ಬ್ರೇಕ್‌ ಫೇಲಾಗಿ ಸಿಗಂದೂರು ಬಳಿ ಶರಾವತಿ ನದಿಯಲ್ಲಿ ಮುಳುಗಿದ ಲಾರಿ, ಚಾಲಕ ಪಾರು

| Updated By: ಆಯೇಷಾ ಬಾನು

Updated on: Aug 04, 2023 | 10:54 AM

ಸಾಗರದ ಸಿಗಂದೂರು ಸೇತುವೆ ಕಾಮಗಾರಿಗೆ ಅಂಬಾರಗೊಡ್ಲು ಕಡೆಯಿಂದ ಜಲ್ಲಿ ತುಂಬಿಸಿಕೊಂಡು ಹೊರಟಿದ್ದ ಲಾರಿ ಬ್ರೇಕ್‌ ಫೇಲ್ ಆಗಿ ಶರಾವತಿ ಹಿನ್ನೀರಿಗೆಗೆ ಇಳಿದಿದೆ.

ಬ್ರೇಕ್‌ ಫೇಲಾಗಿ ಸಿಗಂದೂರು ಬಳಿ ಶರಾವತಿ ನದಿಯಲ್ಲಿ ಮುಳುಗಿದ ಲಾರಿ, ಚಾಲಕ ಪಾರು
ಸಾಂದರ್ಭಿಕ ಚಿತ್ರ
Follow us on

ಶಿವಮೊಗ್ಗ, ಆ.04: ಬ್ರೇಕ್‌ ಫೇಲಾಗಿ 10 ಚಕ್ರದ ಲಾರಿಯೊಂದು ಸಿಗಂದೂರು ಸೇತುವೆ ನಿರ್ಮಾಣ(Sigandur Bridge) ಕಾಮಗಾರಿ ಸ್ಥಳದಲ್ಲಿ ಜಾರಿ ಬಿದ್ದಿದ್ದು ಶರಾವತಿ ಹಿನ್ನೀರಿನಲ್ಲಿ(Sharavathi Backwater) ಮುಳುಗಿದ ಘಟನೆ ನಡೆದಿದೆ. ಅದೃಷ್ಟವಶಾತ್‌ ಚಾಲಕ ಜೀವ ಭಯದಿಂದ ಪಾರಾಗಿದ್ದಾರೆ.

ಸಿಗಂದೂರು ಸೇತುವೆ ಕಾಮಗಾರಿಗೆ ಅಂಬಾರಗೊಡ್ಲು ಕಡೆಯಿಂದ ಜಲ್ಲಿ ತುಂಬಿಸಿಕೊಂಡು ಹೊರಟಿದ್ದ ಲಾರಿ ಬ್ರೇಕ್‌ ಫೇಲ್ ಆಗಿ ಶರಾವತಿ ಹಿನ್ನೀರಿಗೆಗೆ ಇಳಿದಿದೆ. ಸೇತುವೆ ನಿರ್ಮಾಣ ಕಂಪನಿ ದಿಲೀಪ್‌ ಬಿಲ್ಡ್‌ ಕನ್‌ಸ್ಟ್ರಕ್ಷನ್ ಸಂಸ್ಥೆಗೆ ಲಾರಿಯಲ್ಲಿ ಸೇತುವೆ ನಿರ್ಮಾಣ ಸಾಮಗ್ರಿ ತರಲಾಗಿತ್ತು. ಗುರುವಾರ ಸಂಜೆ ಹೊಳೆಬಾಗಿಲು ಬಳಿ ಲಾಂಚ್‌ಗೆ ಹತ್ತಿಸಲು ಲಾರಿಯನ್ನು ಹಿಮ್ಮುಖವಾಗಿ ಚಲಿಸುತ್ತಿದ್ದಾಗ ಘಟನೆ ಸಂಭವಿಸಿದೆ. ಅದೃಷ್ಟವಶಾತ್‌ ಚಾಲಕ ಲಾರಿಯಿಂದ ಹಾರಿ ಪ್ರಾಣಪಾಯದಿಂದ ಪಾರಾಗಿದ್ದಾನೆ. ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಸೇತುವೆ ಕಾಮಗಾರಿ ಮಾಡುತ್ತಿರುವ ಡಿಬಿಎಲ್‌ ಕಂಪನಿಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ: ವಿದೇಶ ಪ್ರವಾಸದಿಂದ ಯಡಿಯೂರಪ್ಪ ವಾಪಸ್, ವಿಮಾನ ನಿಲ್ದಾಣದಲ್ಲಿ ಕೈ ಕುಲುಕಿ ಬರಮಾಡಿಕೊಂಡ ಡಿಕೆ ಶಿವಕುಮಾರ್

ಸಾಗರ ತಾಲೂಕಿನ ಶರಾವತಿ ನದಿಯ ಲಿಂಗನಮಕ್ಕಿ ಹಿನ್ನೀರಿನಿಂದ ಸಿಗಂದೂರನ್ನು ಸಂಪರ್ಕಿಸುವ ಕೇಬಲ್‌ ಆಧಾರಿತ ಬಿಡ್ಜ್‌ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದನ್ನು 424 ಕೋಟಿ ರೂ. ವೆಚ್ಚದಲ್ಲಿ 2.14 ಕಿಲೋ ಮೀಟರ್‌ ಉದ್ದ, 16 ಮೀಟರ್‌ ಅಗಲವಾಗಿ ನಿರ್ಮಿಸಲಾಗುತ್ತಿದೆ. ಸೇತುವೆ ಕಾಮಗಾರಿಯನ್ನು ಮಧ್ಯಪ್ರದೇಶ ಮೂಲದ ದಿಲೀಪ್‌ ಬಿಲ್ಡ್‌ ಕನ್‌ಸ್ಟ್ರಕ್ಷನ್ ಕಂಪನಿಗೆ ಗುತ್ತಿಗೆ ನೀಡಲಾಗಿದೆ. 2019ರಲ್ಲಿ ಕಾಮಗಾರಿ ಆರಂಭವಾಗಿದ್ದು, 2024 ಮಾರ್ಚ್ ಅಂತ್ಯಕ್ಕೆ ಮುಗಿಯುವ ನಿರೀಕ್ಷೆಯಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ