Chris Morris retirement: ಎಲ್ಲ ಮಾದರಿಯ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ದಿಢಿರ್ ವಿದಾಯ ಹೇಳಿದ ಕ್ರಿಸ್ ಮೋರಿಸ್

Chris Morris: ಇಂದು ನಾನು ನನ್ನ ಎಲ್ಲ ಮಾದರಿಯ ಅಂತರರಾಷ್ಟ್ರೀಯ ಕ್ರಿಕೆಟ್​ನಿಂದ ಹಿಂದೆ ಸರಿಯುತ್ತಿದ್ದೇನೆ. ನನ್ನ ಈ ಪಯಣದಲ್ಲಿ ನನಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದು ಕ್ರಿಸ್ ಮೋರಿಸ್ ಹೇಳಿದ್ದಾರೆ.

Chris Morris retirement: ಎಲ್ಲ ಮಾದರಿಯ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ದಿಢಿರ್ ವಿದಾಯ ಹೇಳಿದ ಕ್ರಿಸ್ ಮೋರಿಸ್
Chris Morris retirement

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಪ್ರಮುಖ ಅನುಭವಿ ಆಲ್ರೌಂಡರ್ ಕ್ರಿಸ್ ಮೋರಿಸ್ (Chris Morris) ಎಲ್ಲ ಮಾದರಿಯ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ದಿಢೀರ್ ವಿದಾಯ ಘೋಷಿಸಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಖಚಿತ ಪಡಿಸಿರುವ ಇವರು, “ಇಂದು ನಾನು ನನ್ನ ಎಲ್ಲ ಮಾದರಿಯ ಅಂತರರಾಷ್ಟ್ರೀಯ ಕ್ರಿಕೆಟ್​ನಿಂದ ಹಿಂದೆ ಸರಿಯುತ್ತಿದ್ದೇನೆ. ನನ್ನ ಈ ಪಯಣದಲ್ಲಿ ನನಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ಇದೊಂದು ಫನ್ ರೈಡ್ ಆಗಿತ್ತು. ಟೈಟಾನ್ಸ್ ಕ್ರಿಕೆಟ್​ನ ಕೋಚ್ ಆಗಿ ಇನ್ನುಮುಂದೆ ಕಾರ್ಯನಿರ್ವಹಿಸಲು ಖುಷಿಯಾಗಿದ್ದೇನೆ” ಎಂದು ಬರೆದುಕೊಂಡಿದ್ದಾರೆ. ಐಪಿಎಲ್​ನಲ್ಲಿ ಐಪಿಎಲ್ 13ನೇ ಆವೃತ್ತಿಯಲ್ಲಿ ಇವರು ರಾಯಲ್ ಚಾಲೆಂಜರ್ಸ್​ ಬೆಂಗಳೂರು (RCB) ಪರ ಆಡಿದ್ದರು. 2020 ರಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆದ ಆಟಗಾರ ಇವರಾಗಿದ್ದರು. 2021 ಐಪಿಎಲ್​ನಲ್ಲಿ ಇವರು ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿದಿದ್ದರು.

42 ಏಕದಿನ ಪಂದ್ಯಗಳನ್ನು ಆಡಿರುವ ಮೋರಿಸ್ 468 ರನ್ ಗಳಿಸಿ 48 ವಿಕೆಟ್ ಕಬಳಿಸಿದ್ದರು. 23 ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 133 ರನ್ ಗಳಿಸಿ 34 ವಿಕೆಟ್ ಪಡೆದುಕೊಂಡಿದ್ದಾರೆ. 81 ಐಪಿಎಲ್ ಪಂದ್ಯಗಳಲ್ಲಿ 95 ವಿಕೆಟ್ ಕಿತ್ತಿದ್ದು 618 ರನ್ ಸಿಡಿಸಿದ್ದಾರೆ. ಆಫ್ರಿಕಾ ಪರ 4 ಟೆಸ್ಟ್​ ಪಂದ್ಯಗಳನ್ನೂ ಇವರು ಆಡಿದ್ದಾರೆ. 173 ರನ್ ಗಳಿಸಿ 12 ವಿಕೆಟ್ ಪಡೆದುಕೊಂಡಿದ್ದಾರೆ.

View this post on Instagram

A post shared by Chris Morris (@tipo_morris)

2012 ರಲ್ಲಿ ಇವರು ನ್ಯೂಜಿಲೆಂಡ್ ವಿರುದ್ಧ ಟಿ20 ಪಂದ್ಯವನ್ನು ಆಡುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಬಳಿಕ 2013 ರಲ್ಲಿ ಏಕದಿನ ಮತ್ತು 2016 ರಲ್ಲಿ ಟೆಸ್ಟ್​ಗೆ ಕ್ರಿಕೆಟ್​ಗೆ ಕಾಲಿಟ್ಟರು. ಇವರ ಕಡೆಯಿಂದ ಅನೇಕ ಮ್ಯಾಚ್ ವಿನ್ನಿಂಗ್ ಪ್ರದರ್ಶನ ಕೂಡ ಮೂಡಿಬಂದಿದೆ. ಟಿ20 ಕ್ರಿಕೆಟ್​ಗೆ ಇವರು ಹೇಳಿಮಾಡಿಸಿದ ಆಟಗಾರನಾಗಿದ್ದರು. ಆದರೆ, ಕಳೆದ ಟಿ20 ವಿಶ್ವಕಪ್​ನಲ್ಲಿ ಇವರಿಗೆ ಸ್ಥಾನ ಸಿಗಲಿಲ್ಲ.

Published On - 1:10 pm, Tue, 11 January 22

Click on your DTH Provider to Add TV9 Kannada