ಅಲ್ಲದೆ ಅವಕಾಶ ಬಂದಾಗಲೆಲ್ಲಾ ಆಟಗಾರನಾಗಿ ಅತ್ಯುತ್ತಮವಾದುದನ್ನು ನೀಡಲು ಬಯಸುವುದಾಗಿ ಹೇಳಿರುವ ತಮೀಮ್, ಈ ಕುರಿತು ಪ್ರಧಾನಿಯವರೊಂದಿಗೆ ಮಾತನಾಡಿದ್ದು ಅವರಿಗೂ ತಮ್ಮ ಸಮಸ್ಯೆಯನ್ನು ಅರ್ಥ ಮಾಡಿಸಿರುವುದಾಗಿ ತಿಳಿಸಿದ್ದಾರೆ. ಸದ್ಯ ತಮೀಮ್ ತಮ್ಮ ಗಾಯದ ಬಗ್ಗೆ ಲಂಡನ್ ವೈದ್ಯರೊಂದಿಗೆ ಮಾತನಾಡಿದ್ದು, ಅವರಿಗೆ ಸುಮಾರು 2 ವಾರಗಳ ಕಾಲ ವಿಶ್ರಾಂತಿ ಸೂಚಿಸಲಾಗಿದೆ.