ದಲಿತ ಅತಿಥಿ ಉಪನ್ಯಾಸಕಿಗೆ ಪ್ರಾಂಶುಪಾಲನಿಂದ ಲೈಂಗಿಕ ಕಿರುಕುಳ ಆರೋಪ: ಸಂತ್ರಸ್ತೆ ಹೇಳಿದ್ದೇನು?

ಭದ್ರಾವತಿಯ ಎನ್​ಇಎಸ್ ಶಿಕ್ಷಣ ಸಂಸ್ಥೆಯಲ್ಲಿ ದಲಿತ ಅತಿಥಿ ಉಪನ್ಯಾಸಕಿಗೆ ಪ್ರಾಂಶುಪಾಲ ಶ್ರೀಪಾದ್ ಹೆಗಡೆಯಿಂದ ಲೈಂಗಿಕ ಕಿರುಕುಳ ಮತ್ತು ಜಾತಿ ನಿಂದನೆ ಆರೋಪ ಕೇಳಿಬಂದಿದೆ. ಸಂತ್ರಸ್ತೆ ದೂರು ನೀಡಿದರೂ ಆರೋಪಿಯನ್ನು ಬಂಧಿಸಿಲ್ಲ. ಆಡಳಿತ ಮಂಡಳಿ ಕ್ರಮ ಕೈಗೊಂಡಿಲ್ಲ, ಬದಲಿಗೆ ಸಂತ್ರಸ್ತೆಯನ್ನೇ ಕೆಲಸದಿಂದ ತೆಗೆದುಹಾಕಿರುವ ಬಗ್ಗೆ ದೂರಲಾಗಿದೆ.

ದಲಿತ ಅತಿಥಿ ಉಪನ್ಯಾಸಕಿಗೆ ಪ್ರಾಂಶುಪಾಲನಿಂದ ಲೈಂಗಿಕ ಕಿರುಕುಳ ಆರೋಪ: ಸಂತ್ರಸ್ತೆ ಹೇಳಿದ್ದೇನು?
ಸಾಂದರ್ಭಿಕ ಚಿತ್ರ
Edited By:

Updated on: Jan 13, 2026 | 3:29 PM

ಶಿವಮೊಗ್ಗ, ಜನವರಿ 13: ಭದ್ರಾವತಿಯ ಎನ್​ಇಎಸ್ ಶಿಕ್ಷಣ ಸಂಸ್ಥೆಯಲ್ಲಿ ದಲಿತ ಅತಿಥಿ ಉಪನ್ಯಾಸಕಿಗೆ ಪ್ರಾಂಶುಪಾಲನೇ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಶ್ರೀಪಾದ್ ಹೆಗಡೆ ವಿರುದ್ಧ ಸಂತ್ರಸ್ತೆ ಜಾತಿ ನಿಂದನೆ ಆರೋಪವನ್ನೂ ಮಾಡಿದ್ದು, ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಅನೇಕ ಮಹನೀಯರ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆಂದೇ ಸ್ಥಾಪಿಸಿರುವ ರಾಷ್ಟ್ರೀಯ ಶಿಕ್ಷಣ ಸಮಿತಿ ಶಿಕ್ಷಣ ಸಂಸ್ಥೆಯಲ್ಲೇ ಇಂತಹ ಆರೋಪ ಕೇಳಿಬಂದಿರೋದು ಜನ ಹುಬ್ಬೇರಿಸುವಂತೆ ಮಾಡಿದೆ.

ಸಂತ್ರಸ್ತ ಉಪನ್ಯಾಸಕಿ ಆರೋಪವೇನು?

ಕಾರಿನಲ್ಲಿ ಕರೆದುಕೊಂಡು ಹೋಗುವಾಗ ತನ್ನ ಮೇಲೆ ಪ್ರಾಂಶುಪಾಲ ಶ್ರೀಪಾದ್ ಹೆಗಡೆ ಲೈಂಗಿಕ ದೌರ್ಜನ್ಯ ಯತ್ನ ನಡೆಸಿದ್ದಾರೆ. ನಿಮ್ಮ ಜಾತಿಯಲ್ಲಿ ಅನೈತಿಕ ಸಂಬಂಧ ಇಟ್ಟುಕೊಳ್ಳುತ್ತಾರೆ. ನಿಮ್ಮ ಜಾತಿಯಲ್ಲಿ ಇವೆಲ್ಲಾ ಮಾಮೂಲಿಯಾಗಿದ್ದು ನನ್ನ ಜೊತೆ ಚೆನ್ನಾಗಿರಿ ಎಂದು ದೌರ್ಜನ್ಯ ನಡೆಸಿದ್ದಾರೆ. ನಿನ್ನ ಗಂಡ ಇಲ್ಲದಿದ್ದರೆ ನನ್ನನ್ನು ಕರಿ ಎಂದು ಹೇಳಿರೋದಾಗಿ ಅತಿಥಿ ಉಪನ್ಯಾಸಕಿ ಗಂಭೀರ ಆರೋಪ ಮಾಡಿದ್ದಾರೆ. ಅದೇ ಕಾಲೇಜಿನ ಇಬ್ಬರು ಮಹಿಳಾ ಸಿಬ್ಬಂದಿ ವಿರುದ್ಧವೂ ಕ್ಷುಲ್ಲಕ ಕಾರಣಕ್ಕೆ ಜಾತಿ ನಿಂದನೆ ಆರೋಪವನ್ನು ಸಂತ್ರಸ್ತೆ ಮಾಡಿದ್ದಾರೆ.

ಇದನ್ನೂ ಓದಿ: ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ; ಮತ್ತೆ ದರೋಡೆ ಮಾಡಿ ಲಾಕ್​​ ಆದ ಗ್ಯಾಂಗ್

‘ಪ್ರಕರಣ ದಾಖಲಿಸಿ 21 ದಿನಗಳಾದ್ರೂ ಕ್ರಮವಿಲ್ಲ’

ಘಟನೆ ಬಗ್ಗೆ ಸಂತ್ರಸ್ತೆ ಪ್ರಕರಣ ದಾಖಲಿಸಿ 21 ದಿನಗಳು ಕಳೆದರೂ ಆರೋಪಿ ಪ್ರಾಂಶುಪಾಲನನ್ನು ಬಂಧಿಸಿಲ್ಲ. ಸಂಸ್ಥೆಯ ಆಡಳಿತ ಮಂಡಳಿಯೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ ಸಂಸ್ಥೆಯಿಂದ ತನ್ನನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ಸಂತ್ರಸ್ತ ಉಪನ್ಯಾಸಕಿ ಅಲವತ್ತುಕೊಂಡಿದ್ದಾರೆ. ಆರೋಪಿ ಪ್ರಾಂಶುಪಾಲ ಶ್ರೀಪಾದ್ ಹೆಗಡೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.