ಶಿವಮೊಗ್ಗ: ರೈಲಿನಲ್ಲಿ ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದು ಮಹಿಳೆಯನ್ನು ರೈಲ್ವೆ ಸಿಬ್ಬಂದಿ ರಕ್ಷಿಸಿರುವ ಘಟನೆ ಸಾಗರ ತಾಲೂಕಿನ ತಾಳಗುಪ್ಪ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ನಿವೇದಿತಾ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ.
ನಿವೇದಿತಾ ನಿಂತಿರುವ ರೈಲಿನಲ್ಲಿ ನೇಣು ಹಾಕಿ ಕೊಂಡು ಆತ್ಮಹತ್ಯೆಗೆ ಮಾಡಿಕೊಳ್ಳುತ್ತಿದ್ದರು. ಈ ವೇಳೆ ರೈಲ್ವೆ ಸಿಬ್ಬಂದಿಗಳ ಸಮಯಪ್ರಜ್ಞೆಯಿಂದಾಗಿ ಮಹಿಳೆ ಬದುಕುಳಿದಿದ್ದಾರೆ. ಎರಡು ಮಕ್ಕಳನ್ನು ರೈಲಿನಲ್ಲಿ ಬಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದ್ದು ನಿಖರ ಕಾರಣ ತಿಳಿದು ಬಂದಿಲ್ಲ. ತಾಳಗುಪ್ಪ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮೈಸೂರಿನಲ್ಲಿ 4 ವರ್ಷದ ಹೆತ್ತ ಮಗನನ್ನೇ ಕೊಚ್ಚಿ ಕೊಲೆಗೈದ ತಾಯಿ!
ಮೈಸೂರು: ತಾಯಿ ಹೆತ್ತ ಮಗನನ್ನೇ ಕೊಚ್ಚಿ ಕೊಲೆಗೈದ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಬೂದನೂರು ಗ್ರಾಮದಲ್ಲಿ ನಡೆದಿದೆ. ತಾಯಿ ಭವಾನಿ ಮಾನಸಿಕ ಅಸ್ವಸ್ಥರಾಗಿದ್ದು, 4 ವರ್ಷದ ಶ್ರೀನಿವಾಸ್ ಎಂಬ ಮಗನನ್ನು ಮಚ್ಚಿನಿಂದ ಕೊಚ್ಚಿ ಹತ್ಯೆಗೈದಿದ್ದಾಳೆ. ಪತಿ ಶಂಕರ್ ಮನೆಯಲ್ಲಿ ಇಲ್ಲದಿದ್ದಾಗ ಭವಾನಿ ಈ ಕೃತ್ಯ ಎಸಗಿದ್ದಾಳೆ ಎಂದು ತಿಳಿದುಬಂದಿದೆ. ಸದ್ಯ ಎಚ್.ಡಿ.ಕೋಟೆ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.
ಬೂದನೂರಿನ ಶಂಕರ್ ಜೊತೆ 5 ವರ್ಷದ ಹಿಂದೆ ಭವಾನಿ ಮದುವೆ ಆಗಿತ್ತು. ಭವಾನಿ ಮೈ ಮೇಲೆ ದೇವರು ಬರುತ್ತೆ ಅನ್ನುತ್ತಿದ್ದಳು. ಇತ್ತೀಚೆಗೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಭವಾನಿ, ಗಂಡನೊಂದಿಗೆ ಗಲಾಟೆ ಮಾಡಿಕೊಂಡು ಮಗು ಸಹಿತ ತವರು ಮನೆ ಸೇರಿದ್ದಳು. ಪತಿ ಶಂಕರ್ ಸಮಾಧಾನಪಡಿಸಿ ವಾಪಸ್ಸು ಕರೆತಂದಿದ್ದರು.
ಕೆಲಸದ ನಿಮಿತ್ತ ಪತಿ ಹೊರಗಡೆ ಹೋಗಿದ್ದಾಗ ತನ್ನ ಮಗುವನ್ನ ತಾಯಿ ಭವಾನಿ ಕೊಲೆ ಮಾಡಿದ್ದಾಳೆ. ಮಚ್ಚಿನಿಂದ ತಲೆಗೆ ನಾಲ್ಕೈದು ಬಾರಿ ಹೊಡೆದಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆ ಪತಿ ಶಂಕರ್ ಗ್ರಾಮಸ್ಥರ ನೆರವಿನಿಂದ ಎಚ್.ಡಿ.ಕೋಟೆಯ ತಾಲೂಕು ಆಸ್ಪತ್ರೆಗೆ ಮಗುವನ್ನು ಸೇರಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಶ್ರೀನಿವಾಸ್ ಮೃತಪಟ್ಟಿದೆ.
ಇದನ್ನೂ ಓದಿ: Chris Morris retirement: ಎಲ್ಲ ಮಾದರಿಯ ಅಂತರರಾಷ್ಟ್ರೀಯ ಕ್ರಿಕೆಟ್ಗೆ ದಿಢಿರ್ ವಿದಾಯ ಹೇಳಿದ ಕ್ರಿಸ್ ಮೋರಿಸ್