ಶಿವಮೊಗ್ಗ, ಜನವರಿ 08: ಸಿಡಿಮದ್ದು (firecracker) ಸ್ಫೋಟಗೊಂಡು ಓರ್ವ ಬಾಲಕನ ಸ್ಥಿತಿ ಗಂಭೀರವಾಗಿದ್ದು, ಇಬ್ಬರು ಬಾಲಕರು ಪಾರಾಗಿರುವಂತಹ ಘಟನೆ ಜಿಲ್ಲೆಯ ತೀರ್ಥಹಳ್ಳಿಯ ತುಂಗಾನದಿ ಪಾತ್ರದಲ್ಲಿ ನಡೆದಿದೆ. ಬಾಲಕ ತೇಜು ಎಂಬಾತನಿಗೆ ಮೈ ಕೈ, ಮುಖಕ್ಕೆ ಗಂಭೀರ ಗಾಯಗಳಾಗಿದ್ದು, ಕಣ್ಣುಗಳಿಗೆ ಹಾನಿಯಾಗಿದೆ. ಸದ್ಯ ಬಾಲಕನಿಗೆ ತೀರ್ಥಹಳ್ಳಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಬಾಲಕ ದಾಖಲಿಸಲಾಗಿದೆ.
ಜನವರಿ 1ರಂದು ತೀರ್ಥಹಳ್ಳಿ ಪಟ್ಟಣದಲ್ಲಿ ತೆಪ್ಪೋತ್ಸವ ಅಂಗವಾಗಿ ಸಿಡಿಮದ್ದು ಪ್ರದರ್ಶನ ಏರ್ಪಡಿಸಲಾಗಿತ್ತು. ಸುಮಾರು ಎರಡೂವರೆ ಗಂಟೆ ಸಿಡಿಮದ್ದು ಪ್ರದರ್ಶನ ನಡೆದಿತ್ತು. ಜನವರಿ 5ರಂದು ಸಿಡಿಯದೆ ಇದ್ದ ಪಟಾಕಿಯನ್ನು ಬಾಲಕರು ಒಟ್ಟುಗೂಡಿಸಿದ್ದರು. ಏಕಾಏಕಿ ಪಟಾಕಿ ಸಿಡಿದ ಪರಿಣಾಮ ಬಾಲಕ ತೀವ್ರವಾಗಿ ಗಾಯಗೊಂಡಿದ್ದಾನೆ. ಘಟನೆಯಲ್ಲಿ ಮತ್ತಿಬ್ಬರು ಬಾಲಕರು ಪಾರಾಗಿದ್ದಾರೆ.
ಇದನ್ನೂ ಓದಿ: ಬೆಂಗಳೂರಿಗಿಂತ ಮೊದಲೇ ಶಿವಮೊಗ್ಗದಲ್ಲಿ HMPV ವೈರಸ್ ಪತ್ತೆ..!
ಸುಮಾರು 6 ಲಕ್ಷ ರೂಪಾಯಿ ವೆಚ್ಚದಲ್ಲಿ ಸಿಡಿಮದ್ದು ಪ್ರದರ್ಶನ ಮಾಡಲಾಗಿದ್ದು, ಸುರಕ್ಷತಾ ಕ್ರಮ ಕೈಗೊಳ್ಳದಿದ್ದರಿಂದ ದುರಂತಕ್ಕೆ ಕಾರಣ ಮತ್ತು ಸಿಡಿಮದ್ದು ಪ್ರದರ್ಶನ ಕಾರ್ಯಕ್ರಮ ಮುಗಿದು 4 ದಿನಗಳಾದರೂ ಪ್ರದೇಶ ಸ್ವಚ್ಛ ಮಾಡದಿರುವುದು ಘಟನೆಗೆ ಕಾರಣವೆಂದು ಸ್ಥಳೀಯರು ಆರೋಪಿಸಿದ್ದಾರೆ.
ಇನ್ನೂ ಇತ್ತೀಚೆಗೆ ಬೆಂಗಳೂರು ಹೊರವಲಯ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ಸೀವಿಂಗ್ ಸಿಸ್ಟಮ್ ಪ್ರೈವೇಟ್ ಲಿಮಿಟೆಡ್, ಐಐಜಿಎಮ್ ಮತ್ತು ಓರಿಯನ್ ಅಪರೇಲ್ಸ್ ಟ್ರಿಮ್ಸ್ ಗೋದಾಮಿನಲ್ಲಿ ಸಂಜೆ 4:50 ರ ಸುಮಾರಿಗೆ ಏಕಾಏಕಾ ಬೆಂಕಿ ಕಾಣಿಸಿಕೊಂಡಿತ್ತು. ಪರಿಣಾಮ ಕ್ಷಣಮಾತ್ರದಲ್ಲಿ ಇಡೀ ಗೋದಾಮು ಬೆಂಕಿಗಾಹುತಿಯಾಗಿತ್ತು.
ಸುತ್ತಮುತ್ತಲಿನ ಕಾರ್ಖಾನೆ ಸಿಬ್ಬಂದಿ ಬೆಂಕಿ ನಂದಿಸಲು ಮುಂದಾಗಿದ್ದಾರೆ. ಆದರೆ ಕೆಮಿಕಲ್ ಬ್ಯಾರಲ್ಗಳ ಸ್ಪೋಟದಿಂದ ಕ್ಷಣಮಾತ್ರದಲ್ಲಿ ಇಡೀ ಗೋದಾಮಿಗೆ ಬೆಂಕಿ ಆವರಿಸಿದೆ. ಕೂಡಲೇ ಅಗ್ನಿಶಾಮಕ ಠಾಣೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ಠಾಣೆ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ.
ಇದನ್ನೂ ಓದಿ: ವಿಷ ಲಡ್ಡು ಪ್ರಕರಣದ ಸ್ಫೋಟಕ ಸತ್ಯ ಬಯಲು: ಲವ್ ಬ್ರೇಕಪ್ ಆಗಿದ್ದಕ್ಕೆ ವಿಷ ಗಿಫ್ಟ್!
ಶಾರ್ಟ್ ಸರ್ಕ್ಯೂಟ್ನಿಂದ ಗಾರ್ಮೆಂಟ್ಸ್ ಗೋದಾಮುಗಳಿಗೆ ಬೆಂಕಿ ಹೊತ್ತುಕೊಂಡಿಂರುವ ಸಾಧ್ಯತೆ ಇದ್ದು, ಅದೃಷ್ಟವಶಾತ ಯಾವುದೇ ಸಾವು ನೋವು ಸಂಭವಿಸಿಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:13 pm, Wed, 8 January 25