ಶಿವಮೊಗ್ಗ: ಚಲಿಸುತ್ತಿದ್ದ ಬೈಕ್ ಸವಾರರ ಮೇಲೆ ಬಿದ್ದ ಬೃಹತ್ ಮರದ ಕೊಂಬೆ; ಮೂವರಿಗೆ ಗಾಯ
ಶಿವಮೊಗ್ಗ(Shivamogga) ತಾಲೂಕಿನ ಗೊಂದಿ ಚಟ್ನಹಳ್ಳಿ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬೈಕ್ ಮೇಲೆ ಬೃಹತ್ ಮರದ ಕೊಂಬೆ ಬಿದ್ದ ಹಿನ್ನಲೆ ಬೈಕ್ನಿಂದ ಜಾರಿ ಬಿದ್ದು ಮೂವರಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ. ಬೈಕ್ ಓಡಿಸುತ್ತಿದ್ದ ಮಾವ ಮಹಮ್ಮದ್ ಶಫಿ, ಬೈಕ್ ಹಿಂಬದಿಯಲ್ಲಿದ್ದ ಸೊಸೆ ಮತ್ತು ಮೊಮ್ಮಗಳಿಗೆ ಗಾಯವಾಗಿದ್ದು, ಕೂಡಲೇ ಗಾಯಾಳುಗಳನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಶಿವಮೊಗ್ಗ, ಫೆ.13: ಚಲಿಸುತ್ತಿದ್ದ ಬೈಕ್ ಸವಾರರ ಮೇಲೆ ಹೆದ್ದಾರಿ ಪಕ್ಕದ ಬೃಹತ್ ಮರದ ಕೊಂಬೆ ಬಿದ್ದ ಘಟನೆ ನಿನ್ನೆ(ಫೆ.12) ಶಿವಮೊಗ್ಗ(Shivamogga) ತಾಲೂಕಿನ ಗೊಂದಿ ಚಟ್ನಹಳ್ಳಿ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ಬೈಕ್ ಓಡಿಸುತ್ತಿದ್ದ ಮಾವ ಮಹಮ್ಮದ್ ಶಫಿ, ಬೈಕ್ ಹಿಂಬದಿಯಲ್ಲಿದ್ದ ಸೊಸೆ ಮತ್ತು ಮೊಮ್ಮಗಳಿಗೆ ಗಾಯವಾಗಿದ್ದು, ಕೂಡಲೇ ಗಾಯಾಳುಗಳನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗ್ರಾಮಸ್ಥರು ಸೇರಿ ಗಾಯಾಳು ಕುಟುಂಬಕ್ಕೆ ಸಹಾಯ
ಇನ್ನು ಬೃಹತ್ ಮರದ ಕೊಂಬೆ ಬಿದ್ದ ಹಿನ್ನಲೆ ಬೈಕ್ನಿಂದ ಜಾರಿ ಬಿದ್ದು ಮೂವರಿಗೆ ಗಂಭೀರ ಗಾಯವಾಗಿದೆ. ಈ ಕುರಿತು ಘಟನೆ ಪ್ರತ್ಯಕ್ಷದರ್ಶಿ ವಿಕಾಸ್ ಎಂಬುವವರು ಮಾತನಾಡಿ, ‘ಅವರು ಬೈಕ್ ಮೇಲೆ ಬರುತ್ತಿದ್ದಾಗ ಏಕಾಏಕಿ ಮರ ಬಿದ್ದಿದೆ. ಕೂಡಲೇ ಗಾಯಗೊಂಡವರನ್ನು ಕಾರ್ ಮೂಲಕ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಮಗು ಮತ್ತು ತಾಯಿಗೆ ಗಂಭೀರ ಗಾಯ ಆಗಿದೆ. ಗ್ರಾಮಸ್ಥರು ಸೇರಿ ಗಾಯಾಳು ಕುಟುಂಬಕ್ಕೆ ಸಹಾಯ ಮಾಡಿದ್ದೇವೆ ಎಂದರು. ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ಗಾಯಾಳುಗಳನ್ನು ರಕ್ಷಣೆ ಮಾಡಿ ಚಿಕಿತ್ಸೆ ನೀಡಲಾಗಿದೆ.
ಮುಗಿಲು ಮುಟ್ಟಿದ ಕುಟುಂಬಸ್ಥರ ಕಣ್ಣೀರು
ಈ ಕುರಿತು ಮಾತನಾಡಿದ ಕುಟುಂಬಸ್ಥರು, ‘ನಿನ್ನೆ ರಸ್ತೆ ಅಪಘಾತ ಮಾಹಿತಿ ಸಿಕ್ಕಿತು. ಮೆಗ್ಗಾನ್ ಜಿಲ್ಲಾಸ್ಪತ್ರೆಯ ಮೊದಲು ದಾಖಲು ಮಾಡಲಾಗಿತ್ತು. ಬಳಿಕ ಅಲ್ಲಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಯಿತು. ಆದರೆ, ಅಲ್ಲಿ ಸೂಕ್ತ ಚಿಕಿತ್ಸೆ ಸಿಗದ ಹಿನ್ನಲೆ ಮಂಗಳೂರಿನಿಂದ ಮತ್ತೆ ಮೂವರನ್ನು ಶಿವಮೊಗ್ಗಕ್ಕೆ ಕರೆತರಲಾಯಿತು. ಬೆಳಗಿನ ಜಾವ ಮೂವರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು ಎಂದಿದ್ದಾರೆ.
ಬಡ ಕುಟುಂಬದ ಬಳಿಯಿಲ್ಲ ಹಣ
ಬಡ ಕುಟುಂಬದ ಬಳಿ ಹಣವಿಲ್ಲ. ಈಗಾಗಲೇ ಲಕ್ಷ ಕ್ಕೂ ಅಧಿಕ ವೆಚ್ಚ ಆಗಿದೆ. ಇನ್ನೂ ಲಕ್ಷಾಂತರ ರೂಪಾಯಿ ಚಿಕಿತ್ಸೆಗೆ ಹಣಬೇಕಿದೆ. ದಯವಿಟ್ಟು ನಮಗೆ ಸರ್ಕಾರ ಸಹಾಯ ಮಾಡಬೇಕು. ಪತ್ನಿ ಸ್ಥಿತಿ ಗಂಭೀರ ಆಗಿದೆ. ಈಗಾಗಲೇ ತಲೆಗೆ ಆಪರೇಶನ್ ಮಾಡಿದ್ದಾರೆ. ನಿನ್ನೆ ಪತ್ನಿಗೆ ಹೋದ ಪ್ರಜ್ಞೆ ಇನ್ನೂ ವಾಪಸ್ ಬಂದಿಲ್ಲ ಎಂದು ಕಣ್ಣೀರಿಡುತ್ತಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Published On - 2:45 pm, Tue, 13 February 24