ಶಿವಮೊಗ್ಗದಲ್ಲಿ ಸೌಹಾರ್ದ ಸಭೆ: ಶಾಂತಿ ಹಾಳಾಗುತ್ತಿರುವುದರ ಮೂಲ ಎಲ್ಲಿದೆ, ಅದರ ತಾಯಿ ಬೇರನ್ನು ಚಿವುಟಿಹಾಕಿ -ವಿನಯ್ ಗುರೂಜಿ

ಸೌಹಾರ್ದ ಸಭೆಯ ಬಳಿಕ ಮಾತನಾಡಿದ ವಿನಯ್ ಗುರೂಜಿ ಅವರು ಕಾಲೇಜು ವಿದ್ಯಾರ್ಥಿಗಳ ಮೇಲೆ ಕಣ್ಣು ಇಡಬೇಕು. ತಂದೆ ತಾಯಿ ಮಕ್ಕಳ ಮೇಲೆ ಕಾಳಜಿ ವಹಿಸಬೇಕು. ಶಾಂತಿ ಹಾಳಾಗುತ್ತಿರುವ ಮೂಲ ಎಲ್ಲಿದೆ, ಇದರ ತಾಯಿ ಬೇರನ್ನು ಹುಡುಕಬೇಕು ಎಂದು ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿ ಸೂಕ್ಷ್ಮವಾಗಿ ಹೇಳಿದರು.

ಶಿವಮೊಗ್ಗದಲ್ಲಿ ಸೌಹಾರ್ದ ಸಭೆ: ಶಾಂತಿ ಹಾಳಾಗುತ್ತಿರುವುದರ ಮೂಲ ಎಲ್ಲಿದೆ, ಅದರ ತಾಯಿ ಬೇರನ್ನು ಚಿವುಟಿಹಾಕಿ -ವಿನಯ್ ಗುರೂಜಿ
ಶಿವಮೊಗ್ಗ: ವಿನಯ್ ಗುರೂಜಿ ನೇತೃತ್ವದಲ್ಲಿ ಶಾಂತಿಗಾಗಿ ಸೌಹಾರ್ದ ಸಭೆ
Updated By: ಸಾಧು ಶ್ರೀನಾಥ್​

Updated on: Oct 02, 2023 | 8:07 PM

ಶಿವಮೊಗ್ಗ, ಅಕ್ಟೋಬರ್​ 2: ನಗರದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕೋಮು ಗಲಾಟೆ ನಡೆದಿರುವ (Shivamogga, Eid Milad) ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ಮಹಾತ್ಮ ಗಾಂಧಿ ಪಾರ್ಕ್‌ನಲ್ಲಿ ಇಂದು ಸೌಹಾರ್ದ ಸಭೆ ನಡೆಯಿತು. ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿ (Vinay Guruji) ನೇತೃತ್ವದಲ್ಲಿ ಶಾಂತಿಗಾಗಿ ನಡೆದ ಸೌಹಾರ್ದ ಸಭೆಯಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಸರ್ವ ಧರ್ಮಗಳ ಮುಖಂಡರು ಭಾಗಿಯಾಗಿದ್ದರು. ಶಿವಮೊಗ್ಗ ಸೌಹಾರ್ದವೇ ಹಬ್ಬ ಮತ್ತು ಶಾಂತಿ ನಡಿಗೆ ಸಮಿತಿ ಆಯೋಜನೆ ಮಾಡಿರುವ ಕಾರ್ಯಕ್ರಮ ಇದಾಗಿತ್ತು. ಈ ವೇಳೆ ನಗರದಲ್ಲಿ ಶಾಂತಿ ನೆಲೆಸಲು ಗಾಂಧಿ ಪ್ರತಿಮೆ ಮುಂದೆ ಸೌಹಾರ್ದಕ್ಕಾಗಿ ಸಂಕಲ್ಪ ಕೈಗೊಳ್ಳಲಾಯಿತು. ಬಸವ ಕೇಂದ್ರದ ಬಸವ ಮರುಳಸಿದ್ದ ಸ್ವಾಮೀಜಿ, ಮೌಲಾನಿ ಅಬ್ದುಲ್ ಲತೀಫ್ ಮುಂತಾದ ಸರ್ವ ಧರ್ಮಗಳ ಮುಖಂಡರು ಭಾಗಿಯಾಗಿದ್ದರು.

ಸೌಹಾರ್ದ ಸಭೆಯ ಬಳಿಕ ಮಾತನಾಡಿದ ವಿನಯ್ ಗುರೂಜಿ ಅವರು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸರ ಮೇಲೆ (district collector, district police) ನಿನ್ನೆ ಭಾನುವಾರ ಕಲ್ಲು ತೂರಿದ್ದಾರೆ. ಪಾಪ ಅವರು ಮನೆ ಮಠ ಬಿಟ್ಟು, ಹಬ್ಬ ಬಿಟ್ಟು ಕೆಲಸ ಮಾಡುತ್ತಾರೆ. ರಜೆ ಹಾಕದೆ ಸಾರ್ವಜನಿಕರಿಗೆ ತೊಂದರೆ ಆಗದಂತೆ ಕಾರ್ಯ ನಿರ್ವಹಿಸುತ್ತಾರೆ. ಜನ ಕಾನೂನು ವಿರುದ್ಧವೇ ಹೋಗುತ್ತಾರೆ ಅಂದ್ರೆ ಯಾವ ಮಟ್ಟಿಗೆ ಅವರು ಬಂಡೆದ್ದು ಹೋಗಿದ್ದಾರೆ ನೊಡಿ. ಕಾನೂನು ಕಾಯುವವರಿಗೆ ಬೆಲೆ ಇಲ್ಲ ಅಂದ್ರೆ ಪ್ರಜಾಪ್ರಭುತ್ವ ಎಲ್ಲಿಗೆ ಹೋಗಿ ಮುಟ್ಟಿದೆ ಎಂದು ಆತಂಕ ವ್ತಕ್ತಪಡಿಸಿದರು.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಬಿಗುವಿನ ವಾತಾವರಣ: ತೀವ್ರ ವಿರೋಧಕ್ಕೆ ಕಾರಣವಾಗಿದ್ದ ಖಡ್ಗ ಹಿಡಿದ ಟಿಪ್ಪು ಸುಲ್ತಾನ್ ಕಟೌಟ್‌ ಔಟ್

ಕಾಲೇಜು ವಿದ್ಯಾರ್ಥಿಗಳ ಮೇಲೆ ಕಣ್ಣು ಇಡಬೇಕು. ತಂದೆ ತಾಯಿ ಮಕ್ಕಳ ಮೇಲೆ ಕಾಳಜಿ ವಹಿಸಬೇಕು. ಪ್ರತಿ ಧರ್ಮದವರೂ ಶಿವಮೊಗ್ಗದಲ್ಲಿ ಬಾಳುತ್ತಿದ್ದಾರೆ. ನನ್ನ ಆಶ್ರಮದಲ್ಲಿ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಅಂತ ಭೇದಭಾವ ಇಲ್ಲ. ಶಾಂತಿ ಹಾಳಾಗುತ್ತಿರುವ ಮೂಲ ಎಲ್ಲಿದೆ, ಇದರ ತಾಯಿ ಬೇರನ್ನು ಹುಡುಕಬೇಕು. ಶಿವಮೊಗ್ಗದ ಗಲಾಟೆಯಲ್ಲಿ 15 ರಿಂದ 20 ವರ್ಷದ ಯುವಕರು ಭಾಗಿಯಾಗುತ್ತಾರೆ. ಇದು ಆತಂಕಕಾರಿಯಾಗಿದೆ ಎಂದು ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿ ಸೂಕ್ಷ್ಮವಾಗಿ ಹೇಳಿದರು.

ಈದ್ ಮಿಲಾದ್ ಗಲಾಟೆ: 24 ಎಫ್ಐಆರ್, 60 ಆರೋಪಿಗಳ ಬಂಧನ – ಎಸ್‌ಪಿ ಮಿಥುನ್

ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ ಪ್ರಕರಣ ಸಂಬಂಧ ಈವರೆಗೂ 24 ಎಫ್ಐಆರ್ ದಾಖಲಿಸಲಾಗಿದೆ ಎಂದು ಶಿವಮೊಗ್ಗದಲ್ಲಿ ಎಸ್‌ಪಿ ಜಿ.ಕೆ.ಮಿಥುನ್ ಕುಮಾರ್‌ ಹೇಳಿದ್ದಾರೆ. ಈವರೆಗೆ 60 ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದೇವೆ. ಕೆಲ ಆರೋಪಿಗಳನ್ನು ಚಿತ್ರದುರ್ಗ ಕಾರಾಗೃಹಕ್ಕೆ ಶಿಫ್ಟ್‌ ಮಾಡಿದ್ದೇವೆ. ಬಂಧಿತರಿಂದ 1 ಕಾರು, 1 ತ್ರಿಚಕ್ರ ವಾಹನ, 2 ಬೈಕ್ ಜಪ್ತಿ ಮಾಡಿದ್ದೇವೆ. ಗಲಾಟೆ ವೇಳೆ ಕಲ್ಲೆಸೆತದಿಂದ 7 ಮನೆಗಳ ಗಾಜು ಪುಡಿಪುಡಿಯಾಗಿವೆ. ಬೆಳಗ್ಗೆಯಿಂದ ಈವರೆಗೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ. 144 ಸೆಕ್ಷನ್ ಜಾರಿ ಹಿನ್ನೆಲೆಯಲ್ಲಿ ಅಹಿತಕರ ಘಟನೆ ನಡೆಯುತ್ತಿಲ್ಲ ಎಂದು ಶಿವಮೊಗ್ಗದಲ್ಲಿ ಎಸ್‌ಪಿ ಜಿ.ಕೆ.ಮಿಥುನ್ ಕುಮಾರ್‌ ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:45 pm, Mon, 2 October 23