ಶಿವಮೊಗ್ಗ ನಗರದಲ್ಲಿ 4 ಅಹಿತಕರ ಘಟನೆಗಳು ನಡೆದಿವೆ. ಹಳೆಯ ದ್ವೇಷದ ಹಿನ್ನೆಲೆ ಪ್ರಕಾಶ್​ ಎಂಬಾತನ ಮೇಲೆ ಹಲ್ಲೆ ನಡೆದಿದೆ. ಮೊನ್ನೆ ಸೀಗೆಹಟ್ಟಿ ವೃತ್ತದಲ್ಲಿ 2 ಬೈಕ್​ನಲ್ಲಿ ಐವರ ತಂಡ ಬಂದಿತ್ತು. ಈ ವೇಳೆ ಪ್ರವೀಣ್​ ಎಂಬಾತನಿಗೆ ನಿಂದಿಸಿ ತೆರಳಿದ್ದಾರೆ. ನಂತರ ಮೂವರೂ ಕ್ಲಾರ್ಕ್​ಪೇಟೆಗೆ ಬೈಕ್​ನಲ್ಲಿ ಬಂದಿದ್ದಾರೆ. ಅಲ್ಲಿ ಪ್ರಕಾಶ್ ಎಂಬಾತನ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡಿದ ಫೌಜಾನ್​​, ಅಜ್ಗರ್​​, ಫರಾಜ್ ನನ್ನು ಬಂಧಿಸಲಾಗಿದೆ. ಈ ಹಿಂದೆ ಪ್ರವೀಣ್​, ಫೌಜಾನ್​ ನಡುವೆ ವಾಗ್ವಾದ ಆಗಿತ್ತು. ಈ ವೇಳೆ ಫೌಜಾನ್​ಗೆ ಪ್ರವೀಣ್​, ಪ್ರಕಾಶ್ ರೇಗಿಸಿದ್ದ ಆರೋಪವಿದೆ. ಇದಕ್ಕೆ ಪ್ರತಿಯಾಗಿ ಪ್ರಕಾಶ್ ಮೇಲೆ ಫಜಾನ್ ತಂಡದಿಂದ ಹಲ್ಲೆಯಾಗಿದೆ ಎಂದು ಶಿವಮೊಗ್ಗದಲ್ಲಿ ಎಸ್​​ಪಿ ಮಿಥುನ್ ಕುಮಾರ್ ಹೇಳಿದರು.

ಅದೇ ದಿನ‌ ವೆಂಕಟೇಶ್ ನಗರದಲ್ಲಿ ವಿಜಯ್ ಎಂಬಾತನ ಹತ್ಯೆ ಆಗಿದೆ. ಅಂದು ರಾತ್ರಿ ಕಾಂತಾರ ಚಿತ್ರ ನೋಡಿ ಮನೆಗೆ ಬಂದಿದ್ದ ವಿಜಯ್. ಆಸ್ಪತ್ರೆಗೆ ಹೋಗಿ ಬರುವುದಾಗಿ ಹೊರ ಹೋಗಿದ್ದಾಗ ವಿಜಯ್ ಕೊಲೆಯಾಗಿದೆ. ನಾಲ್ವರ ತಂಡ ವಿಜಯ್​ನನ್ನು ಅಡ್ಡಗಟ್ಟಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಜಬಿ ಎಂಬುವನು ವಿಜಯ್​ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಈ ಸಂಬಂಧ ಜಬಿ, ದರ್ಶನ್​, ಕಟ್ಟೆ ಕಾರ್ತಿಕ್​​ ನನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಸ್ಥಳ ಮಹಜರಿಗೆ ಕರೆದೊಯ್ದ ಪೊಲೀಸರ ಮೇಲೂ ಹಲ್ಲೆಗೆ ಯತ್ನಿಸಲಾಗಿದೆ. ಇನ್ಸ್​ಪೆಕ್ಟರ್​ ಮತ್ತು ಪೊಲೀಸ್​ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಆರೋಪಿ ಜಬಿ ಸಿಪಿಐ ದೀಪಕ್​ ಕಣ್ಣಿಗೆ ಮಣ್ಣು ಎರಚಿ ಪರಾರಿಗೆ ಯತ್ನಿಸಿದ್ದ.

ಹರ್ಷ ಸೋದರಿ ಅಶ್ವಿನಿ ಮನೆಗೆ ಭದ್ರತೆ:

ಹರ್ಷ ಸೋದರಿ ಅಶ್ವಿನಿ ಮನೆಗೆ ಭದ್ರತೆ ನಿಯೋಜಿಸಲಾಗಿದೆ. 15 ದಿನಗಳಲ್ಲಿ ಗಾಂಜಾ ಪ್ರಕರಣದಡಿ 41 ಜನರನ್ನ ಬಂಧಿಸಲಾಗಿದೆ. ಜನರಿಗೆ ರಕ್ಷಣೆ ನೀಡುವುದು ಪೊಲೀಸರ ಜವಾಬ್ದಾರಿ ಎಂದು ಎಸ್​​ಪಿ ಮಿಥುನ್ ಕುಮಾರ್ ಹೇಳಿದ್ದಾರೆ.