South Africa vs India: ಮೂರನೇ ಟೆಸ್ಟ್​ನಿಂದ ರಿಷಭ್ ಪಂತ್ ಔಟ್?: ಕುತೂಹಲ ಮೂಡಿಸಿದ ಸಾಹ ಟ್ವಿಟ್ಟರ್ ಪೋಸ್ಟ್

India's predicted XI vs South Africa, 3rd Test: 3ನೇ ಹಾಗೂ ಅಂತಿಮ ಟೆಸ್ಟ್‌ ಇಂದಿನಿಂದ ಕೇಪ್‌ ಟೌನ್‌ ಕ್ರೀಡಾಂಗಣದಲ್ಲಿ ಶುರುವಾಗಲಿದ್ದು, ಎಲ್ಲರ ಕಣ್ಣು ಈ ಟೆಸ್ಟ್‌ ಮೇಲಿದೆ. ಭಾರತ ತಂಡದ ಪಾಲಿಗೆ ಅತ್ಯಂತ ಮಹತ್ವದ ಟೆಸ್ಟ್‌ ಪಂದ್ಯ ಇದಾಗಿದ್ದು, ಈ ಸಲುವಾಗಿ ತನ್ನ ಆಡುವ ಹನ್ನೊಂದರ ಬಳಗದಲ್ಲಿ ಪ್ರಮುಖ ಬದಲಾವಣೆ ಮಾಡುವ ಸಾಧ್ಯತೆ ಇದೆ.

South Africa vs India: ಮೂರನೇ ಟೆಸ್ಟ್​ನಿಂದ ರಿಷಭ್ ಪಂತ್ ಔಟ್?: ಕುತೂಹಲ ಮೂಡಿಸಿದ ಸಾಹ ಟ್ವಿಟ್ಟರ್ ಪೋಸ್ಟ್
Rishabh Pant and wriddhiman saha
Follow us
TV9 Web
| Updated By: Vinay Bhat

Updated on: Jan 11, 2022 | 10:34 AM

ಹರಿಣಗಳ ನಾಡಿನಲ್ಲಿ ಇದುವರೆಗೆ ಒಂದೇ ಒಂದು ಟೆಸ್ಟ್ ಸರಣಿ ಗೆಲ್ಲದ ಭಾರತ (India) ತಂಡ ಇದೀಗ ಇತಿಹಾಸ ನಿರ್ಮಿಸುವ ಹೊಸ್ತಿಲಲ್ಲಿದೆ. ದಕ್ಷಿಣ ಆಫ್ರಿಕಾ (India vs South Africa) ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿ ಪೈಕಿ ಸೆಂಚೂರಿಯನ್​ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) 113 ರನ್​ಗಳ ಜಯ ಸಾಧಿಸಿ ಐತಿಹಾಸಿಕ ಸಾಧನೆ ಮಾಡಿದರೆ, ಜೋಹಾನ್ಸ್​ಬರ್ಗ್​​ನಲ್ಲಿ ನಡೆದ ಎರಡನೇ ಟೆಸ್ಟ್​ ಪಂದ್ಯದಲ್ಲಿ ಸೌತ್ ಆಫ್ರಿಕಾ 7 ವಿಕೆಟ್​ಗಳ ಗೆಲುವು ಕಂಡಿತು. ಹೀಗಾಗಿ ಉಭಯ ತಂಡಗಳು ಸರಣಿಯಲ್ಲಿ 1-1 ಅಂತರದ ಸಮಬಲ ಸಾಧಿಸಿದೆ. ಸದ್ಯ ಮೂರನೇ ಟೆಸ್ಟ್​ ಪಂದ್ಯದ ಮೇಲೆ ಸರಣಿ ಗೆಲುವಿನ ಲೆಕ್ಕಾಚಾರ ನಿಂತಿದೆ. 3ನೇ ಹಾಗೂ ಅಂತಿಮ ಟೆಸ್ಟ್‌ ಇಂದಿನಿಂದ ಕೇಪ್‌ ಟೌನ್‌ (Cape Town Test) ಕ್ರೀಡಾಂಗಣದಲ್ಲಿ ಶುರುವಾಗಲಿದ್ದು, ಎಲ್ಲರ ಕಣ್ಣು ಈ ಟೆಸ್ಟ್‌ ಮೇಲಿದೆ. ಭಾರತ ತಂಡದ ಪಾಲಿಗೆ ಅತ್ಯಂತ ಮಹತ್ವದ ಟೆಸ್ಟ್‌ ಪಂದ್ಯ ಇದಾಗಿದ್ದು, ಈ ಸಲುವಾಗಿ ತನ್ನ ಆಡುವ ಹನ್ನೊಂದರ ಬಳಗದಲ್ಲಿ (India Playing XI) ಪ್ರಮುಖ ಬದಲಾವಣೆ ಮಾಡುವ ಸಾಧ್ಯತೆ ಇದೆ.

ಬೆನ್ನುನೋವು ಇದ್ದ ಕಾರಣಕ್ಕೆ ನಾಯಕ ವಿರಾಟ್ ಕೊಹ್ಲಿ, ಜೋಹಾನ್ಸ್‌ಬರ್ಗ್‌ನಲ್ಲಿ ನಡೆದಿದ್ದ ಸರಣಿಯ ಎರಡನೇ ಪಂದ್ಯದಲ್ಲಿ ಆಡಿರಲಿಲ್ಲ. ಆದರೀಗ ಇವರು ಗುಣಮುಖರಾಗಿದ್ದಾರೆ. ನೆಟ್​ನಲ್ಲಿ ಭರ್ಜರಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದು ಪತ್ರಿಕಾಗೋಷ್ಠಿಯಲ್ಲಿ ಲಭ್ಯವಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಹನುಮಾ ವಿಹಾರಿ ಆಡುವ ಬಳಗದಿಂದ ಹೊರಗುಳಿಯಲಿದ್ದಾರೆ. ಮೊಹಮ್ಮದ್ ಸಿರಾಜ್ ಇಂಜುರಿಯಿಂದ ಗುಣಮುಖರಾಗದ ಕಾರಣ ಇವರ ಮೂರನೇ ಟೆಸ್ಟ್​ನಿಂದ ಹೊರಬಿದ್ದಿದ್ದಾರೆ.

ಓಪನರ್​ಗಳಾಗಿ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಕಣಕ್ಕಿಳಿಯುವುದು ಖಚಿತ. ಹಿರಿಯ ಅನುಭವಿ ಆಟಗಾರರು ಎಂಬ ಕಾರಣಕ್ಕೆ ಚೇತೇಶ್ವರ್ ಪೂಜಾರಗೆ ಮತ್ತೊಂದು ಅವಕಾಶ ನೀಡುವ ಸಾಧ್ಯತೆ ಹೆಚ್ಚಿದೆ. ನಾಯಕ ವಿರಾಟ್ ಕೊಹ್ಲಿ 4ನೇ ಕ್ರಮಾಂಕದಲ್ಲಿ ಆಡಿದರೆ ಅಜಿಂಕ್ಯಾ ರಹಾನೆ ಐದನೇ ಸ್ಥಾನದಲ್ಲಿ ಬ್ಯಾಟ್ ಬೀಸಲಿದ್ದಾರೆ. ಇತ್ತ ಹನುಮಾ ವಿಹಾರಿ ಬೆಂಚ್ ಕಾಯಬೇಕಿದೆ.

ರಿಷಭ್ ಪಂತ್ ಬ್ಯಾಟ್​ನಿಂದ ನಿರೀಕ್ಷೆಗೆ ತಕ್ಕಂತೆ ಆಟ ಬರುತ್ತಿಲ್ಲ. ಇವರ ಶಾಟ್ ಸೆಲೆಕ್ಷನ್ ಬಗ್ಗೆ ಸಾಕಷ್ಟು ಮಾತುಗಳು ಕೇಳಿಬರುತ್ತಿವೆ. ಕೋಚ್ ಕೂಡ ಈ ಬಗ್ಗೆ ಮಾತನಾಡುವುದಾಗಿ ಹೇಳಿದ್ದಾರೆ. ಹೀಗಾಗಿ ಇವರಿಗೆ ಇನ್ನೊಂದು ಅವಕಾಶ ನೀಡ್ತಾರ ಎಂಬುದು ಕುತೂಹಲ. ಇದರ ನಡುವೆ ವೃದ್ದಿಮಾನ್ ಸಾಹ ಕೂಡ ಬ್ಯಾಟಿಂಗ್- ಕೀಪಿಂಗ್ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸಾಹ ಪ್ರ್ಯಾಕ್ಟೀಸ್ ನಡೆಸುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ಹೀಗಾಗಿ ಪಂತ್ ಕೈಬಿಟ್ಟು ಇವರನ್ನು ಆಯ್ಕೆ ಮಾಡಿದರೆ ಅಚ್ಚರಿ ಪಡಬೇಕಿಲ್ಲ.

ಕೇಪ್ ಟೌನ್ ಸ್ಪಿನ್ನರ್​ಗಳಿಗೆ ಹೇಳಿ ಮಾಡಿಸಿದ ಪಿಚ್ ಅಲ್ಲದಿದ್ದರೂ ಆರ್. ಅಶ್ವಿನ್ ಬ್ಯಾಟಿಂಗ್​ನಲ್ಲಿ ಅತ್ಯುತ್ತಮ ಕೊಡುಗೆ ನೀಡುತ್ತಿದ್ದಾರೆ. ಶಾರ್ದೂಲ್ ಠಾಕೂರ್ ಆಲ್ರೌಂಡರ್ ಪ್ರದರ್ಶನ ಇನ್ನಷ್ಟು ತಂಡಕ್ಕೆ ಸಹಕಾರಿ ಆಗಬೇಕಿದೆ. ಮೊಹಮ್ಮದ್ ಶಮಿ ಹಾಗೂ ಜಸ್​ಪ್ರೀತ್ ಬುಮ್ರಾ ತಂಡದ ಪ್ರಮುಖ ಕೀ ಆಟಗಾರರಾಗಿದ್ದಾರೆ. ಸಿರಾಜ್ ಬದಲು ಇಶಾಂತ್ ಶರ್ಮಾ ಅಥವಾ ಉಮೇಶ್ ಯಾದವ್ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ.

ಭಾರತದ ಸಂಭಾವ್ಯ ಪ್ಲೇಯಿಂಗ್ XI: ಕೆಎಲ್ ರಾಹುಲ್ (ಉಪ ನಾಯಕ), ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್/ ವೃದ್ದಿಮಾನ್ ಸಾಹ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್‌ಪ್ರಿತ್‌ ಬುಮ್ರಾ, ಇಶಾಂತ್ ಶರ್ಮಾ/ಉಮೇಶ್ ಯಾದವ್.

South Africa vs India: ಭಾರತ ಆಫ್ರಿಕಾ ನಿರ್ಣಾಯಕ ಕದನಕ್ಕೆ ಅಡ್ಡಿ ಆಗ್ತಾನ ವರುಣ: ಕೇಪ್ ಟೌನ್ ಹವಾಮಾನ ಹೇಗಿದೆ?

Rahul Dravid Birthday: ಕರ್ನಾಟಕ ಹೆಮ್ಮೆಯ ಕ್ರಿಕೆಟಿಗ ರಾಹುಲ್ ದ್ರಾವಿಡ್​ಗೆ ಹುಟ್ಟುಹಬ್ಬದ ಸಂಭ್ರಮ: ಇಲ್ಲಿದೆ ಅವರ ಮರೆಯಲಾಗದ ಇನ್ನಿಂಗ್ಸ್

ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು