ಶಿವಮೊಗ್ಗದಲ್ಲಿ ಆತಂಕ ಸೃಷ್ಟಿ -ಹರ್ಷ ಮನೆ ಗಲಾಟೆಗೆ ಟ್ವಿಸ್ಟ್: ಮತ್ತೆ ಕೋಮುಗಲಭೆಗೆ ತಹತಹಿಸುತ್ತಿದ್ದಾರಾ ಹರ್ಷನ ಕೊಲೆ ಆರೋಪಿ ಕಡೆಯವರು?
Shivamogga voilence: ಶಾಂತವಾಗಿರುವ ಶಿವಮೊಗ್ಗದಲ್ಲಿ ಪದೇ ಪದೇ ಇಂತಹ ಘಟನೆಯಂದ ಜನರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಎಲ್ಲರಿಗೂ ಈಗ ಒಂದೇ ಭಯ.. ಎಲ್ಲಿ ಮತ್ತೆ ಕೋಮಗಲಭೆ ಆಗುತ್ತದೋ.. ಸಾವು..ನೋವು..ಗಲಾಟೆಗಳು ನಡೆಯುತ್ತದೋ ಎನ್ನುವ ಆತಂಕ ನಗರದ ಜನರನ್ನು ಕಾಡುತ್ತಿದೆ.
ಶಿವಮೊಗ್ಗದ ಸೀಗೆಹಟ್ಟಿ ಹರ್ಷ ಮನೆ ಮುಂದೆ, ಕ್ಲಾರ್ಕ್ ಪೇಟೆ ಹಾಗೂ ಭರ್ಮಪ್ಪ ನಗರದಲ್ಲಿ ಕಳೆದ ಎರಡು ದಿನಗಳ ಹಿಂದೆ ನಡೆದ ಬೆದರಿಕೆ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಆದ್ರೆ ಹರ್ಷ ಕೊಲೆ ಪ್ರಕರಣದ ಎ1 ಆರೋಪಿ ಸಹೋದರನೇ ಹಿಂದೂ ಕಾರ್ಯಕರ್ತ ಹರ್ಷ ಮನೆ ಮುಂದೆ, ಪ್ರಕಾಶ್ ಮೇಲೆ ಅಟ್ಯಾಕ್ ಹಾಗೂ ಒಂದು ಅಂಗಡಿ ಧ್ವಂಸಕ್ಕೆ ಕಾರಣವಾಗಿದ್ದು.. ಮಲೆನಾಡಿನಲ್ಲಿ ಇನ್ನೂ ಕೂಡಾ ದ್ವೇಷ.. ವೈಷಮ್ಯಗಳು ತಣ್ಣಗಾಗಿಲ್ಲ. ಕೋಮುಗಲಭೆಗೆ ಮತ್ತೆ ಪಿತೂರಿಯ ಕುರಿತು ಒಂದು ವರದಿ ಇಲ್ಲಿದೆ…
ಶಿವಮೊಗ್ಗದಲ್ಲಿ ಮೂರು ದಿನಗಳ ಹಿಂದೆ ತಡರಾತ್ರಿ ಕ್ಲಾರ್ಕ್ ಪೇಟೆ, ಭರ್ಮಪ್ಪ ನಗರ ಹಾಗೂ ಸೀಗೆಹಟ್ಟಿಯಲ್ಲಿ ಎರಡು ಬೈಕ್ ನಲ್ಲಿ ಬಂದಿದ್ದ ಐವರು ಆರೋಪಿಗಳು ಸಿಕ್ಕಸಿಕ್ಕವರಿಗೆ ಬೆದರಿಕೆ ಹಾಕಿದ್ದರು. ಬಳಿಕ ಮೃತ ಹಿಂದೂ ಕಾರ್ಯಕರ್ತ ಹರ್ಷನ ಅಕ್ಕ ಸೇರಿದಂತೆ ಆತನ ಕುಟುಂಬಸ್ಥರಿಗೆ ಬೆದರಿಕೆ ಹಾಕಿದ್ದರು. ಬಳಿಕ ಭರ್ಮಪ್ಪ ನಗರದಲ್ಲಿ ಪ್ರಕಾಶ್ ಎಂಬ ಯುವಕನ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ ಕ್ಲಾರ್ಕ್ ಪೇಟೆಯಲ್ಲಿ ಟಿ ಅಂಗಡಿ ಧ್ವಂಸ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಈ ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ಫೌಜಾನ್, ಅಜ್ಗರ್, ಫರಾಜ್ ಎಂಬುವರನ್ನು ಬಂಧಿಸಿದ್ದಾರೆ. ಈ ಮೂವರ ಬಂಧನದ ಬಳಿಕ ಆರೋಪಿಗಳು… ನಾವು ಐದು ಜನರು ಸೇರಿ ಈ ಕೃತ್ಯ ನಡೆಸಿದ್ದಾರೆ ಎಂದು ಒಪ್ಪಿಕೊಂಡಿದ್ದು, ತಲೆ ಮರೆಸಿಕೊಂಡಿರುವ ಇನ್ನಿಬ್ಬರ ಇಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಈ ಐದು ಜನರು ಸೇರಿಯೇ ಆ ದಿನ ರಾತ್ರಿ ಗಲಾಟೆ ಮಾಡಿದ್ದಾರೆ. ಮೊದಲು ಹರ್ಷ ಮನೆ ಮುಂದೆ ಬೈಕ್ ಮೇಲೆ ಬಂದು ಗಲಾಟೆ ಮಾಡಿದ್ದರು. ಬಳಿಕ ಸತೀಶ್ ಅವರ ಟೀ ಅಂಗಿಗೆ ಹೋಗಿ ದಾಂಧಲೆ.. ಇದರ ಬಳಿಕ ಪ್ರಕಾಶ್ ಮೇಲೆ ಪೌಜಾನ್ ಮತ್ತು ಆತನ ಗ್ಯಾಂಗ್ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದರು.
ಈ ಘಟನೆ ಬಳಿಕ ಮತ್ತೆ ಶಿವಮೊಗ್ಗದಲ್ಲಿ ಗಲಭೆಯ ವಾತಾವರಣ ಸೃಷ್ಟಿಯಾಗಿತ್ತು. ನೂತನ ಎಸ್ಪಿ ಮಿಥುನ್ ಕುಮಾರ್ ಪರಿಸ್ಥಿತಿಯನ್ನು ಅರಿತು ಕೂಡಲೇ ಹೈಅಲರ್ಟ್ ಆಗಿದ್ದರು. ಗಲಾಟೆ ರಾತ್ರಿಯಿಂದ ಆರೋಪಿಗಳ ಬಂಧನದ ವರೆಗೆ ಹಗಲು ರಾತ್ರಿ ಎಸ್ಪಿ ಪ್ರಕರಣದ ಬೆನ್ನುಬಿದ್ದರು. ತಮ್ಮ ಪೊಲೀಸ್ ಅಧಿಕಾರಿಗಳಿಗೆ ಅಲರ್ಟ್ ಮಾಡಿ ದಾಂಧಲೆ ಮಾಡಿದ ಮೂವರನ್ನು ಬಂಧಿಸುವಲ್ಲಿ ದೊಡ್ಡಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಎರಡು ಬೈಕ್ ನಲ್ಲಿ ಬಂದಿದ್ದ ಫೌಜಾನ್, ಅಜರ್, ಫರಾಜ್ ಸೇರಿದಂತೆ ಐವರು ಆರೋಪಿಗಳು ಸೀಗೆಹಟ್ಟಿಗೆ ತಡರಾತ್ರಿ ತೆರಳಿ ಸಿಕ್ಕಸಿಕ್ಕವರಿಗೆ ಬೆದರಿಕೆ ಹಾಕಿದ್ದರು. ಬಳಿಕ ಕ್ಲಾರ್ಕ್ ಪೇಟೆಯಲ್ಲಿ ಪ್ರವೀಣ ಅಲಿಯಾಸ್ ಕುಲ್ಡಾ ಪ್ರವೀಣನ ಜೊತೆ ಗಲಾಟೆ ಮಾಡಿದ್ದಾರೆ. ಬಳಿಕ ಭರ್ಮಪ್ಪ ನಗರಕ್ಕೆ ಹೋಗಿ ಪ್ರಕಾಶ್ ಎಂಬ ಯುವಕನ ಮೇಲೆ ಹಲ್ಲೆ ನಡೆಸಿದ್ದರು. ಪೊಲೀಸರ ತನಿಖೆ ವೇಳೆ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ಹಲ್ಲೆ ನಡೆದಿದೆ ಎನ್ನಲಾಗುತ್ತಿದೆ.
ಆದ್ರೆ ಹರ್ಷ ಕೊಲೆ ಪ್ರಕರಣದ ಎ1 ಆರೋಪಿ ಖಾಸೀಪ್ ಸಹೋದರ ಫೌಜಾನ್ ಆಗಿದ್ದಾನೆ. ಈ ಫೌಜಾನ್ ಎರಡು ವರ್ಷಗಳ ಹಿಂದೆ ಹಿಂದೂ ಕಾರ್ಯಕರ್ತ ಜೀವನ ಜೊತೆಗೆ ತೀರ್ಥಹಳ್ಳಿ ರಸ್ತೆ ಸುಂದರ ಬಾರ್ ಎದುರು ಗಲಾಟೆ ಮಾಡಿಕೊಂಡಿದ್ದನು. ಕೊನೆಗೆ ಆತನ ಹತ್ಯೆ ಮಾಡಿ ಜೈಲಿಗೆ ಹೋಗಿದ್ದನು. ಸದ್ಯ ಬೇಲ್ ಮೇಲೆ ಫೌಜಾನ್ ಬಿಡುಗಡೆ ಹೊಂದಿದ್ದನು. ಇದರ ಮುಂದುವರೆದ ಭಾಗವಾಗಿ ಈಗ ಮತ್ತೆ ಅದೇ ಗಲಾಟೆ, ಗಲಭೆ ಹಾದಿಯನ್ನೇ ಎ1 ಆರೋಪಿ ಸಹೋದರ ತುಳಿದಿದ್ಧಾನೆ. ಇದರಿಂದ ಮತ್ತೆ ನಗರದಲ್ಲಿ ಕೋಮುಗಲಭೆಗೆ ಇವರೆಲ್ಲರೂ ಹೊಂಚು ಹಾಕಿದ್ದರು ಎನ್ನುವುದು ಬಹಿರಂಗವಾಗಿದೆ. ಈ ಎಲ್ಲ ಮುಸ್ಲಿಂ ಗೂಂಡಾಗಳಿಗೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಮೂರು ದಿನಗಳ ಹಿಂದೆ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಶಾಂತವಾಗಿರುವ ಶಿವಮೊಗ್ಗದಲ್ಲಿ ಪದೇ ಪದೇ ಇಂತಹ ಘಟನೆಯಂದ ಜನರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಎಲ್ಲರಿಗೂ ಈಗ ಒಂದೇ ಭಯ.. ಎಲ್ಲಿ ಮತ್ತೆ ಕೋಮಗಲಭೆ ಆಗುತ್ತದೋ.. ಸಾವು..ನೋವು..ಗಲಾಟೆಗಳು ನಡೆಯುತ್ತದೋ ಎನ್ನುವ ಆತಂಕ ನಗರದ ಜನರನ್ನು ಕಾಡುತ್ತಿದೆ. ಗೃಹ ಸಚಿವರ ತವರಿನಲ್ಲಿ ಪುಂಡರಿಗೆ ಪೊಲೀಸರು ತಕ್ಕ ಪಾಠ ಕಲಿಸುವ ಮೂಲಕ ನಗರದಲ್ಲಿ ಉತ್ತಮ ವಾತಾವರಣ ನಿರ್ಮಾಣ ಸೃಷ್ಟಿಸಬೇಕಿದೆ. (ವರದಿ: ಬಸವರಾಜ್ ಯರಗಣವಿ, ಟಿವಿ 9, ಶಿವಮೊಗ್ಗ)