World Rabies Day 2021: ರೇಬೀಸ್ ರೋಗದ ಕುರಿತಾಗಿ ನೀವು ತಿಳಿಯಬೇಕಾದ ಒಂದಿಷ್ಟು ಮಾಹಿತಿ ಇಲ್ಲಿದೆ
ವಿಶ್ವ ರೇಬಿಸ್ ದಿನ 2021: ರೇಬೀಸ್ ಒಂದು ಸಾಂಕ್ರಾಮಿಕ ಖಾಯಿಲೆಯಾಗಿದ್ದು, ಅದು ಮೆದುಳಿನ ಉರಿಯೂತವನ್ನು ಉಂಟು ಮಾಡುತ್ತದೆ. ಸೋಂಕಿತ ಪ್ರಾಣಿಯು ಮನುಷ್ಯ ಅಥವಾ ಇನ್ನಿತರ ಪ್ರಾಣಿಗೆ ಕಚ್ಚಿದಾಗ ಈ ರೋಗ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ.
ಪ್ರಸ್ತುತದಲ್ಲಿ ನಾವು ಕೊವಿಡ್ 19 ಸಾಂಕ್ರಾಮಿಕ ರೋಗವನ್ನು ಸಂಪೂರ್ಣವಾಗಿ ಹೊಡೆದೋಡಿಸಲು ಪ್ರಯತ್ನಿಸುತ್ತಿದ್ದೇವೆ. ಇವುಗಳ ಜತೆಗೆ ನಾವು ಅರಿಯಾಬೇಕಾದ ಅದೆಷ್ಟೋ ಖಾಯಿಲೆಗಳಿವೆ. ಅವುಗಳಲ್ಲಿ ರೇಬೀಸ್ ಕೂಡಾ ಒಂದು. ಇಂದು (ಸೆಪ್ಟೆಂಬರ್ 28) ರೇಬೀಸ್ ದಿನ. 2007ರಲ್ಲಿನ ಅಂತರಾಷ್ಟ್ರೀಯ ಅಭಿಯಾನವು, ರೇಬೀಸ್ ಬಗ್ಗೆ ಹಾಗೂ ರೋಗ ತಡೆಗಟ್ಟುವಿಕೆಯ ಕುರಿತಾಗಿ ಜಾಗೃತಿ ಮೂಡಿಸಲು ಅರಂಭವಾಯಿತು.
ರೇಬೀಸ್ ಒಂದು ಸಾಂಕ್ರಾಮಿಕ ಖಾಯಿಲೆಯಾಗಿದ್ದು, ಅದು ಮೆದುಳಿನ ಉರಿಯೂತವನ್ನು ಉಂಟು ಮಾಡುತ್ತದೆ. ಸೋಂಕಿತ ಪ್ರಾಣಿಯು ಮನುಷ್ಯ ಅಥವಾ ಇನ್ನಿತರ ಪ್ರಾಣಿಗೆ ಕಚ್ಚಿದಾಗ ಈ ರೋಗ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ.
ಈ ದಿನವನ್ನು ರೇಬೀಸ್ ಕುರಿತಾಗಿ ಜಾಗೃತಿ ಮೂಡಿಸಲು ಮೀಸಲಿಡಲಾಗಿದೆ. ಈ ರೋಗದ ತೀವ್ರತೆ ಸಾವಿಗೆ ಕಾರಣವಾಗಬಹುದು. ಹಾಗಾಗಿ ಇಂತಹ ಮಾರಣಾಂತಿಕ ಸಾಂಕ್ರಾಮಿಕ ರೋಗಗಳ ಕುರಿತಾಗಿ ಅರಿವು ಮೂಡಿಸಲು ಸೆಪ್ಟೆಂಬರ್ 28ರಂದು ಪ್ರತೀ ವರ್ಷ ವಿಶ್ವ ರೇಬೀಸ್ ದಿನವನ್ನು ಆಚರಿಸಲಾಗುತ್ತದೆ. ಸೆಂಟರ್ ಪಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಫ್ರಿವೆನ್ಷನ್ (CDC) ಪ್ರಕಾರ, ರೇಬೀಸ್ ಹರಡುವಿಕೆ ಪ್ರಭಾವ ಹೇಗಿರುತ್ತದೆ ಮತ್ತು ಸಮುದಾಯದ ಮೇಲೆ ರೇಬೀಸ್ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ಹೇಳುವ ಅವಕಾಶ ಈ ದಿನವಾಗಿದೆ.
ತನ್ನ ಸಹೋದ್ಯೋಗಿಗಳ ಸಹಾಯದಿಂದ ಪರಿಣಾಮಕಾರಿಯಾಗಿ ರೇಬೀಸ್ ಲಸಿಕೆಯನ್ನು ಅಭಿವೃದ್ಧಿಪಡಿಸಿದ ಲೂಯಿಸ್ ಪಾಶ್ವರ್ ಅವರ ಸ್ಮರಣಾರ್ಥವಾಗಿ ಈ ದಿನದಂದು ರೇಬೀಸ್ ರೋಗದ ಕುರಿತಾಗಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ರೇಬೀಸ್ ಇನ್ನೂ ವಿಶ್ವದ ಅನೇಕ ಭಾಗಗಳಲ್ಲಿ ಗಮನಾರ್ಹವಾಗಿ ಆರೋಗ್ಯ ಸಮಸ್ಯೆಯಾಗಿರುವುದರಿಂದ, ಈ ಕುರಿತಾಗಿ ಹೆಚ್ಚಿನ ಜಾಗೃತಿ ಅವಶ್ಯಕವಾಗಿದೆ. ಅಧಿಕಾರಿಗಳ ದಾಖಲೆಗಳ ಪ್ರಕಾರ, ಪ್ರಪಂಚದಾದ್ಯಂತ ಪ್ರತೀ ವರ್ಷ 59,000 ಕ್ಕೂ ಹೆಚ್ಚು ಜನರು ಈ ಖಾಯಿಲೆಯಿಂದ ಸಾವಿಗೀಡಾಗುತ್ತಿದ್ದಾರೆ. ಅದರಲ್ಲಿಯೂ ಹೆಚ್ಚಾಗಿ ಏಷ್ಯಾ ಮತ್ತು ಆಫ್ರಿಕಾದಲ್ಲಿ ಇದರ ಪರಿಣಾಮ ತೀವ್ರವಾಗಿದ್ದು, ಶೇ. 95 ರಷ್ಟು ಸಾವುಗಳು ಸಂಭವಿಸಿವೆ.
ಇದನ್ನೂ ಓದಿ:
World Rabies Day 2021: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರೇಬಿಸ್ ನಿರ್ನಾಮ ಮಾಡಲು ಪಣತೊಟ್ಟ ರೋಟರಿ ಕ್ಲಬ್
(World rabies day 2021 know about the event history check in kannada)
Published On - 8:43 am, Tue, 28 September 21