ಶಿವಮೊಗ್ಗ, ಜ.22: ಅಯೋಧ್ಯೆ ರಾಮ ಮಂದಿರ (Ayodhya Ram Mandir) ಉದ್ಘಾಟನೆ ಹಿನ್ನೆಲೆ ಶಿವಮಗೊಗ್ಗದ (Shivamogga) ಶಿವಪ್ಪನಾಯಕ ವೃತ್ತದಲ್ಲಿ ಸಂಭ್ರಮಾಚರಣೆ ನಡೆಸುತ್ತಿದ್ದಾಗ ಮುಸ್ಲಿಂ ಮಹಿಳೆ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದಳು. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಎಸ್ ಈಶ್ವರಪ್ಪ (KS Eshwarappa), ಮುಸ್ಲಿಂ ಮಹಿಳೆ ಹುಚ್ಚಿಯಾಗಿದ್ದರೆ ಅಲ್ಲಾಹು ಅಕ್ಬರ್ ಘೋಷಣೆ ಹೇಗೆ ಕೂಗಿದಳು? ಮೋದಿಗೇ ಯಾಕೆ ಧಿಕ್ಕಾರ ಕೂಗಿದಳು ಎಂದು ಪ್ರಶ್ನಿಸಿದರು.
ಯಾವನೋ ಆಕ್ರಮಣಕಾರಿ ಬಾಬರ್ ದೇವಸ್ಥಾನ ಕೆಡವಿ ಮಸೀದಿ ಕಟ್ಟಿದ್ದ. ಆದರೆ ಈಗ 500 ವರ್ಷಗಳ ದೇಶದ ಹಿಂದೂಗಳ ಕನಸು ನನಸಾಗಿದೆ. ಶಿವಪ್ಪನಾಯಕ ಪ್ರತಿಮೆ ಬಳಿ ಸಂಭ್ರಮ ಆಚರಿಸುವ ವೇಳೆ ಬುರ್ಖಾ ಹಾಕಿಕೊಂಡು ಬಂದು ಅಲ್ಲಾಹು ಅಕ್ಬರ್ ಅಂತಾ ಕೂಗಿದ್ದಲ್ಲದೆ, ಪ್ರಧಾನಿ ನರೇಂದ್ರ ಮೋದಿಗೆ ಅಪಮಾನ ಮಾಡಿದ್ದಾಳೆ. ಈ ಬಗ್ಗೆ ಮಾಧ್ಯಮದಲ್ಲಿ ನೋಡಿ ಎಸ್ಪಿ ಜೊತೆ ಮಾತನಾಡಿದ್ದೇನೆ ಎಂದರು.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಮುಸ್ಲಿಂ ಮಹಿಳೆ ಮಾನಸಿಕ ಅಸ್ವಸ್ಥೆ: ಎಸ್ಪಿ ಮಿಥುನ್ ಕುಮಾರ್
ಆ ಮಹಿಳೆ ಹುಚ್ಚಿ ಅಂತಾ ಎಸ್ಪಿ ಹೇಳಿದ್ದಾರೆ. ನೀವು ಹುಚ್ಚಿ ಅಂತಾ ಹೇಗೆ ನಿರ್ಧಾರ ಮಾಡುತ್ತೀರಾ ಎಂದು ಎಸ್ಪಿ ಅವರನ್ನು ಕೇಳಿದ್ದೇನೆ. ಅಲ್ಲದೆ, ಆಕೆ ವಿರುದ್ಧ ಎಫ್ಐಆರ್ ದಾಖಲಿಸಿ, ಬಂಧಿಸುವಂತೆ ಹೇಳಿದ್ದೇನೆ. ನಿಸ್ಪಕ್ಷಪಾತವಾಗಿ ತನಿಖೆ ಮಾಡಬೇಕು ಎಂದು ಹೇಳಿದ್ದಾಗಿ ತಿಳಿಸಿದರು.
ಆಕೆ ಹುಚ್ಚಿ ಆಗಿದ್ದರೆ ಅಲ್ಲಾಹು ಅಕ್ಬರ್ ಹೇಗೆ ಕೂಗಿದಳು? ಮೋದಿಗೇ ಏಕೆ ಧಿಕ್ಕಾರ ಕೂಗಿದಳು? ಎಂದು ಪ್ರಶ್ನಿಸಿದ ಈಶ್ವರಪ್ಪ, ಸಂಭ್ರಮದ ಕಾರ್ಯಕ್ರಮದ ವೇಳೆ ಷಡ್ಯಂತ್ರ ನಡೆಸುವ ಕೆಲಸ ನಡೆದಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ, ಗೃಹ ಸಚಿವರು ಗಮನ ಹರಿಸಿ, ತನಿಖೆ ನಡೆಸಬೇಕು. ಇದರ ಹಿಂದೆ ಯಾರಿದ್ದಾರೆ, ಯಾರು ಕುಮ್ಮಕ್ಕು ಕೊಟ್ಟಿದ್ದಾರೆ ಎಲ್ಲವೂ ತನಿಖೆಯಿಂದ ಹೊರಗೆ ಬರಬೇಕು ಎಂದರು.
ಆ ಮಹಿಳೆ ಶಿವಮೊಗ್ಗದಲ್ಲಿ ಕೋಮುಗಲಭೆ ಸೃಷ್ಟಿಸಲು ಯತ್ನಿಸಿದ್ದಳು. ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ? ಅಯೋಧ್ಯೆಯ ಸಂಭ್ರಮದಲ್ಲಿ ಇರುವಾಗ ಇದ್ದಕ್ಕಿದ್ದಂತೆ ಗಲಾಟೆ ನಡೆಸುವ ಪ್ರಯತ್ನ ಮಾಡಿರುವುದು ಬೇಸರವಾಗಿದೆ ಎಂದರು.
ರಾಜ್ಯದ ಮತ್ತಷ್ಟ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ