ಶಿವಮೊಗ್ಗದಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ: ಬೆಂಗಳೂರು, ಮೈಸೂರಿನಿಂದ ಬರ್ತಿದ್ದ ಕಾಲ್‌ಗರ್ಲ್ಸ್!

ಶಿವಮೊಗ್ಗ ನಗರದಲ್ಲಿ ಅಕ್ರಮವಾಗಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಮೈಸೂರು, ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಂದ ಕಾಲ್‌ ಗರ್ಲ್ಸ್‌ ರೀತಿ ಕೆಲಸ ಮಾಡುವ ಮಹಿಳೆಯರನ್ನ ಕರೆಯಿಸಿ ದಂಧೆ ನಡೆಸುತ್ತಿದ್ದವನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಶಿವಮೊಗ್ಗದಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ: ಬೆಂಗಳೂರು, ಮೈಸೂರಿನಿಂದ ಬರ್ತಿದ್ದ ಕಾಲ್‌ಗರ್ಲ್ಸ್!
ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ
Updated By: ರಮೇಶ್ ಬಿ. ಜವಳಗೇರಾ

Updated on: Dec 21, 2023 | 5:44 PM

ಶಿವಮೊಗ್ಗ (ಡಿಸೆಂಬರ್.21): ಶಿವಮೊಗ್ಗ(Shivamogga) ನಗರದಲ್ಲಿ ವೇಶ್ಯಾವಾಟಿಕೆ (prostitution) ದಂಧೆ ನಡೆಸುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿ, ಮೂವರು ಮಹಿಳೆಯರು ಹಾಗೂ ಇಬ್ಬರು ಪುರುಷರನ್ನು ವಶಕ್ಕೆ ಪಡೆದಿದ್ದಾರೆ. ಸೂಕ್ತ ಮಾಹಿತಿ ಆಧಾರದಲ್ಲಿ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ಶಿವಮೊಗ್ಗದ ಜಯನಗರ ಠಾಣೆಯ ಪೊಲೀಸರು ಗಾಂಧಿನಗರದ 1ನೇ ಪ್ಯಾರಲಲ್ ರಸ್ತೆಯಲ್ಲಿರುವ ಮನೆಯ ಮೇಲೆ ದಾಳಿ ಮಾಡಿದ್ದಾರೆ.

ಜಯನಗರ ಪೊಲೀಸ್ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಸಿದ್ದೇಗೌಡ ಅವರ ನೇತೃತ್ವದಲ್ಲಿ ನಡೆದ ದಾಳಿ ಮಾಡಲಾಗಿದ್ದು, ಅಲ್ಲಿ ಸಿಕ್ಕಿಬಿದ್ದವರನ್ನು ವಿಚಾರಣೆ ಮಾಡಿದಾಗ ಮತ್ತಷ್ಟು ಸ್ಪೋಟಕ ವಿಚಾರಗಳು ಬೆಳಕಿಗೆ ಬಂದಿವೆ. ಶಿವಮೊಗ್ಗದ ಏಜೆಂಟ್ ಗಂಗಾಧರ್ ಎಂಬಾತ ಮೈಸೂರು, ಬೆಂಗಳೂರು ಮೊದಲಾದ ಮಹಾನಗರಗಳಿಂದ ಕಾಲ್‌ ಗರ್ಲ್ಸ್‌ ರೀತಿ ಕೆಲಸ ಮಾಡುವ ಮಹಿಳೆಯರನ್ನ ಕರೆಯಿಸಿ ದಂಧೆ ನಡೆಸುತ್ತಿದ್ದನು ಎನ್ನುವ ಅಂಶ ಬೆಳಕಿಗೆ ಬಂದಿದೆ.

ಶಿವಮೊಗ್ಗದ ಗಾಂಧಿನಗರ ಬಡಾವಣೆಯಲ್ಲಿರುವ ಮನೆಯೊಂದರಲ್ಲಿ ಕಳೆದ ಎರಡು ವರ್ಷದಿಂದ ವೇಶ್ಯವಾಟಿಕೆ ನಡೆಯುತ್ತಿತ್ತು. ವೇಶ್ಯಾವಾಟಿಕೆ ಬಗ್ಗೆ ಸ್ಥಳೀಯರಿಂದ ದೂರು ಬಂದ ಹಿನ್ನೆಲೆ ಪೊಲೀಸರ ದಾಳಿ ಮಾಡಿದ್ದಾರೆ. ಇನ್ನು ಪೊಲೀಸರ ದಾಳಿಯ ವೇಳೆ ಸ್ಥಳೀಯ ಓರ್ವ ಮಹಿಳೆ, ಬೆಂಗಳೂರು ಮತ್ತು ಮೈಸೂರಿನಿಂದ ಬಂದ ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ. ಈ ಸಂಬಂಧ ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.