Shivamogga News: ತೀರ್ಥಹಳ್ಳಿಯಲ್ಲಿ ಜಿಂಕೆ ಶಿಕಾರಿ ಮಾಡಿದ ಇಬ್ಬರ ಬಂಧನ; ಆರೋಪಿಗಳಿಂದ 2 ಬೈಕ್​ ವಶ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 27, 2023 | 3:08 PM

ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ವಲಯದ ಕುಳ್ಳುಂಡೆ ಗ್ರಾಮದಲ್ಲಿ ಜಿಂಕೆ ಶಿಕಾರಿ ಮಾಡಿದ್ದ ಐವರಲ್ಲಿ ಇಬ್ಬರನ್ನು ಬಂಧಿಸಲಾಗಿದೆ. 20 ವರ್ಷದ ರಜತ್, ವಿನಯ್ ಬಂಧಿತ ಆರೋಪಿಗಳು.

Shivamogga News: ತೀರ್ಥಹಳ್ಳಿಯಲ್ಲಿ ಜಿಂಕೆ ಶಿಕಾರಿ ಮಾಡಿದ ಇಬ್ಬರ ಬಂಧನ; ಆರೋಪಿಗಳಿಂದ 2 ಬೈಕ್​ ವಶ
ಜಿಂಕೆ ಬೇಟೆಯಾಡಿದ ಆರೋಪಿಗಳ ಬಂಧನ
Follow us on

ಶಿವಮೊಗ್ಗ, ಜು.27: ಜಿಲ್ಲೆಯ ತೀರ್ಥಹಳ್ಳಿ(Thirthahalli) ತಾಲೂಕಿನ ಮಂಡಗದ್ದೆ ವಲಯದ ಕುಳ್ಳುಂಡೆ ಗ್ರಾಮದಲ್ಲಿ ಜಿಂಕೆ(Deer) ಶಿಕಾರಿ ಮಾಡಿದ್ದ ಐವರಲ್ಲಿ ಇಬ್ಬರನ್ನು ಬಂಧಿಸಲಾಗಿದೆ. 20 ವರ್ಷದ ರಜತ್, ವಿನಯ್ ಬಂಧಿತ ಆರೋಪಿಗಳು. ಇನ್ನುಳಿದ ಮೂವರು ಪರಾರಿಯಾಗಿದ್ದು, ಹುಡುಕಾಟ ಆರಂಭಿಸಿದ್ದಾರೆ. ಗ್ರಾಮದ ಶೆಡ್​ವೊಂದರಲ್ಲಿ ಮಾಂಸಕ್ಕಾಗಿ ಜಿಂಕೆ ಕಡಿಯುತ್ತಿದ್ದಾಗ ಮಂಡಗದ್ದೆ ವಲಯ ಅರಣ್ಯಾಧಿಕಾರಿ ನೇತೃತ್ವದಲ್ಲಿ ದಾಳಿ ಮಾಡಿದ್ದರು. ಬಂಧಿತರಿಂದ ಜಿಂಕೆ ಮಾಂಸ ಹಾಗೂ ಎರಡು ಬೈಕ್ ವಶಕ್ಕೆ ಪಡೆಯಲಾಗಿದೆ.

ಚರಂಡಿಗೆ ಬಿದ್ದು ವೃದ್ಧೆ ಸಾವು

ಶಿವಮೊಗ್ಗ: ಜಿಲ್ಲೆಯಲ್ಲಿ ಈಗಾಗಲೇ ರಣ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು, ಕೆಲ ರಸ್ತೆಗಳು ಸಂಪರ್ಕ ಕಳೆದುಕೊಂಡಿದೆ. ಅದರಂತೆ ಇದೀಗ ಚರಂಡಿಗೆ ಬಿದ್ದು ವೃದ್ಧೆಯೊಬ್ಬರು ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕೆಲುವೆ ಗ್ರಾಮದಲ್ಲಿ ನಡೆದಿದೆ. ಲಕ್ಷ್ಮಮ್ಮ(65) ಮೃತ ರ್ದುದೈವಿ. ಇವರು ಆಯತಪ್ಪಿ ಚರಂಡಿಗೆ ಬಿದ್ದು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಇನ್ನು ಈ ಕುರಿತು ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಪ್ರತ್ಯೇಕ ಘಟನೆ: ಮಳೆಯಿಂದ ಮನೆಗೋಡೆ ಕುಸಿದು ಅಥಣಿಯಲ್ಲಿ ಯುವಕ, ವಿಜಯನಗರದಲ್ಲಿ ವೃದ್ಧೆ ಸಾವು

ಮಳೆ ನೀರಲ್ಲೇ ಕೂತು ಪಾಠ ಕೇಳಿದ ಸರ್ಕಾರಿ ಶಾಲೆ ಮಕ್ಕಳು

ಕಲಬುರಗಿ: ರಾಜ್ಯಾದ್ಯಂತ ಭರ್ಜರಿ ಮಳೆಯಾಗುತ್ತಿದೆ. ಅದರಂತೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಘತ್ತರಗಾ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಮಳೆ ನೀರಿನಲ್ಲಿಯೇ ಕೂತು ಪಾಠ ಕೇಳಿದ ಘಟನೆ ನಡೆದಿದೆ. ಜಿಲ್ಲೆಯಲ್ಲಿ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದ‌ ಮಕ್ಕಳು ಕಂಗಾಲಾಗಿದ್ದು, ಒಂದೆಡೆ ಶಾಲಾ ಕೊಠಡಿಗಳು ಸೋರುತ್ತಿದ್ದಾವೆ. ಮತ್ತೊಂದಡೆ ಕೊಠಡಿ ಸೇರಿರುವ ಮಳೆ ನೀರಿನಲ್ಲಿಯೇ ಮಕ್ಕಳು ಪಾಠ ಕೇಳುವಂತಾಗಿದೆ. ಇಲ್ಲಿ 200 ಕ್ಕೂ ಹೆಚ್ಚು ಮಕ್ಕಳು ಶಾಲೆಯಲ್ಲಿ ಓದುತ್ತಿದ್ದಾರೆ. ಆದರೆ ಸೋರುತ್ತಿರುವ ಶಾಲೆಯ ಮೇಲ್ಛಾವಣಿಯಿಂದ ಆತಂಕದಲ್ಲಿಯೇ ವಿದ್ಯಾರ್ಥಿಗಳು ಪಾಠ ಕೇಳುತ್ತಿದ್ದಾರೆ. ಆದಷ್ಟು ಬೇಗ ಈ ಬಗ್ಗೆ ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಗಮನಹರಿಸಬೇಕಾಗಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ