ಸಸ್ಪೆಂಡ್ ಆಗಿದ್ದರೂ ಬುದ್ಧಿ ಕಲಿತ್ತಿಲ್ಲ: ಮತ್ತೆ ಅದೇ ಪ್ರಾಧ್ಯಾಪಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪ

ಶಿವಮೊಗ್ಗ ಮೆಡಿಕಲ್ ಕಾಲೇಜಿನಲ್ಲಿ ಮತ್ತೊಂದು ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ಈ ಹಿಂದೆ ಶಿವಮೊಗ್ಗ ಮೆಡಿಕಲ್ ಕಾಲೇಜಿನ ಸರ್ಜರಿ ವಿಭಾಗದ ಸಹ ಪ್ರಾಧ್ಯಾಪಕ ಅಶ್ವಿನ್ ಹೆಬ್ಬಾರ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿತ್ತು. ಇದರಿಂದ ಸಹ ಪ್ರಾಧ್ಯಾಪಕ ಡಾ.ಅಶ್ವಿನ್ ಹೆಬ್ಬಾರ್‌ ಮೂರು ತಿಂಗಳು ಅಮಾನತುಗೊಂಡಿದ್ದರು. ಇದೀಗ ಮತ್ತೆ ಇದೇ ಡಾ.ಅಶ್ವಿನ್ ಹೆಬ್ಬಾರ್‌ ವಿರುದ್ಧ ಮತ್ತೋರ್ವ ವಿದ್ಯಾರ್ಥಿನಿ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾಳೆ.

ಸಸ್ಪೆಂಡ್ ಆಗಿದ್ದರೂ ಬುದ್ಧಿ ಕಲಿತ್ತಿಲ್ಲ: ಮತ್ತೆ ಅದೇ ಪ್ರಾಧ್ಯಾಪಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪ
Shivamogga Medical College
Updated By: ರಮೇಶ್ ಬಿ. ಜವಳಗೇರಾ

Updated on: Jun 23, 2025 | 4:49 PM

ಶಿವಮೊಗ್ಗ, ಜೂನ್ 23): ಶಿವಮೊಗ್ಗ ಮೆಡಿಕಲ್ ಕಾಲೇಜಿನ (Shivamogga medical college) ಸರ್ಜರಿ ವಿಭಾಗದ ಸಹ ಪ್ರಾಧ್ಯಾಪಕ (assistant professor) ಅಶ್ವಿನ್ ಹೆಬ್ಬಾರ್‌ ವಿರುದ್ಧ ಮತ್ತೆ ಲೈಂಗಿಕ ಕಿರುಕುಳ (sexual harassment )ಆರೋಪ ಕೇಳಿಬಂದಿದೆ. ಈ ಹಿಂದೆ ಡಾ ಅಶ್ವಿನ್ ಹೆಬ್ಬಾರ್ ಲೈಂಗಿಕ ಕಿರುಕುಳ ಆರೋಪದ ಮೇಲೆ ಮೂರು ತಿಂಗಳು ಸಸ್ಪೆಂಡ್ ಆಗಿದ್ದರು. ಇದೀಗ ಮತ್ತೋರ್ವ ಮೆಡಿಕಲ್ ವಿದ್ಯಾರ್ಥಿನಿ (Stdeunt) ಡಾ.ಅಶ್ವಿನ್ ಹೆಬ್ಬಾರ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದು, ಈ ಸಂಬಂಧ ಸಂತ್ರಸ್ತ ವಿದ್ಯಾರ್ಥಿನಿ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇನ್ನು ಆರೋಪ ಕೇಳಿಬರುತ್ತಿದ್ದಂತೆ ಸಹ ಪ್ರಾಧ್ಯಾಪಕ ಡಾ.ಅಶ್ವಿನ್ ಹೆಬ್ಬಾರ್‌ ಕರ್ತವ್ಯಕ್ಕೆ ಗೈರಾಗಿದ್ದಾರೆ. ಹೀಗಾಗಿ ಅಶ್ವಿನ್ ಹೆಬ್ಬಾರ್‌ ಮೇಲೆ ಮತ್ತಷ್ಟು ಅನುಮಾನ ಹುಟ್ಟಿಕೊಂಡಿದೆ.

ಶಿವಮೊಗ್ಗ ಮೆಡಿಕಲ್ ಕಾಲೇಜ್ ನ ಸರ್ಜರಿ ವಿಭಾಗದ ಸಹ ಪ್ರಾಧ್ಯಾಪಕ ಡಾ. ಅಶ್ವಿನ್ ಹೆಬ್ಬಾರ್ ವಿರುದ್ಧ ಈ ಕೂಡಾ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿತ್ತು. ಹೀಗಾಗಿ ಇವರು ಮೂರು ತಿಂಗಳು ಅಮಾನತುಗೊಂಡಿದ್ದರು. ಇದೀಗ ಮತ್ತೆ ಮತ್ತೋರ್ವ ವಿದ್ಯಾರ್ಥಿನಿಯಿಂದ ಲೈಂಗಿಕ ಕಿರುಕುಳ ಆರೋಪ ಕೇಳಿಬರುತ್ತಿದ್ದಂತೆಯೇ ಅಶ್ವಿನ್ ಡ್ಯೂಟಿಗೆ ಗೈರಾಗಿದ್ದಾರೆ.

ಇದನ್ನೂ ಓದಿ: ಅಂಗಡಿಗೆ ತೆರಳುತ್ತಿದ್ದ ಯುವತಿಗೆ ಲೈಂಗಿಕ ದೌರ್ಜನ್ಯ: ಸಾಲದಕ್ಕೆ ಮನೆ ಬಳಿ ಹೋಗಿ ಗಲಾಟೆ

ಇನ್ನು ಈ ಪ್ರಕರಣ ಸಂಬಂಧ ಟಿವಿ9ಗೆ ಸಿಮ್ಸ್ ನ ಮುಖ್ಯ ಆಡಳಿತಾಧಿಕಾರಿ ಉಮಾ ಡಿ ಸದಾಶಿವ ಪ್ರತಿಕ್ರಿಯಿಸಿದ್ದು, ಕಾಲೇಜಿನ ಆಂತರಿಕ ತನಿಖಾ ವರದಿ ಮತ್ತು ಪೊಲೀಸ್ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತೇವೆ. ಎರಡು ತನಿಖಾ ವರದಿಗಳನ್ನು ಆಧರಿಸಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ