ಪಿಎ ವಿರುದ್ಧವೇ ಸಚಿವರಿಗೆ ದೂರು ನೀಡಿದ ಮಹಿಳೆ; ಯಾಕೆ ಗೊತ್ತಾ?

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 27, 2023 | 3:11 PM

ಪಿಎ ವಿರುದ್ಧವೇ ಸಚಿವ ಮಧು ಬಂಗಾರಪ್ಪ (Madhu Bangarappa)ಗೆ ಮಹಿಳೆಯೋರ್ವಳು ದೂರು ನೀಡಿದ ಘಟನೆ ಶಿವಮೊಗ್ಗ(Shivamogga)ದಲ್ಲಿ ನಡೆದಿದೆ. ‘ಸರ್ ನಮ್ಮ ಸಮಸ್ಯೆಗಳನ್ನು ಹೇಳಲು ಬಂದ್ರೆ ನಿಮ್ಮ ಪಿಎ(ಆಪ್ತ ಸಹಾಯಕ) ಸರಿಯಾಗಿ ಸ್ಪಂದಿಸುವುದಿಲ್ಲ ಎಂದಿದ್ದಾರೆ.

ಪಿಎ ವಿರುದ್ಧವೇ ಸಚಿವರಿಗೆ ದೂರು ನೀಡಿದ ಮಹಿಳೆ; ಯಾಕೆ ಗೊತ್ತಾ?
ಪಿಎ ವಿರುದ್ಧವೇ ಸಚಿವ ಮಧು ಬಂಗಾರಪ್ಪಗೆ ದೂರು ನೀಡಿದ ಮಹಿಳೆ
Follow us on

ಶಿವಮೊಗ್ಗ, ಡಿ.27: ಪಿಎ ವಿರುದ್ಧವೇ ಸಚಿವ ಮಧು ಬಂಗಾರಪ್ಪ (Madhu Bangarappa)ಗೆ ಮಹಿಳೆಯೋರ್ವಳು ದೂರು ನೀಡಿದ ಘಟನೆ ಶಿವಮೊಗ್ಗ(Shivamogga)ದಲ್ಲಿ ನಡೆದಿದೆ. ‘ಸರ್ ನಮ್ಮ ಸಮಸ್ಯೆಗಳನ್ನು ಹೇಳಲು ಬಂದ್ರೆ ನಿಮ್ಮ ಪಿಎ(ಆಪ್ತ ಸಹಾಯಕ) ಸರಿಯಾಗಿ ಸ್ಪಂದಿಸುವುದಿಲ್ಲ. ಹಾಗೆಯೇ ನಮ್ಮನ್ನು ವಾಪಸ್​ ಕಳುಹಿಸುತ್ತಾರೆ. ಹೀಗಾದರೆ ಹೇಗೆ ಎಂದು ಮಹಿಳೆ ದೂರು ನೀಡಿದ್ದಾರೆ. ಈ ವೇಳೆ ಪ್ರತಿಕ್ರಿಯಿಸಿದ ಸಚಿವರು, ಸಮಸ್ಯೆ ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ.

BSY ಸರ್ಕಾರದ ವಿರುದ್ಧ ಯತ್ನಾಳ್​ ಭ್ರಷ್ಟಾಚಾರ ಆರೋಪ; ಇದು ಸತ್ಯ ಎಂದ ಸಚಿವರು

ಇನ್ನು ಬಿಎಸ್​ ಯಡಿಯೂರಪ್ಪ ಸರ್ಕಾರದ ವಿರುದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭ್ರಷ್ಟಾಚಾರ ಆರೋಪ ಕುರಿತು ಮಾತನಾಡಿದ ಅವರು ‘ಯತ್ನಾಳ್​ ಸತ್ಯವನ್ನು ನುಡಿದಿದ್ದಾರೆ. ನಾವು ವಿಪಕ್ಷದಲ್ಲಿದ್ದಾಗ ಮೊದಲಿಂದಲೂ ಹೇಳುತ್ತಲೇ ಇದ್ದೆವು,
ಯತ್ನಾಳ್​ ಆರೋಪದ ಬಗ್ಗೆ ಕ್ರಮ ತೆಗೆದುಕೊಳ್ಳುವುದು ಒಳ್ಳೆಯದು, ಸರ್ಕಾರದ ಹಣವನ್ನ ದುರ್ಬಳಕೆ ಮಾಡಿಕೊಳ್ಳಲು ಬರುವುದಿಲ್ಲ. ಯತ್ನಾಳ್ ಅವರು ಸರ್ಕಾರದ ಗಮನಕ್ಕೆ ತರಬೇಕು ಎಂದು ಶಿವಮೊಗ್ಗದಲ್ಲಿ ಶಿಕ್ಷಣ ಖಾತೆ ಸಚಿವ ಮಧು ಬಂಗಾರಪ್ಪ ಹೇಳಿದರು.

ಇದನ್ನೂ ಓದಿ:ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿರುದ್ಧ ದಾಖಲಾಯ್ತು ಎಫ್ಐಆರ್, ಏನಿದು ಪ್ರಕರಣ?

ಸಂಸದ ಪ್ರತಾಪ್ ಸಿಂಹಗೆ ತಿರುಗೇಟು ಕೊಟ್ಟ ಸಚಿವ ಮಧು ಬಂಗಾರಪ್ಪ

ಸಂಸದ ಪ್ರತಾಪ್ ಸಿಂಹಗೆ ಸಚಿವ ಮಧು ಬಂಗಾರಪ್ಪ ತಿರುಗೇಟು ಕೊಟ್ಟಿದ್ದಾರೆ. ಹುಣಸೂರಿನಲ್ಲಿ ನಡೆದ ಹನುಮ ಜಯಂತಿ ಕಾರ್ಯಕ್ರಮದಲ್ಲಿ ಸೋಮಾರಿ ಸಿದ್ದ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇನಕಾರಿ ಹೇಳಿಕೆ ನೀಡಿದ್ದರು. ಈ ಕುರಿತು ‘
ಪ್ರತಾಪ್ ಸಿಂಹ ಏನು ಅಂತ ಅವರೇ ಹೇಳಿಕೊಂಡಿದ್ದಾರೆ. ಸೋಮಾರಿಗಳು ತಾನೇ ಇಂತಹ ಮಾತುಗಳನ್ನ ಹೇಳುವುದು. ಬುದ್ದಿವಂತರು ಇಂತಹ ಹೇಳಿಕೆ ಕೊಟ್ತಾರಾ?, ಮಾಧ್ಯಮದಲ್ಲಿ ಮಾತನಾಡುವುದನ್ನು ಬಿಟ್ಟು ಏನ್ ಸಾಹಸ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ರಾಜ್ಯದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ