ಶಿವಮೊಗ್ಗ: ವಿಧವೆಯನ್ನ ಪ್ರೀತಿಸಿ ಮದುವೆಯಾಗಿ ಮೋಸ ಮಾಡಿದ ಪ್ರಿಯಕರ; ಮನನೊಂದ ಯುವತಿ ಆತ್ಮಹತ್ಯೆಗೆ ಶರಣು

| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 27, 2023 | 5:07 PM

ನಗರದ ಅನಿತಾ ಎಂಬ ವಿಧವೆ ಮಹಿಳೆಯನ್ನ ಪ್ರೀತಿಸಿ, ಮದುವೆಯಾಗಿ ಮೋಸ ಮಾಡಿದ್ದಾನೆ. ಇದರಿಂದ ಮನನೊಂದ ಯುವತಿ ಜಿಲ್ಲಾಧಿಕಾರಿಗೆ ಡೆತ್​ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಶಿವಮೊಗ್ಗ: ವಿಧವೆಯನ್ನ ಪ್ರೀತಿಸಿ ಮದುವೆಯಾಗಿ ಮೋಸ ಮಾಡಿದ ಪ್ರಿಯಕರ; ಮನನೊಂದ ಯುವತಿ ಆತ್ಮಹತ್ಯೆಗೆ ಶರಣು
ಸಾಂದರ್ಭಿಕ ಚಿತ್ರ
Follow us on

ಶಿವಮೊಗ್ಗ: ನಗರದ ಅನಿತಾ ಎಂಬಾಕೆ 13 ವರ್ಷದ ಹಿಂದೆ ರಾಮಮೂರ್ತಿಯನ್ನ ಮದುವೆಯಾಗಿದ್ದರು. ಇವರಿಗೆ 13 ವರ್ಷದ ಹೆಣ್ಣು ಮಗಳಿದ್ದಾಳೆ. ಕಳೆದ ಎರಡು ವರ್ಷಗಳ ಹಿಂದೆ ಪತಿ ರಾಮಮೂರ್ತಿ ನಿಧನ ಹೊಂದಿದ್ದಾನೆ. ಸಂಸಾರ ನಿಭಾಯಿಸಲು 32 ವರ್ಷದ ಅನಿತಾ, ಶಿವಮೊಗ್ಗದ ಗಾರ್ಡ್​ನ್ ಏರಿಯಾದ ಮೂರನೇ ಕ್ರಾಸ್​ನಲ್ಲಿರುವ ಚುಂಚಾದ್ರಿ ಮಹಿಳಾ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಸ್ಥೆಯಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡಿಕೊಂಡಿದ್ದಳು. ಈ ನಡುವೆ ಮಹಾನಗರ ಪಾಲಿಕೆಯಲ್ಲಿ ಸೇವೆ ಸಲ್ಲಿಸುತ್ತಿರುವ ನಾಗೇಂದ್ರ ಎನ್ನುವ ಚಾಲಕನ ಜೊತೆ ಪರಿಚಯವಾಗಿ ಇದು ಪ್ರೇಮಕ್ಕೆ ತಿರುಗಿತ್ತು. ವಿಧವೆಗೆ ಬಾಳು ಕೊಡುತ್ತೇನೆಂದು ನಂಬಿಸಿ ಮೋಸ ಮಾಡಿದ್ದಾನೆ. ಈ ಕಾರಣಕ್ಕೆ ಅನಿತಾ ತಾನು ಕೆಲಸ ಮಾಡುತ್ತಿದ್ದ ಕಚೇರಿಯಲ್ಲೇ ಫ್ಯಾನ್​ಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಇನ್ನು ನಾಗೇಂದ್ರನಿಗೂ ಕೂಡಾ ಮದುವೆಯಾಗಿ ಮಕ್ಕಳಿದ್ರೂ ಅನಿತಾ ಹಿಂದೆ ಬೆನ್ನುಬಿದ್ದಿದ್ದನು. ಅನಿತಾಳಿಗೆ ದೊಡ್ಡ ದೊಡ್ಡ ಕನಸು ತೋರಿಸಿ ಗಪ್ ಚುಪ್ ಆಗಿ ಅವಳ ಜೊತೆ ವಿವಾಹವಾಗಿದ್ದಾನೆ. ಈ ನಡುವೆ ಮದುವೆಯಾಗಿ ಸಂಸಾರ ಮಾಡಬೇಕೆನ್ನುವ ಪರಿಸ್ಥಿತಿ ಎದುರಾಗುತ್ತಿದ್ದಂತೆ ನಾಗೇಂದ್ರ ಊಲ್ಟಾ ಹೊಡೆದಿದ್ದಾನೆ. ಅನಿತಾಗೆ ನಾನು ನಿನ್ನ ಜೊತೆ ಮದುವೆಯಾಗಿಲ್ಲವೆಂದು ಶಾಕ್ ಕೊಟ್ಟಿದ್ದಾನೆ. ಎಷ್ಟೇ ಬುದ್ದಿ ಹೇಳಿದ್ರು ಆತ ಮಾತ್ರ ಕೇಳಲಿಲ್ಲ. ಇದರಿಂದ ಮನನೊಂದ ಮಹಿಳೆಯು ತಾನು ಸೇವೆ ಸಲ್ಲಿಸುತ್ತಿದ್ದ ಕಚೇರಿಯಲ್ಲೇ ನೇಣಿಗೆ ಶರಣಾಗಿದ್ದಾಳೆ. ಸಾಯುವ ಮೊದಲು ಶಿವಮೊಗ್ಗ ಡಿಸಿ ಡಾ.ಸೇಲ್ವಮಣಿ ಅವರಿಗೆ ಡೆತ್ ನೋಟ್ ಬರೆದು ಇಟ್ಟಿದ್ದಾಳೆ. ಮಹಿಳೆಯು ನೇಣು ಹಾಕಿಕೊಂಡು ಮೃತಪಟ್ಟಿ ಕೇಸ್ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಇದನ್ನೂ ಓದಿ:Karkala: ಕಾರಿನೊಳಗೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಚಾಲಕ

ಈ ಘಟನೆಯ ಬಳಿಕ ಪ್ರೀಯಕರ ಡ್ರೈವರ್ ನಾಗೇಂದ್ರ ಎಸ್ಕೇಪ್ ಆಗಿದ್ದನು. ಆದ್ರೆ ದೊಡ್ಡಪೇಟೆ ಪೊಲೀಸರು ಎಸ್ಕೇಪ್ ಆಗಿದ್ದ ನಾಗೇಂದ್ರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಮಹಿಳೆಗೆ ವಂಚನೆ ಮಾಡಿದ ಪ್ರೀಯಕರನು ಅಂದರ್ ಆಗಿದ್ದಾನೆ. ಕಳೆದ ಎರಡು ವರ್ಷಗಳ ಹಿಂದೆ ತಂದೆಯನ್ನು ಕಳೆದುಕೊಂಡಿದ್ದ ಮಗಳಿಗೆ ಈಗ ತಾಯಿ ಕೂಡಾ ಇಲ್ಲದಂತಾಗಿದೆ. ನಾಗೇಂದ್ರ ಮಾಡಿದ ಮೋಸಕ್ಕೆ ವಿಧವೆ ಜೀವ ಹೋಗಿದೆ. ಅತ್ತ ಮೃತಳ ಮಗಳು ತಂದೆ ತಾಯಿ ಇಲ್ಲದೇ ತಬ್ಬಲಿಯಾಗಿರುವುದು ಮಾತ್ರ ನೋವಿನ ಸಂಗತಿ.

ವರದಿ: ಬಸವರಾಜ್ ಯರಗಣವಿ ಟವಿ9 ಶಿವಮೊಗ್ಗ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ