ಶಿವಮೊಗ್ಗ, (ಆಗಸ್ಟ್, 30): ಬಿಜೆಪಿ ಮುಖಂಡನ (Sagara BJP Leader) ರಾಸಲೀಲೆ ಬಿಡುಗಡೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದವರ ವಿರುದ್ಧ ದೂರು ದಾಖಲಾಗಿದೆ. ಸಾಗರ ಬಿಜೆಪಿ ನಗರ ಮಂಡಲ ಗಣೇಶ್ ಪ್ರಸಾದ್ ಎನ್ನುವರು ದೂರು ನೀಡಿದ್ದಾರೆ. ಬಿಜೆಪಿ ಮುಖಂಡನ ರಾಸಲೀಲೆ ಬಿಡುಗಡೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ(Social Media) ಸುಳ್ಳು ಸುದ್ದಿ (Fake Post) ಹರಡಿದ ನಾಗರಾಜ ಗುಡ್ಡೆಮನೆ ವಿರುದ್ಧ ಕ್ರಮಕೈಗೊಳ್ಳುವಂತೆ ಸಾಗರ ಡಿವೈಎಸ್ಪಿ ಗೋಪಾಲಕೃಷ್ಣ ಟಿ ನಾಯಕ್ ಅವರಿಗೆ ದೂರು ನೀಡಿದ್ದಾರೆ. ಡಿವೈಎಸ್ಪಿ ಕಚೇರಿಯಿಂದ ಬಂದ ದೂರಿನ ಅರ್ಜಿಯನ್ನು ಪರಿಶೀಲಿಸಿದ ಶಿವಮೊಗ್ಗ (Shivamogga) ಜಿಲ್ಲೆಯ ಸಾಗರ ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪ್ರಭಾವಿ ಬಿಜೆಪಿ ಮುಖಂಡನ ರಾಸಲೀಲೆ ಬಿಡುಗಡೆ ಆಗಲಿದೆ ಎಂದು ಸುಳ್ಳು ಸುದ್ದಿಯನ್ನು ಹಾಕಿದ್ದಾರೆ. ಅಲ್ಲದೇ ಸಾಗರ ನಗರ ಮುಖಂಡನ ರಾಸಲೀಲೆ ಸದ್ಯದ್ಲಲೇ ಬಿಡುಗಡೆಯಾಗಲಿದೆ ಎಂದು 25/8/2023ರಂದು ಸಂಜೆ ವಾಟ್ಸಪ್ ಗ್ರೂಪ್ನಲ್ಲಿ ಹಾಕಲಾಗಿದೆ. ಇದು ನಾಗರಾಜ ಗುಡ್ಡೆಮನೆಯವರ ವಾಟ್ಸಪ್ ನಂಬರ್ನಿಂದ ಗ್ರೂಪಿಗೆ ಹಾಕಲಾಗಿದ್ದು, ಇದರಿಂದ ಸಾಗರದ ಬಿಜೆಪಿ ಮುಖಂಡರು, ಕಾರ್ಯಕರ್ತರ ಪ್ರತಿಷ್ಠೆಗೆ ಮಸಿ ಬಳಿದಂತೆ ಆಗಿದೆ. ಅಲ್ಲದೇ ಪಕ್ಷದ ನಾಯಕರಿಗೆ ಇದು ಮುಜುಗರ ಉಂಟು ಮಾಡಿದ್ದು, ಈ ರೀತಿ ಸುಳ್ಳು ಸುದ್ದಿ ಮತ್ತು ಅವಹೇಳನಕಾರಿ ಪೋಸ್ಟ್ ಹಾಕಿದ ನಾಗರಾಜ ಗುಡ್ಡೆಮನೆ ಹಾಗೂ ಈತನ ದುಷ್ಕೃತ್ಯಕ್ಕೆ ಸಹಕರಿಸಿದ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಗಣೇಶ್ ಪ್ರಸಾದ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇನ್ನಷ್ಟು ಶಿವನೊಗ್ಗ ಜಿಲ್ಲ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 10:20 am, Wed, 30 August 23