ವಿದೇಶ ಪ್ರವಾಸದಿಂದ ಯಡಿಯೂರಪ್ಪ ವಾಪಸ್, ವಿಮಾನ ನಿಲ್ದಾಣದಲ್ಲಿ ಕೈ ಕುಲುಕಿ ಬರಮಾಡಿಕೊಂಡ ಡಿಕೆ ಶಿವಕುಮಾರ್
ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಅವರು ಕುಟುಂಬ ಸಮೇತ ಯುರೋಪ್ ಪ್ರವಾಸಕ್ಕೆ ತೆರಳಿದ ಬೆನ್ನಲ್ಲೇ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸಹ ವಿದೇಶಕ್ಕೆ ಹೋಗಿದ್ದರು. ಇದೀಗ ಇಬ್ಬರು ಮಾಜಿ ಮುಖ್ಯಂಂತ್ರಿಗಳು ವಿದೇಶ ಪ್ರವಾಸದಿಂದ ವಾಪಸ್ ಆಗಿದ್ದಾರೆ. ಕುಮಾರಸ್ವಾಮಿ ನಿನ್ನೆ (ಆಗಸ್ಟ್ 03) ತಡರಾತ್ರಿ ಬೆಂಗಳೂರಿಗೆ ಬಂದಿಳಿದಿದ್ದರೆ, ಇಂದು(ಆಗಸ್ಟ್ 04) ಬಿಎಸ್ ಯಡಿಯೂರಪ್ಪ ಅವರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಈ ವೇಳೆ ಡಿಕೆ ಶಿವಕುಮಾರ್ ಬರಮಾಡಿಕೊಂಡಿದ್ದು ವಿಶೇಷ.
Published On - 10:39 am, Fri, 4 August 23