ಶಿವಮೊಗ್ಗ, ಡಿ.28: ನಗರದ ಫ್ರೀಡಂ ಪಾರ್ಕ್ನಲ್ಲಿ ಡಿಸೆಂಬರ್ 25 ರ ಮಧ್ಯಾಹ್ನ ಶಶಿ ಎಂಬಾತನ ಮೇಲೆ ಮೂವರು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದರು. ಗಾಯಗೊಂಡಿರುವ ವ್ಯಕ್ತಿಯನ್ನು ಶಿವಮೊಗ್ಗ(Shivamogga)ದ ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಫ್ರೀಡಂ ಪಾರ್ಕ್ನಲ್ಲಿರುವ ವಾಕಿಂಗ್ ಪಾತ್ನ ಮೇಲೆ ಶಶಿಕುಮಾರ್ ಯುವಕ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕ್ನಲ್ಲಿ ಬಂದ ಮೂವರು, ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದರು. ಈ ಘಟನೆ ನಡೆದು ಎರಡು ದಿನಗಳ ಬಳಿಕ ಇಂದು ಬೆಳಗಿನ ಜಾವ ಶಿವಮೊಗ್ಗ ತಾಲೂಕಿನ ತ್ಯಾಜವಳ್ಳಿಯಲ್ಲಿ ದಾಳಿ ಮಾಡಿದ ಆರೋಪಿ ರೌಡಿ ಶೀಟರ್ ಓಲಂಗ ಮಂಜುನಾಥ್ನ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.
ಪ್ರಕರಣದ ತನಿಖೆಯ ಕುರಿತು ಬೆಳಗಿನ ಜಾವ ಸ್ಥಳ ಮಹಜರಕ್ಕೆ ತೆರಳಿದ್ದ ವೇಳೆಯಲ್ಲಿ ಈ ಘಟನೆ ನಡೆದಿದ್ದು, ರೌಡಿಯು ಡ್ರ್ಯಾಗನ್ನಿಂದ ಮೊದಲು ಪೊಲೀಸ್ ಪೇದೆ ಮೇಲೆ ಹಲ್ಲೆ ಮಾಡಿದ್ದಾನೆ. ಜಯನಗರ ಸಿಪಿಐ ಸಿದ್ದನಗೌಡ ವಾರ್ನಿಂಗ್ ಮಾಡಿದರೂ ರೌಡಿಯು ಕೇಳದೇ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಮೊದಲು ಗಾಳಿಯಲ್ಲಿ ಗುಂಡು ಹಾರಿಸಿ ಬಳಿಕ ಆತನ ಕಾಲಿಗೆ ಗುಂಡೇಟು ಕೊಟ್ಟು ಪೊಲೀಸರು ರೌಡಿಯನ್ನು ಬಂಧಿಸಿದ್ದಾರೆ. ಗಾಯಾಳು ರೌಡಿಯನ್ನು ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ:ಶಿವಮೊಗ್ಗ: ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಕತ್ತು ಸೀಳಿ ಎರಡನೇ ಪತ್ನಿಯ ಕೊಲೆ
ಘಟನೆ ವಿವರ
ಶಿವಮೊಗ್ಗದ ಜಟ್ ಪಟ್ ನಗರದಲ್ಲಿ ಮೂರು ದಿನಗಳ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆದಿದೆ. ಕಾರ್ಯಕ್ರಮದಲ್ಲಿ ಆರ್ಕೆಸ್ಟ್ರಾದ ಹಾಡಿನ ವಿಚಾರದಲ್ಲಿ ಶಶಿಕುಮಾರ್ ಮತ್ತು ಬೊಮ್ಮಕಟ್ಟೆಯ ರೌಡಿಶೀಟರ್ ಮಂಜುನಾಥ್ ಓಲಂಗ ಗ್ಯಾಂಗ್ ನಡುವೆ ಕಿರಿಕ್ ಆಗಿತ್ತು. ಇದೇ ಗಲಾಟೆಯನ್ನು ಮುಂದೆ ಇಟ್ಟುಕೊಂಡು ಮಂಜುನಾಥ್ ಮತ್ತು ಆತನ ಸಹಚರರು ಸೇರಿಕೊಂಡು ಶಶಿ ಕುಮಾರ್ ಮೇಲೆ ಮಾರಣಾಂತಿಕ ದಾಳಿ ಮಾಡಿದ್ದರು. ನಂತರ ಇಂದು ಮುಂಜಾನೆ ಪೊಲೀಸರ ಮೇಲೆ ಅಟ್ಯಾಕ್ ಮಾಡಲು ಹೋಗಿದ್ದ ರೌಡಿಯು, ಈಗ ಕಾಲಿಗೆ ಖಾಕಿಯಿಂದ ಗುಂಡೇಟು ತಿಂದು ಆಸ್ಪತ್ರೆ ಪಾಲಾಗಿದ್ದಾನೆ. ಇತನ ಮೇಲೆ 10 ಕ್ಕೂ ಹೆಚ್ಚು ಪ್ರಕರಣಗಳಿವೆ. ಕೊಲೆ ಮತ್ತು ಕೊಲೆಗೆ ಯತ್ನ ಸಂಬಂಧಿಸಿದಂತೆ ವಿವಿಧ ಕೇಸ್ಗಳಿವೆ. ಇನ್ನು ರೌಡಿ ಕಾಲಿಗೆ ಬುಲೆಟ್ ಹಾರಿಸುವ ಮೂಲಕ ಖಡಕ್ ಎಚ್ಚರಿಕೆ ಶಿವಮೊಗ್ಗ ಪೊಲೀಸರು ರೌಡಿಗಳಿಗೆ ರವಾನಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ