ಶಿವಮೊಗ್ಗ: ಮೇಲಧಿಕಾರಿಗಳ ಕೆಲಸದ ಒತ್ತಡದ ಕಾರಣವೊಡ್ಡಿ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯ ಎಫ್ಡಿಸಿ ಗಿರೀಶ್ ನಾಪತ್ತೆಯಾಗಿದ್ದಾರೆ. ವಾಟ್ಸ್ಆ್ಯಪ್ನಲ್ಲಿ ಡೆತ್ ನೋಟ್ ಬರೆದು ಸರಕಾರಿ ನೌಕರ ಗಿರೀಶ್ ನಾಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಈಹಿಂದೆ ಜಿಲ್ಲಾಧಿಕಾರಿಗಳ ಪಿಎ ಆಗಿ ಕೆಲಸ ನಿರ್ವಹಿಸಿದ್ದ ಗಿರೀಶ್ ಅವರು ಸದ್ಯ ಕೆಎಲ್ಎಲ್ಎಡಿಎಸ್ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಶಾಸಕರ ಮತ್ತು ಸಂಸದರ ಅನುದಾನ ಬಿಡುಗಡೆ ಆಗದ ಕಾರಣ ಹಣ ಬಿಡುಗಡೆಗೆ ಶಾಸಕರು ಮತ್ತು ಗುತ್ತಿಗೆದಾರರಿಂದ ಗಿರೀಶ್ ಮೇಲೆ ಹೆಚ್ಚಿನ ಒತ್ತಡವಿತ್ತು ಎನ್ನಲಾಗಿದೆ.
ಕೊವಿಡ್ ಹಿನ್ನೆಲೆಯಲ್ಲಿ ಸರ್ಕಾರ ಪೂರ್ಣ ಪ್ರಯಾಣದ ಅನುದಾನ ಬಿಡುಗಡೆ ಮಾಡಿಲ್ಲ. ಹೀಗೆ ಪ್ರತಿ ಹಗಲು ರಾತ್ರಿ ಕೆಳಹಂತದ ನೌಕರರು ಕೆಲಸ ಮಾಡುವುದು, ಮೇಲಾಧಿಕಾರಿಗಳು ಮಾತ್ರ ತಮ್ಮ ಜೊತೆ ಸರಿಯಾಗಿ ವರ್ತಿಸಿಲ್ಲ ಎಂಬ ಕಾರಣಗಳನ್ನು ನೀಡಿ ಗಿರೀಶ್ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ನನ್ನನ್ನು ಯಾರೂ ಹುಡುಕುವ ಪ್ರಯತ್ನ ಮಾಡಬೇಡಿ, ನಾನು ಆತ್ಮಹತ್ಯೆ ಮಾಡಿಕೊಳ್ಳಲು ಹೋಗುತ್ತಿದ್ದೇನೆ. ನನ್ನ ಸಾವಿಗೆ ಹಿರಿಯ ಅಧಿಕಾರಿಯೋರ್ವರೇ ಕಾರಣ ಎಂದು ಗಿರೀಶ್ ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾರೆ. ಕುಟುಂಬಸ್ಥರು ಜಯನಗರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದು ಹುಡುಕಾಟ ಮುಂದುವರೆದಿದೆ.
ಇದನ್ನೂ ಓದಿ:
World Rabies Day 2021: ರೇಬೀಸ್ ರೋಗದ ಕುರಿತಾಗಿ ನೀವು ತಿಳಿಯಬೇಕಾದ ಒಂದಿಷ್ಟು ಮಾಹಿತಿ ಇಲ್ಲಿದೆ
(Shivamogga DC office FDC Gireesh wrote death note as pressure from higher officials and missing)
Published On - 3:27 pm, Tue, 28 September 21