AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಮೊಗ್ಗ: ವಿದ್ಯುತ್ ಶಾಕ್‌ನಿಂದ ಬಾಲಕನಿಗೆ ಗಂಭೀರ ಗಾಯ ಕೇಸ್​: 5 ಲಕ್ಷ ರೂ. ಪರಿಹಾರ ವಿತರಣೆ

ವಿದ್ಯುತ್ ಶಾಕ್‌ನಿಂದ ಗಂಭೀರವಾಗಿ ಗಾಯಗೊಂಡಿದ್ದ ದಿಲೀಪ್ ಕುಟುಂಬಕ್ಕೆ ಬೆಸ್ಕಾಂ ಇಲಾಖೆಯಿಂದ 5 ಲಕ್ಷ ರೂ. ಪರಿಹಾರ ನೀಡಲಾಗಿದೆ. ದಾವಣಗೆರೆ ಜಿಲ್ಲೆ ಹೊನ್ನಾಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಾಂತನಗೌಡ ದಿಲೀಪ್ ತಾಯಿ ರತ್ನಾಬಾಯಿ ಚೆಕ್‌ ವಿತರಿಸಿದ್ದಾರೆ. ಟಿವಿ9ನಲ್ಲಿ ವರದಿ ಪ್ರಸಾರ ಬಳಿಕ ಎಚ್ಚೆತ್ತ ಬೆಸ್ಕಾಂನಿಂದ ಪರಿಹಾರ ವಿತರಣೆ ಮಾಡಲಾಗಿದೆ.

ಶಿವಮೊಗ್ಗ: ವಿದ್ಯುತ್ ಶಾಕ್‌ನಿಂದ ಬಾಲಕನಿಗೆ ಗಂಭೀರ ಗಾಯ ಕೇಸ್​: 5 ಲಕ್ಷ ರೂ. ಪರಿಹಾರ ವಿತರಣೆ
ಗಾಯಾಳು ದಿಲೀಪ್ ಕುಟುಂಬಕ್ಕೆ 5 ಲಕ್ಷ ಪರಿಹಾರದ ಚೆಕ್ ವಿತರಣೆ
Basavaraj Yaraganavi
| Updated By: ಗಂಗಾಧರ​ ಬ. ಸಾಬೋಜಿ|

Updated on: Jan 14, 2024 | 3:27 PM

Share

ಶಿವಮೊಗ್ಗ, ಜನವರಿ 14: ವಿದ್ಯುತ್ (Electrocution) ಶಾಕ್‌ನಿಂದ ಗಂಭೀರವಾಗಿ ಗಾಯಗೊಂಡಿದ್ದ ದಿಲೀಪ್ ಕುಟುಂಬಕ್ಕೆ ಬೆಸ್ಕಾಂ ಇಲಾಖೆಯಿಂದ 5 ಲಕ್ಷ ರೂ. ಪರಿಹಾರ ನೀಡಲಾಗಿದೆ. ದಾವಣಗೆರೆ ಜಿಲ್ಲೆ ಹೊನ್ನಾಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಾಂತನಗೌಡ ದಿಲೀಪ್ ತಾಯಿ ರತ್ನಾಬಾಯಿ ಚೆಕ್‌ ವಿತರಿಸಿದ್ದಾರೆ. ಟಿವಿ9ನಲ್ಲಿ ವರದಿ ಪ್ರಸಾರ ಬಳಿಕ ಎಚ್ಚೆತ್ತ ಬೆಸ್ಕಾಂನಿಂದ ಪರಿಹಾರ ವಿತರಣೆ ಮಾಡಲಾಗಿದೆ. ಮೊನ್ನೆ ಶಿವಮೊಗ್ಗ ಏರ್‌ಪೋರ್ಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಭೇಟಿಯಾಗಿದ್ದ ಬಾಲಕ, ತಾಯಿ ಸೂಕ್ತ ಪರಿಹಾರ, ಬಾಲಕನ ತಾಯಿಗೆ ಬೆಸ್ಕಾಂ ಇಲಾಖೆಯಲ್ಲಿ ಉದ್ಯೋಗ ನೀಡುವ ಭರವಸೆ ನೀಡಿದ್ದರು.

ಸಿಎಂ ಸಿದ್ದರಾಮಯ್ಯ ಭರವಸೆ ಹಿನ್ನೆಲೆ ಇದೀಗ ಬೆಸ್ಕಾಂ 5 ಲಕ್ಷ ರೂ. ಪರಿಹಾರ ಹಣ ನೀಡಿದೆ. ಪರಿಹಾರ ಸಿಕ್ಕ ಹಿನ್ನೆಲೆ ಟಿವಿ9ಗೆ ತಾಯಿ ರತ್ನಾಬಾಯಿ ಧನ್ಯವಾದ ತಿಳಿಸಿದ್ದಾರೆ. ನ್ಯಾಮತಿ ತಾಲೂಕಿನ ಹೊಸಜೋಗ ಗ್ರಾಮದ ನಿವಾಸಿ ಗಾಯಾಳು ದಿಲೀಪ್​ ಡಿ.3ರಂದು ಜಿಲ್ಲೆಯ ನ್ಯಾಮತಿ ತಾಲೂಕಿನ ಗುಂಡಿಚಟ್ನಹಳ್ಳಿ ಬಳಿ ಹೊಲದಲ್ಲಿ ಆಟವಾಡುವಾಗ ವಿದ್ಯುತ್ ಶಾಕ್‌ ಹೊಡೆದಿತ್ತು.

ಇದನ್ನೂ ಓದಿ: ಹೊಲದಲ್ಲಿ ಬಾಲಕನಿಗೆ ವಿದ್ಯುತ್ ಶಾಕ್ ಪ್ರಕರಣ: ಬೆರಳುಗಳು ಮುಂಗೈ ತೆಗೆದ ವೈದ್ಯರು, ಇನ್ನೂ ಜಡ್ಡುಗಟ್ಟಿರುವ ಬೆಸ್ಕಾಂ ಅಧಿಕಾರಿಗಳು

ಜ.6ರಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಬಲಗೈನ ಮುಂಗೈ ಹಾಗೂ ಎಡಗಾಲಿನ 3 ಬೆರಳು ಕಟ್‌ ಮಾಡಲಾಗಿತ್ತು. ಗಂಭೀರ ಗಾಯಗೊಂಡು ಬಾಲಕ ನರಳುತ್ತಿದ್ದರೂ ನಿರ್ಲಕ್ಷ್ಯಿಸಲಾಗಿತ್ತು. ಟಿವಿ9ನಲ್ಲಿ ನಿರಂತರ ವರದಿ ಪ್ರಸಾರ ಬಳಿಕ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿತ್ತು.

ನಿನ್ನೆ ದಾವಣಗೆರೆ ಜಿಲ್ಲೆಯ ಹರಿಹರದಿಂದ ಬೆಸ್ಕಾಂ ಕಚೇರಿಯ ಅಧೀಕ್ಷಕ ಎಂಜಿನಿಯರ್ ವಿಜಯರ್ ಕುಮಾರ್ ಅವರು ಮೆಗ್ಗಾನ್ ಜಿಲ್ಲಾಸ್ಪತ್ರೆತೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದ್ದಾರೆ. ಕುಟುಂಬಕ್ಕೆ ಪರಿಹಾರ ಮತ್ತು ಬಾಲಕ ತಾಯಿಗೆ ಉದ್ಯೋಗ ನೀಡುವ ಭರವಸೆ ನೀಡಿದ್ದಾರೆ. ಬಾಲಕ ಬಲಗೈಯ ಮುಂಗೈ ಕಟ್ ಆಗಿದೆ. ಬಾಲಕನಿಗೆ ಕೃತಕ ಕೈ ಜೋಡಣೆ ಮತ್ತು ವೈದ್ಯಕೀಯ ಚಿಕಿತ್ಸಾ ವೆಚ್ಚ ಭರಿಸುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಮತ್ತೊಂದು ವಿದ್ಯುತ್ ಅವಘಡ.. ವಿಕಲಚೇತನ ಬಾಲಕನಿಗೆ ಹೈ ಕರೆಂಟ್ ಶಾಕ್, ಬೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿ, ಹೆತ್ತವರ ಕಣ್ಣೀರು

ಘಟನೆ ನಡೆದು ಒಂದು ತಿಂಗಳಾದ್ರೂ ಹೊನ್ನಾಳಿ ಕಾಂಗ್ರೆಸ್ ಶಾಸಕ ಶಾಂತನಗೌಡ ಭೇಟಿ ನೀಡಿರಲಿಲ್ಲ. ಈ ನಡುವೆ ನಿನ್ನೆ ರಾತ್ರಿ ಶಾಸಕರು ಆಸ್ಪತ್ರೆಗೆ ಭೇಟಿ ನೀಡಿ ಬಾಕನ ಆರೋಗ್ಯ ವಿಚಾರಿಸಿದ್ದಾರೆ. ಅವರು ಕೂಡ ಸರಕಾರದಿಂದ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು.

ಬಡ ಬಾಲಕನ ವಿದ್ಯುತ್ ತಂತಿ ಜೋತು ಬಿದ್ದ ಪರಿಣಾಮ ಕರೆಂಟ್ ಶಾಕ್​ಗೆ ತುತ್ತಾಗಿದ್ದನು. ಈತನ ರೋಧನೆ ಕಣ್ಣಿರು ಸಂಕಟ ಯಾರು ಕೇಳುವರೇ ಇರಲಿಲ್ಲ. ಸದ್ಯ ಬಾಲಕನ ಕುಟುಂಬಕ್ಕೆ ಸರಕಾರ ಪರಿಹಾರ ಮತ್ತು ತಾಯಿಗೆ ಉದ್ಯೋಗ ಮುಡುವುದಕ್ಕೆ ಮುಂದಾಗಿರುವುದು ಸ್ವಾಗತಾರ್ಹ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.