FIR: ಕುಂಕುಮ ಹಚ್ಚಿಕೊಂಡಿದ್ದ ಪ್ರೇಮ್​ ಸಿಂಗ್ ಹಿಂದೂ ಎಂದು ಗೊತ್ತಾಗುತ್ತಿದ್ದಂತೆ ಹಲ್ಲೆಗೆ ಮುಂದಾಗಿದ್ದಾರೆ- ಶಿವಮೊಗ್ಗ ಪೊಲೀಸರು

| Updated By: ಸಾಧು ಶ್ರೀನಾಥ್​

Updated on: Aug 16, 2022 | 4:58 PM

Shivamogga Police: ಕುಂಕುಮ ಹಚ್ಚಿಕೊಂಡಿದ್ದ ಪ್ರೇಮ್ ​ಸಿಂಗ್​ ಹಿಂದೂ ಎಂದು ಗೊತ್ತಾಗುತ್ತಿದ್ದಂತೆ ಹಲ್ಲೆಗೆ ಮುಂದಾಗುತ್ತಾರೆ. ಎಂಕೆಕೆ ರೋಡ್​ನಿಂದ​​ 150 ಅಡಿ ದೂರದ ಉಪ್ಪಾರಕೆರೆ ಬೀದಿಯಲ್ಲಿ ಅಟ್ಯಾಕ್​ ಮಾಡುತ್ತಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಮಾಹಿತಿ ದಾಖಲಿಸಲಾಗಿದೆ. ನಗರದಲ್ಲಿ ಅಶಾಂತಿ ಸೃಷ್ಟಿಸುವ ನಿಟ್ಟಿನಲ್ಲಿ ಈ ಘಟನೆ ನಡೆಸಿರುವ ಮಾಹಿತಿಯಿದೆ.

FIR: ಕುಂಕುಮ ಹಚ್ಚಿಕೊಂಡಿದ್ದ ಪ್ರೇಮ್​ ಸಿಂಗ್ ಹಿಂದೂ ಎಂದು ಗೊತ್ತಾಗುತ್ತಿದ್ದಂತೆ ಹಲ್ಲೆಗೆ ಮುಂದಾಗಿದ್ದಾರೆ- ಶಿವಮೊಗ್ಗ ಪೊಲೀಸರು
ಕುಂಕುಮ ಹಚ್ಚಿಕೊಂಡಿದ್ದ ಪ್ರೇಮ್​ ಸಿಂಗ್ ಹಿಂದೂ ಎಂದು ಗೊತ್ತಾಗುತ್ತಿದ್ದಂತೆ ಹಲ್ಲೆಗೆ ಮುಂದಾಗಿದ್ದಾರೆ- ಶಿವಮೊಗ್ಗ ಪೊಲೀಸರು
Follow us on

ವೀರ್ ಸಾವರ್ಕರ್​ ಭಾವಚಿತ್ರ ವಿರೋಧಿ ಗಲಾಟೆ ವೇಳೆ ನಿನ್ನೆ ಸ್ವಾತಂತ್ರ್ಯದ ದಿನದಂದು ಶಿವಮೊಗ್ಗದಲ್ಲಿ ಪ್ರೇಮ್​ ಸಿಂಗ್ ಎಂಬ ಯುವಕನ ಮೇಲೆ ಅನ್ಯ ಕೋಮಿನ ಯುವಕರು ಚೂರಿಯಿಂದ ತಿವಿದಿದ್ದರು. ಇದೀಗ ಪ್ರೇಮ್​ ಸಿಂಗ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದು, ಹಲ್ಲೆ ನಡೆಸಿರುವ ಆರೋಪಿಗಳನ್ನು ಶಿವಮೊಗ್ಗ ಪೊಲೀಸರು (Shivamogga Police) ತಕ್ಷಣ ಅರೆಸ್ಟ್ ಮಾಡಿದ್ದಾರೆ. ಈ ಮಧ್ಯೆ ಪ್ರಕರಣದ ಬಗ್ಗೆ ಪೊಲೀಸರು ಪ್ರಾಥಮಿಕ ತನಿಖೆಯ ಮಾಹಿತಿ ಸಲ್ಲಿಸಿದ್ದು ಅದರ ವಿವರ ಕೆಳಗಿನಂತಿದೆ.

ಹಲ್ಲೆಗೀಡಾದ ಯುವಕ ಪ್ರೇಮ್ ​ಸಿಂಗ್​ (20) ರಾಜ್ಯಸ್ಥಾನ ಮೂಲದವನು. ಉದ್ಯೋಗ – ನಂದಿ ಸೀಲ್ಕ್​ ಸಾರಿ ಅಂಗಡಿಯಲ್ಲಿ ಕೆಲಸ. ಶಿವಮೊಗ್ಗಕ್ಕೆ ಒಂದೂವರೆ ವರ್ಷದ ಹಿಂದೆ ಬಂದಿದ್ದಾನೆ. ಶರವಣ-ಪ್ರೇಮ್​ ಸಿಂಗ್ ಇಬ್ಬರೂ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಶರವಣ ಎಂಬಾತ ಹಲ್ಲೆ ವೇಳೆ ಗಾಯಗೊಂಡ ಮತ್ತೊಬ್ಬ ವ್ಯಕ್ತಿ. ಇವರಿಬ್ಬರೂ.. ಅಂಗಡಿ ಬಂದ್​ ಮಾಡಿ, ಗಲಾಟೆ ನೋಡೊಕೆ ಹೋಗಿರ್ತಾರೆ.

ಆ ವೇಳೆ ಅಮಿರ್ ಅಹ್ಮದ್​ ಸರ್ಕಲ್​​ನಲ್ಲಿ ಗುಂಪುಗಳ ನಡುವೆ ಗಲಾಟೆ ನಡೆಯುತ್ತಿತ್ತು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಪೊಲೀಸರು ಲಾಠಿ ಜಾರ್ಚ್ ಮಾಡಿದರು. ಆಗ ಅಲ್ಲಿದ್ದ ಗುಂಪೊಂದು ಅಲ್ಲಿಂದ ಓಡ್ತಾ.. ಎಂಕೆಕೆ ರಸ್ತೆ ಕಡೆ ಬಂದರು. ವೃತದಿಂದ ಜನರು ಓಡ್ತಾ ಎಂಕೆಕೆ ರಸ್ತೆ ಕಡೆ ಬರುತ್ತಿರುತ್ತಾರೆ. ಅದೇ ವೇಳೆ ಪ್ರೇಮ್ ​ಸಿಂಗ್​ ಮತ್ತು ಶರವಣ ಕೂಡಾ ಓಡ್ತಾಯಿರುತ್ತಾರೆ. ಕುಂಕುಮ ಹಚ್ಚಿಕೊಂಡಿದ್ದ ಪ್ರೇಮ್ ​ಸಿಂಗ್​ ಹಿಂದೂ ಎಂದು ಗೊತ್ತಾಗುತ್ತಿದ್ದಂತೆ ಹಲ್ಲೆಗೆ ಮುಂದಾಗುತ್ತಾರೆ. ಎಂಕೆಕೆ ರೋಡ್​ನಿಂದ​​ 150 ಅಡಿ ದೂರದ ಉಪ್ಪಾರಕೆರೆ ಬೀದಿಯಲ್ಲಿ ಅಟ್ಯಾಕ್​ ಮಾಡುತ್ತಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಮಾಹಿತಿ ದಾಖಲಿಸಲಾಗಿದೆ. ನಗರದಲ್ಲಿ ಅಶಾಂತಿ ಸೃಷ್ಟಿಸುವ ನಿಟ್ಟಿನಲ್ಲಿ ಈ ಘಟನೆ ನಡೆಸಿರುವ ಮಾಹಿತಿಯಿದೆ.

ಇನ್ನು ಘಟನೆ ಬಗ್ಗೆ ಟಿವಿ9 ಪ್ರತ್ಯಕ್ಷದರ್ಶಿ ಹೇಳಿಕೆ

ಶಿವಮೊಗ್ಗದಲ್ಲಿ ನಡೆದ ಚಾಕು ಇರಿತ ಘಟನೆ ಬಗ್ಗೆ ಟಿವಿ 9 ಗೆ ಪ್ರತ್ಯಕ್ಷದರ್ಶಿ ನೀಡಿರುವ ಹೇಳಿಕೆ ಹೀಗಿದೆ: ಸವರಣ್ ಹಾಗೂ ಸಿಂಗ್ ಇಬ್ಬರೂ ಒಂದೇ ಕಡೆ ಕೆಲಸ ಮಾಡುತ್ತಿದ್ರು. ಮೊದಲು ಸರ್ಕಲ್​ನಲ್ಲಿ ಗಲಾಟೆ ನಡೆಯುತ್ತದೆ. ಅದನ್ನ ನೋಡಲು ಇಬ್ರೂ ಹೋಗಿದ್ರು. ನಂತರ ಅಲ್ಲಿ.. ಅಂಗಡಿಯನ್ನು ಬಂದ್ ಮಾಡಿ ಅಂತಾ ಹೇಳುತ್ತಿದ್ದರು. 3 ಗಂಟೆ ಹೊತ್ತಿಗೆ ಅಮೀರ್ ಅಹಮ್ಮದ್​ ಸರ್ಕಲ್​ನಲ್ಲಿ ನೋಡಲು ಹೋಗಿದ್ರು. ಗಲಾಟೆ ಆಗುತ್ತಿದ್ದಂತೆ ಅಂಗಡಿ ಬಂದ್ ಮಾಡಿ ಅಂತ ಅಂಗಡಿಯ ಮಾಲೀಕರು ಹೇಳುತ್ತಿದ್ರು. ಇವರು ಅಲ್ಲಿಂದ ತರಕಾರಿ ಅಂಗಡಿಗೆ ದಾರಿಯಲ್ಲಿ ಹೋಗುತ್ತಿದ್ರು. 8 ರಿಂದ 10 ಜನ ಹುಡುಗರು ನಿಂತಿದ್ರು. ಅಲ್ಲಿ ಮೊದಲಿಗೆ ಸರವಣ್​​ಗೆ ಹಲ್ಲೆ ಮಾಡಲು ಬಂದರು. ಸರವಣ್​ ಮುಂದೆ ಓಡಿಹೋಗುತ್ತಾನೆ, ನಂತರ ಪ್ರೇಮ್​ ಸಿಂಗ್​ಗೆ ಹೊಡೆಯುತ್ತಾರೆ ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ.

ಚಾಕು ಇರಿತ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಗೃಹ ಖಾತೆ ಸಚಿವ ಆರಗ ಜ್ಞಾನೇಂದ್ರ ಶಿವಮೊಗ್ಗದಲ್ಲಿ ಹೇಳಿದ್ದಾರೆ. ಆರೋಪಿಗಳನ್ನು ಬಂಧಿಸಲು ತೆರಳಿದ್ದ ವೇಳೆ ಹಲ್ಲೆಗೆ ಪ್ರಯತ್ನ ನಡೆದಿದೆ. ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಿಗೆ ಗುಂಡೇಟು ಹೊಡೆಯಲಾಗಿದೆ. ಆರೋಪಿ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದಾರೆ. ಎಡಿಜಿಪಿ ಅಲೋಕ್​ ಕುಮಾರ್​ ನೇತೃತ್ವದಲ್ಲಿ ಬಿಗಿ ಭದ್ರತೆ ಹಾಕಲಾಗಿದೆ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಹಳೆಯ ಹಲ್ಲೆ ಪ್ರಕರಣ: ಆರೋಪಿ ಮುಬಾರಕ್ ನನ್ನು ಬಂಧಿಸಿದ ಹಳೆ ನಗರ ಠಾಣೆ ಪೊಲೀಸರು

ಶಿವಮೊಗ್ಗ: ಭಜರಂಗದಳದ ಕಾರ್ಯಕರ್ತ ಸುನಿಲ್ ಮೇಲೆ, ಈ ಹಿಂದೆ ನಡೆದಿದ್ದ ಹಲ್ಲೆ ಪ್ರಕರಣದ ಸಂಬಂಧ ಪ್ರಮುಖ ಆರೋಪಿ ಮುಬಾರಕ್ ನನ್ನು ಹಳೆ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮುಬಾರಕ್ ಹಳೆಯ ಪ್ರಕರಣದಲ್ಲಿ, ಹಲ್ಲೆ ಮಾಡಿ ತಲೆ ಮರೆಸಿಕೊಂಡಿದ್ದ. ಈ ಹಿಂದೆ ಸಹ ಹಲವು ಪ್ರಕರಣಗಳಲ್ಲಿ ಮುಬಾರಕ್ ಆರೋಪಿಯಾಗಿದ್ದ. ನಾಲ್ಕು ದಿನದ ಹಿಂದೆ ಜಾಮೀನಿನ ಮೇಲೆ ಜೈಲಿನಿಂದ ಹೊರ ಬಂದಿದ್ದ.

ಶಿವಮೊಗ್ಗ- ಭದ್ರಾವತಿ: ದ್ವಿಚಕ್ರ ವಾಹನದಲ್ಲಿ ಒಬ್ಬರಿಗೆ ಮಾತ್ರ ಅವಕಾಶ:

ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ನಿನ್ನೆ ನಡೆದ ಘರ್ಷಣೆ, ಚಾಕು ಇರಿತ ಪ್ರಕರಣದ ಬಳಿಕ ಎರಡೂ ಕಡೆ ನಿಷೇಧಾಜ್ಞೆ ಜಾರಿಯಾಗಿದೆ. ಶಿವಮೊಗ್ಗ, ಭದ್ರಾವತಿಯಲ್ಲಿ ಅಘೋಷಿತ ಬಂದ್ ವಾತಾವರಣ ನೆಲೆಸಿದೆ. ಅಗತ್ಯ ವಸ್ತುಗಳ ಮಳಿಗೆ ಹೊರತುಪಡಿಸಿ ಇತರೆ ಅಂಗಡಿಗಳು ಬಂದ್ ಆಗಿವೆ. ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್​ ಹಾಕಲಾಗಿದೆ. ಪ್ರಮುಖ ವೃತ್ತಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ದ್ವಿಚಕ್ರ ವಾಹನಗಳಲ್ಲಿ ಒಬ್ಬರು ಮಾತ್ರ ಓಡಾಡಲು ಅವಕಾಶ ನೀಡಲಾಗಿದೆ.

ಜಿಲ್ಲಾಧಿಕಾರಿ ಡಿಸಿ ಶಿವಕುಮಾರ್ ಆದೇಶ ಮೇರೆಗೆ ಸೆಕ್ಷನ್144 ಜಾರಿ..

ಶಿವಮೊಗ್ಗ ನಗರ ಹಾಗೂ ಭದ್ರಾವತಿ ನಗರ ವ್ಯಾಪ್ತಿಯಲ್ಲಿ ಶಾಂತಿ‌ ಮತ್ತು ಸುವ್ಯವಸ್ಥೆ ಕಾಪಾಡಲು ಮುನ್ನೆಚ್ಚರಿಕೆ ವಹಿಸಲಾಗಿದೆ. ಅಬಕಾರಿ‌ ಉಪ ಆಯುಕ್ತರ ಕ್ಯಾಪ್ಟನ್ ಅಜಿತ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಶಿವಮೊಗ್ಗ ಉಪವಿಭಾಗ, ಶಿವಮೊಗ್ಗ ವಲಯ 1 ಮತ್ತು 2, ಜಿಲ್ಲಾ ವಿಚಕ್ಷಣ ದಳ ಜೊತೆಗೆ ಭದ್ರಾವತಿ ವಲಯ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ‌ ಶಿವಮೊಗ್ಗ, ಭದ್ರಾವತಿ ನಗರ ವ್ಯಾಪ್ತಿಯ ಎಲ್ಲಾ ತರಹದ ಸನ್ನದುಗಳ ಮೇಲೆ ನಿಗಾ ಹಾಕಲಾಗಿದೆ. ಅವು ‌ಮುಚ್ಚಿರುವುದನ್ನು ದೃಢಪಡಿಸಿಕೊಳ್ಳುತ್ತಾ, ರಸ್ತೆಗಾವಲು ನಡೆಸಿ, ಗಸ್ತು (ಪಟ್ರೊಲಿಂಗ್) ನಡೆಸಲಾಗುತ್ತಿದೆ.

ಮೆಹಕ್ ಷರೀಫ್​, ಕಾಂಗ್ರೆಸ್​ ಕಾಪೋರ್ರೆಟರ್ ಟಿವಿ9ಗೆ ಹೇಳಿಕೆ:

ಮಾಲ್​​ನಲ್ಲಿ ವೀರ್ ಸಾವರ್ಕರ್​ ಪೋಟೋ ದೊಡ್ಡದಾಗಿತ್ತು. ಅದಕ್ಕೆ ನನ್ನ ಗಂಡ ಅದನ್ನ ಮಾಲ್​ನಲ್ಲಿ ಪ್ರಶ್ನಿಸಿದರು ಎಂದಿರುವ ಮೆಹಕ್ ಷರೀಫ್ ಅವರು ನಮಗೆ PFI ಹಾಗೂ SDPI ಬಗ್ಗೆ ಯಾವುದೇ ಸಂಬಂಧ ಇಲ್ಲ. ನನ್ನನ್ನು ಕಾಂಗ್ರೆಸ್ ಪಕ್ಷದವರು​ ಗುರುತಿಸಿ, ನನಗೆ ಒಂದು ಸ್ಥಾನ ನೀಡಿದ್ದಾರೆ. ನನ್ನ ಗಂಡ 20 ವರ್ಷದ ಹಿಂದೆ ಜನಪರ ಹೋರಾಟದಲ್ಲಿ ಇದ್ದವರು. ನಾವು ಯಾವುದೇ ತಪ್ಪು ಕೆಲಸ ಮಾಡಿಲ್ಲ ಎಂದು ಅಲವತ್ತುಕೊಂಡಿದ್ದಾರೆ.

Published On - 2:48 pm, Tue, 16 August 22