ಶಿವಮೊಗ್ಗ: ಒಂಟೆಗಳ ಸಾಕಿಕೊಂಡು ಜೀವನ ಸಾಗಿಸುತ್ತಿದ್ದ ಅಲೆಮಾರಿ ವ್ಯಕ್ತಿಗಳ ವಿರುದ್ಧ ದೂರು ದಾಖಲು

| Updated By: ಆಯೇಷಾ ಬಾನು

Updated on: Dec 21, 2023 | 1:29 PM

ಮಕ್ಕಳನ್ನು ಒಂಟೆ ಮೇಲೆ ಕೂರಿಸಿ 50 ರೂ.ಗೆ ಒಂದು ರೌಂಡ್ ಹೊಡೆಸಿ ಜೀವನ ಸಾಗಿಸುತ್ತಿದ್ದ ಗಂಗಾರಾಮ್ ಮತ್ತು ಆತನ ಸಹಚರರು ಇದೇ ಒಂಟೆಯನ್ನ ನಂಬಿ ಜೀವನ ಸಾಗಿಸುತ್ತಿದ್ದರು. ಕಾನೂನಿನಲ್ಲಿ ಅವಕಾಶ ಇಲ್ಲದ ಕಾರಣ ಆತನ ವಿರುದ್ಧ ದೂರು ದಾಖಲಾಗಿದೆ. 9 ಒಂಟೆಗಳನ್ನು ಸಧ್ಯಕ್ಕೆ ಶಿವಮೊಗ್ಗದ ಗೋಶಾಲೆಯೊಂದರಲ್ಲಿ ಬಿಡಲಾಗಿದೆ.

ಶಿವಮೊಗ್ಗ: ಒಂಟೆಗಳ ಸಾಕಿಕೊಂಡು ಜೀವನ ಸಾಗಿಸುತ್ತಿದ್ದ ಅಲೆಮಾರಿ ವ್ಯಕ್ತಿಗಳ ವಿರುದ್ಧ ದೂರು ದಾಖಲು
ಒಂಟೆಗಳ ಸಾಕಿಕೊಂಡು ಜೀವನ ಸಾಗಿಸುತ್ತಿದ್ದ ಅಲೆಮಾರಿಗಳ ವಿರುದ್ಧ ದೂರು ದಾಖಲು
Follow us on

ಶಿವಮೊಗ್ಗ, ಡಿ.21: ಭದ್ರಾವತಿಯಲ್ಲಿ 9 ಒಂಟೆ (Camels) ಸಾಕಿಕೊಂಡು ಜೀವನ ಸಾಗಿಸುತ್ತಿದ್ದ ವ್ಯಕ್ತಿಗಳ ವಿರುದ್ಧ ದೂರು ದಾಖಲಾಗಿದೆ. ಪ್ರಾಣಿಗಳ ಹತ್ಯೆ, ಸಾಕಾಣಿಕೆ ರದ್ದತಿಯ 2015 ಕಾಯ್ದೆ ಪ್ರಕಾರ ಗಂಗಾರಾಮ್ ಚೌಹಾನ್ ಮತ್ತು ಇತರರ ವಿರುದ್ಧ ಭದ್ರಾವತಿ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ (Bhadravathi Old Town Police Station) ದೂರು ದಾಖಲಾಗಿದೆ. ಭದ್ರಾವತಿಯ ಸಿದ್ದರೂಢ ನಗರದ ಶಾಲೆಯೊಂದರಲ್ಲಿ 9 ಒಂಟೆಗಳನ್ನ ತಂದು ಜೀವನ ನಡೆಸುತ್ತಿದ್ದ ಗಂಗಾರಾಮ್ ಮತ್ತು ಇತರರ ವಿರುದ್ಧ ಶರತ್ ಎಂಬುವವರು ದೂರು ದಾಖಲಿಸಿದ್ದಾರೆ. 112 ಪೊಲೀಸರಿಗೆ ಕರೆ ಮಾಡಿ ಮಾಹಿಡಿ ನೀಡಿದ ನಂತರ ಸ್ಥಳಕ್ಕೆ ಬಂದ ಪೊಲೀಸರು ಗಂಗಾರಾಮ್ ಚೌಹಾನ್ ವಿರುದ್ಧ ದೂರು ದಾಖಲಿಸಿದ್ದಾರೆ.

ಗಂಗಾರಾಮ್ ಚೌಹಾನ್ ಮತ್ತು ಆತನ ಸಹಚರರು, 9 ಒಂಟೆಯನ್ನ ನಂಬಿ ಜೀವನ ಸಾಗಿಸುವ ಅಲೆಮಾರಿ ವ್ಯಕ್ತಿಗಳು ಎಂದು ತಿಳಿದುಬಂದಿದೆ. ಆದರೆ ಒಂಟೆ ಕರ್ನಾಟಕದ ಸಾಕು ಪ್ರಾಣಿ ಅಲ್ಲದ ಕಾರಣ ಈತನ ವಿರುದ್ಧ ದೂರು ದಾಖಲಿಸಲಾಗಿದೆ. 7-8 ತಿಂಗಳ ಹಿಂದೆ ಗಂಗಾರಾಮ್ ಮತ್ತು ಇತರರ ವಿರುದ್ಧ ತುಂಗನಗರ ಪೊಲೀಸ್ ಠಾಣೆಯಲ್ಲಿ ಒಂಟೆ ಸಾಕಿದ ಆರೋಪದ ಮೇರೆಗೆ ದೂರು ದಾಖಲಾಗಿತ್ತು. ನ್ಯಾಯಾಲಯದಿಂದ ಬಿಡಿಸಿಕೊಂಡು ಬಂದಿದ್ದ ಗಂಗಾರಾಮ್ ವಿರುದ್ಧ ಮತ್ತೆ ದೂರುದಾಖಲಾಗಿದೆ. 50 ರೂ.ಗೆ ಒಂದು ರೌಂಡ್ ಹೊಡೆಸಿ ಜೀವನ ಸಾಗಿಸುತ್ತಿದ್ದ ಗಂಗಾರಾಮ್ ಮತ್ತು ಆತನ ಸಹಚರರು ಇದೇ ಒಂಟೆಯನ್ನ ನಂಬಿ ಜೀವನ ಸಾಗಿಸುತ್ತಿದ್ದರು. ಕಾನೂನಿನಲ್ಲಿ ಅವಕಾಶ ಇಲ್ಲದ ಕಾರಣ ಆತನ ವಿರುದ್ಧ ದೂರು ದಾಖಲಾಗಿದೆ. 9 ಒಂಟೆಗಳನ್ನು ಸಧ್ಯಕ್ಕೆ ಶಿವಮೊಗ್ಗದ ಗೋಶಾಲೆಯೊಂದರಲ್ಲಿ ಬಿಡಲಾಗಿದೆ.

ಇದನ್ನು ಓದಿ: Camels: ಒಂಟೆಗಳ ಬಗೆಗಿನ ಇಂಟರೆಸ್ಟಿಂಗ್​​​ ಮಾಹಿತಿ ಇಲ್ಲಿದೆ

ಶಿವಮೊಗ್ಗದಲ್ಲಿ ಕರಡಿ ಪ್ರತ್ಯಕ್ಷ

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ನಾಗಸಮುದ್ರ ಗ್ರಾಮದಲ್ಲಿ ಕರಡಿ ಪ್ರತ್ಯಕ್ಷವಾಗಿದೆ. ಗ್ರಾಮದಲ್ಲಿ ಕರಡಿ ಸಂಚರಿಸಿರುವ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮುಂಜಾನೆ ದೇವಸ್ಥಾನಕ್ಕೆ ಹೋಗುತ್ತಿದ್ದ ಮಹಿಳೆ ಕರಡಿಯನ್ನ ಕಂಡು ಓಡಿ ಹೋಗಿದ್ದಾರೆ. ಗ್ರಾಮಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ರು. ಕರಡಿ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮದಲ್ಲಿ ಬೋನ್ ಇಟ್ಟಿದ್ದಾರೆ. ಮುಂಜಾನೆ ಹಾಗೂ ಸಂಜೆ ವೇಳೆ ಏಕಾಂಗಿಯಾಗಿ ಹೊಲಗದ್ದೆಗಳಿಗೆ ತೆರಳದಂತೆ ಸೂಚನೆ ನೀಡಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ