Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಮೊಗ್ಗ: ಕೆ.ಎಸ್. ಈಶ್ವರಪ್ಪ ಕ್ಷೇತ್ರದ ರಾಗಿಗುಡ್ಡದಲ್ಲಿ ತಲೆಯೆತ್ತಲಿದೆ 15 ಕೋಟಿ ವೆಚ್ಚದ ಬೃಹತ್ 108 ಅಡಿ ಶಿವಲಿಂಗ ದೇಗುಲ, ಆದರೆ ವಿವಾದ ಬೆನ್ನು ಹತ್ತಿದೆ! ಏನದು?

KS Eshwarappa: ಒಂದಡೆ ವಿರೋಧ ಶುರುವಾಗುತ್ತಿದ್ದರೂ ಮಾಜಿ ಸಚಿವ ಈಶ್ವರಪ್ಪ ಅವರು ಮಾತ್ರ ತಲೆಕೆಡಿಸಿಕೊಂಡಿಲ್ಲ. ನಗರದಲ್ಲಿ ಒಂದು ಅತ್ಯುತ್ತಮ ಪ್ರವಾಸಿ ತಾಣದ ಜೊತೆಗೆ ಧಾರ್ಮಿಕ ಕ್ಷೇತ್ರದ 15 ಕೋಟಿ ಯೋಜನೆಗೆ ಮುಂದಾಗಿದ್ದಾರೆ.

ಶಿವಮೊಗ್ಗ: ಕೆ.ಎಸ್. ಈಶ್ವರಪ್ಪ ಕ್ಷೇತ್ರದ ರಾಗಿಗುಡ್ಡದಲ್ಲಿ ತಲೆಯೆತ್ತಲಿದೆ 15 ಕೋಟಿ ವೆಚ್ಚದ ಬೃಹತ್ 108 ಅಡಿ ಶಿವಲಿಂಗ ದೇಗುಲ, ಆದರೆ ವಿವಾದ ಬೆನ್ನು ಹತ್ತಿದೆ! ಏನದು?
ಈಶ್ವರಪ್ಪ ಕ್ಷೇತ್ರದ ರಾಗಿಗುಡ್ಡದಲ್ಲಿ ತಲೆಯೆತ್ತಲಿದೆ 15 ಕೋಟಿ ವೆಚ್ಚದ ಬೃಹತ್ 108 ಅಡಿ ಶಿವಲಿಂಗ ದೇಗುಲ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Mar 02, 2023 | 7:10 AM

ಇನ್ನೇನು ಅಸೆಂಬ್ಲಿ ಚುನಾವಣೆ ಕೆಲವೇ ತಿಂಗಳು ಬಾಕಿಯಿದೆ. ಈ ನಡುವೆ ಸರಕಾರ ಹೊಸ ಹೊಸ ಯೋಜನೆಗಳನ್ನು ಘೋಷಣೆ ಮಾಡುತ್ತಲೇ ಇದೆ. ಈ ನಡುವೆ ಶಿವಮೊಗ್ಗದ (shivamogga) ರಾಗಿಗುಡ್ಡದಲ್ಲಿ 15 ಕೋಟಿ ವೆಚ್ಚದಲ್ಲಿ ನೂತನ ಯೋಜನೆಗೆ ಮೊನ್ನೆ ತಾನೆ ಮುಖ್ಯಮಂತ್ರಿ ಬೊಮ್ಮಾಯಿ (basavaraj bommai) ಚಾಲನೆ ನೀಡಿದ್ದಾರೆ. ಆದರೆ ಯೋಜನೆಗೆ ವಿವಾದ ಅಂಟಿಕೊಂಡಿದೆ. ಈ ಕುರಿತು ಒಂದು ವರದಿ ಇಲ್ಲಿದೆ. ಶಿವಮೊಗ್ಗ ತಾಲೂಕಿನ ಹೊರವಲಯದ ರಾಗಿಗುಡ್ಡದಲ್ಲಿ ಸುಮಾರು ಐದು ಎಕರೆ ಪ್ರದೇಶದಲ್ಲಿ 15 ಕೋಟಿ ವೆಚ್ಚದಲ್ಲಿ ನೂತನ ಯೋಜನೆಗೆ ಸಿಎಂ ಬೊಮ್ಮಾಯಿ ಕಳೆದ ತಿಂಗಳು ಚಾಲನೆ ನೀಡಿದ್ದರು. ಈ ಜಾಗವು ಕಂದಾಯ, ಅರಣ್ಯ ಯಾವ ಇಲಾಖೆಗೆ ಸೇರಿದ್ದು ಎನ್ನುವ ಸರಿಯಾದ ದಾಖಲೆಗಳಿಲ್ಲ. ಈ ಜಾಗದಲ್ಲಿ ದಶಕಗಳಿಂದ ಈ ರಾಗಿಗುಡ್ಡದಲ್ಲಿ ಬ್ರಹ್ಮ ವಿಷ್ಣು ಮಹೇಶ್ವರ ಸೇರಿದಂತೆ ಹಲವು ದೇವಾಲಗಳಿದ್ದವು. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಹಳೆಯ ದೇಗುಲವನ್ನು ನೆಲಸಮಗೊಲಿಸಿ ಅಲ್ಲಿ ಮುರುಡೇಶ್ವರ ಮಾದರಿಯಲ್ಲಿ ಬೃಹತ್ 108 ಅಡಿ ಎತ್ತರದ ಶಿವಲಿಂಗ ಮೂರ್ತಿ ಪ್ರತಿಷ್ಠಾಪನೆಗೆ ಮುಂದಾಗಿದ್ದಾರೆ (ragigudda temple project). ಇದರ ಸುತ್ತಲು ವಿವಿಧ ದೇವಸ್ಥಾನಗಳ ನಿರ್ಮಿಸುವ ಯೋಜನೆ ಇದಾಗಿದೆ.

ಶಿವಮೊಗ್ಗ ನಗರ ಕ್ಷೇತ್ರ ವ್ಯಾಪ್ತಿಗೆ ಬರುವುದರಿಂದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ (ks eshwarappa) ಅವರು ಹೊಸ ಯೋಜನೆಯ ಮೂಲಕ ನಗರದ ಜನರಿಗೆ ಒಂದು ಧಾರ್ಮಿಕ ಮತ್ತು ಪ್ರವಾಸಿ ತಾಣದ ಅಭಿವೃದ್ದಿಗೆ ಮುಂದಾಗಿದ್ದರು. ಸದ್ಯ ಈ ಯೋಜನೆಗೆ ದಶಕಗಳಿಂದ ಆ ಜಾಗದಲ್ಲಿ ವಾಸವಾಗಿದ್ದು, ಬ್ರಹ್ಮ ವಿಷ್ಣು ಮಹೇಶ್ವರ ಸೇರಿದಂತೆ ಇತರೆ ದೇವಸ್ಥಾನಗಳ ನಿರ್ಮಾಣ ಮಾಡಿ ಪೂಜೆ ಸಲ್ಲಿಸುತ್ತಾ ಬಂದಿದ್ದ ವೀರದಾಸರ ಕುಟುಂಬಸ್ಥರು. ಪ್ರಸ್ತುತ ವೀರದಾಸರು ಮೃತಪಟ್ಟಿದ್ದಾರೆ. ಇವರ ಕುಟುಂಬಸ್ಥರೇ ದಶಕಗಳಿಂದ ದೇವಸ್ಥಾನದ ಆವರಣದಲ್ಲೇ ವಾಸವಿದ್ದು, ಈ ದೇವಸ್ಥಾನದ ಎಲ್ಲ ಜವಾಬ್ದಾರಿ, ಪೂಜೆ ಮತ್ತು ಜಾತ್ರೆಗಳನ್ನು ನಿರ್ವಹಣೆ ಮಾಡುತ್ತಿದ್ದರು.

ಗಜೇಂದ್ರ, ರಾಘವೇಂದ್ರ, ಮಲ್ಲೇಶ್ವರಪ್ಪ ಮತ್ತು ಕುಟುಂಬಸ್ಥರಿಂದ ಬ್ರಹ್ಮ, ವಿಷ್ಣು ಮಹೇಶ್ವರ ಟ್ರಸ್ಟ್ ಮಾಡಿಕೊಂಡಿದ್ದಾರೆ. ಈ ಯೋಜನೆಗೆ ಸದ್ಯ ವಿವಾದವು ಶುರುವಾಗಿದೆ. ಈ ಟ್ರಸ್ಟ್ ಮತ್ತು ಕುಟುಂಬಕ್ಕೆ ಸೇರಿದ್ದ ಜಾಗದಲ್ಲಿ ಸರಕಾರವು ಬಲವಂತದಿಂದ ಸರಕಾರದ ಯೋಜನೆ ಮಾಡಲು ಹೊರಟಿದೆ. ಈ ಹಿನ್ನೆಲೆಯಲ್ಲಿ ಯೋಜನೆಯ ವಿರುದ್ದ ಶಿವಮೊಗ್ಗ ಜಿಲ್ಲಾ ನ್ಯಾಯಾಲಯಕ್ಕೆ ಹೋಗಿ ಫೆಬ್ರವರಿ 10 ರಂದು ಸ್ಟೇ ಕೂಡಾ ತಂದಿದ್ದಾರೆ. ಅದಾದ ಮೇಲೆ ಕಾಮಗಾರಿ ಸ್ಥಗಿತಗೊಂಡಿದೆ. ಪ್ರವಾಸೋದ್ಯಮ ಇಲಾಖೆಯಿಂದ ಈ ಯೋಜನೆಯನ್ನು ಅಭಿವೃದ್ದಿ ಪಡಿಸಲಾಗುತ್ತಿದೆ. ಸದ್ಯ ಈ ಯೋಜನೆಗೆ ಹಳೆ ದೇವಸ್ಥಾನದ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.

ಒಂದಡೆ ವಿರೋಧ ಶುರುವಾಗುತ್ತಿದ್ದರೂ ಮಾಜಿ ಸಚಿವ ಈಶ್ವರಪ್ಪ ಅವರು ಮಾತ್ರ ತಲೆಕೆಡಿಸಿಕೊಂಡಿಲ್ಲ. ನಗರದಲ್ಲಿ ಒಂದು ಅತ್ಯುತ್ತಮ ಪ್ರವಾಸಿ ತಾಣದ ಜೊತೆಗೆ ಧಾರ್ಮಿಕ ಕ್ಷೇತ್ರದ 15 ಕೋಟಿ ಯೋಜನೆಗೆ ಮುಂದಾಗಿದ್ದಾರೆ. ಈ ಮೂಲಕ ಪ್ರವಾಸಿಗರಿರನ್ನು ಮತ್ತು ನಗರದ ಜನರನ್ನು ಸೆಳೆಯಲು ಮಾಜಿ ಸಚಿವ ನಗರ ಕ್ಷೇತ್ರದ ಶಾಸಕ ಕೆ.ಎಸ್ ಈಶ್ವರಪ್ಪ ಅವರು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ.

ಸಿಎಂ ಚಾಲನೆ ಬಳಿಕ ಸದ್ಯ ಕಾಮಗಾರಿಯೂ ಆರಂಭಗೊಂಡಿತ್ತು. ಆದ್ರೆ ಕೋರ್ಟ್ ಸ್ಟೇ ನೀಡಿದ ಬಳಿಕ ಕಾಮಗಾರಿ ಸ್ಥಗಿತಗೊಂಡಿದೆ. ಈಗಾಗಲೇ ಹಳೆಯ ದೇವಸ್ಥಾನವನ್ನು ಜೆಸಿಬಿ ಮೂಲಕ ನೆಲಸಮಗೊಳಿಸಲಾಗಿದೆ. ಬ್ರಹ್ಮ ವಿಷ್ಣ ಮತ್ತು ಮಹೇಶ್ವರ ವಿಗ್ರಹಗಳನ್ನು ಪಕ್ಕದ ಪುಟ್ಟ ದೇಗುಲದಲ್ಲಿ ಇಡಲಾಗಿದೆ. ಶಿವಮೊಗ್ಗ ನಗರ ವ್ಯಾಪ್ತಿಗೆ ಬರುವ ರಾಗಿಗುಡ್ಡದಲ್ಲಿ 450 ಎಕೆರೆ ಕಂದಾಯ ಮತ್ತು ಅರಣ್ಯ ಇಲಾಖೆಗೆ ಸೇರಿತ್ತು.

ಹಂತ ಹಂತವಾಗಿ ಈ ಜಮೀನು ಒತ್ತುವರಿ ಒಂದೆಡೆಯಾದ್ರೆ, ಮತ್ತೊಂದೆಡೆ ವಿವಿಧ ಸರಕಾರಿ ಇಲಾಖೆಯ ಕಟ್ಟಡಗಳಿಗೆ ಜಮೀನನ್ನು ಜಿಲ್ಲಾಡಳಿತ ನೀಡಿದೆ. ಈ ನಡುವೆ ಸುಂದರ ಪರಿಸರದಲ್ಲಿ ಈಗ ಮತ್ತೊಂದು ಹೊಸ ಯೋಜನೆ. ಈ ನಡುವೆ ಯೋಜನೆಗೆ ವಿರೋಧ ಮತ್ತು ವಿವಾದ ಶುರುವಾಗಿದೆ. ಈ ಯೋಜನೆಯ ಕುರಿತು ಮಾಜಿ ಸಚಿವ, ನಗರ ಶಾಸಕ ಈಶ್ವರಪ್ಪ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ರಾಗಿಗುಡ್ಡದಂತ ಸೂಕ್ಷ್ಮ ಪ್ರದೇಶದಲ್ಲಿ ನೂತನ ಯೋಜನೆಗೆ ಸರಕಾರವು ಮುಂದಾಗಿತ್ತು. ಮುರುಡೇಶ್ವರ ಮಾದರಿಯಲ್ಲೇ ಬೃಹತ್ ಶಿವಲಿಂಗ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೆ ಕೋಟಿ ಕೋಟಿ ವೆಚ್ಚದ ಯೋಜನೆಗೆ ಮುಂದಾಗಿತ್ತು. ಆದ್ರೆ ನೂತನ ಯೋಜನೆಗೆ ಸದ್ಯ ನೂರೆಂಟು ವಿಘ್ನಗಳು ಎದುರಾಗಿವೆ. ಈ ವಿವಾದವು ಮುಂದೆ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

ವರದಿ: ಬಸವರಾಜ್ ಯರಗಣವಿ, ಟಿವಿ9, ಶಿವಮೊಗ್ಗ