‘ನಾನು ಆಗಲೂ ಗೋ ಮಾಂಸ ತಿನ್ನುತ್ತಿದ್ದೆ, ಈಗಲೂ ತಿನ್ನುತ್ತೇನೆ’; ‘ದಿ ಕಾಶ್ಮೀರ್ ಫೈಲ್ಸ್​’ ನಿರ್ದೇಶಕನ ವಿಡಿಯೋ ವೈರಲ್ 

TV9kannada Web Team

TV9kannada Web Team | Edited By: Rajesh Duggumane

Updated on: Sep 08, 2022 | 5:16 PM

‘ನಾನು ಗೋ ಮಾಂಸ ತಿನ್ನುತ್ತೇನೆ’ ಎಂದು ರಣಬೀರ್ ಈ ಹಿಂದೆ ನೀಡಿದ್ದ ಹೇಳಿಕೆಯನ್ನು ಇಟ್ಟುಕೊಂಡು ಅವರಿಗೆ ದೇವಸ್ಥಾನದ ಒಳಗೆ ತೆರಳಲು ಅವಕಾಶ ನೀಡಿರಲಿಲ್ಲ. ಈ ಘಟನೆ ಬಳಿಕ ವಿವೇಕ್ ಅಗ್ನಿಹೋತ್ರಿ ವಿಡಿಯೋವನ್ನು ವೈರಲ್ ಮಾಡಲಾಗಿದೆ.

‘ನಾನು ಆಗಲೂ ಗೋ ಮಾಂಸ ತಿನ್ನುತ್ತಿದ್ದೆ, ಈಗಲೂ ತಿನ್ನುತ್ತೇನೆ’; ‘ದಿ ಕಾಶ್ಮೀರ್ ಫೈಲ್ಸ್​’ ನಿರ್ದೇಶಕನ ವಿಡಿಯೋ ವೈರಲ್ 
ವಿವೇಕ್ ಅಗ್ನಿಹೋತ್ರಿ

ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರು ಸಾಕಷ್ಟು ಚರ್ಚೆಯಲ್ಲಿದ್ದಾರೆ. ಅವರ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ (The Kashmir Files Movie) ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುವುದರ ಜತೆಗೆ ಒಂದು ವರ್ಗದ ಜನರಿಂದ ಮೆಚ್ಚುಗೆ ಪಡೆದುಕೊಂಡಿತು. ಈ ಸಿನಿಮಾ ತೆರೆಗೆ ಬಂದ ನಂತರದಲ್ಲಿ ವಿವೇಕ್ ಅವರು ಅನೇಕ ಚರ್ಚೆಗಳಲ್ಲಿ ಭಾಗಿಯಾಗಿದ್ದಾರೆ. ತಮ್ಮ ಸಿದ್ಧಾಂತಗಳನ್ನು ಮುಂದಿಡುವ ಮೂಲಕ ಕೆಲವೊಮ್ಮೆ ಟೀಕೆಗೆ ಗುರಿಯಾಗಿದ್ದೂ ಇದೆ. ಈಗ ವಿವೇಕ್ ಅಗ್ನಿಹೋತ್ರಿ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ತಾವು ಗೋಮಾಂಸ ತಿನ್ನುವ ವಿಚಾರವನ್ನು ಅವರು ಒಪ್ಪಿಕೊಂಡಿದ್ದರು. ಈ ವಿಚಾರ ಇಟ್ಟುಕೊಂಡು ಅವರನ್ನು ಟ್ರೋಲ್ ಮಾಡಲಾಗುತ್ತಿದೆ.

‘ಬ್ರಹ್ಮಾಸ್ತ್ರ’ ಸಿನಿಮಾ ಸೆಪ್ಟೆಂಬರ್ 9ರಂದು ರಿಲೀಸ್ ಆಗುತ್ತಿದೆ. ಈ ಚಿತ್ರದ ಪ್ರಚಾರಕ್ಕಾಗಿ ರಣಬೀರ್ ಹಾಗೂ ಆಲಿಯಾ ಭಟ್ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ತೆರಳಿದ್ದರು. ‘ನಾನು ಗೋ ಮಾಂಸ ತಿನ್ನುತ್ತೇನೆ’ ಎಂದು ರಣಬೀರ್ ಈ ಹಿಂದೆ ನೀಡಿದ್ದ ಹೇಳಿಕೆಯನ್ನು ಇಟ್ಟುಕೊಂಡು ಅವರಿಗೆ ದೇವಸ್ಥಾನದ ಒಳಗೆ ತೆರಳಲು ಅವಕಾಶ ನೀಡಿರಲಿಲ್ಲ. ದೇವಸ್ಥಾನದ ಹೊರ ಭಾಗದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ಕೂಡ ನಡೆದಿತ್ತು. ಈ ಘಟನೆ ಬಳಿಕ ವಿವೇಕ್ ಅಗ್ನಿಹೋತ್ರಿ ವಿಡಿಯೋವನ್ನು ವೈರಲ್ ಮಾಡಲಾಗಿದೆ.

ವಿವೇಕ್​ ಅಗ್ನಿಹೋತ್ರಿ ಅವರು ಈ ಮೊದಲು ಮಹಾಕಾಳೇಶ್ವರ ದೇವಸ್ಥಾನಕ್ಕೆ ತೆರಳಿದ್ದರು. ಅಲ್ಲಿ ಪೂಜೆ ಸಲ್ಲಿಸಿ ಬಂದಿದ್ದರು. ‘ವಿವೇಕ್ ಅಗ್ನಿಹೋತ್ರಿ ಗೋ ಮಾಂಸ ತಿಂದಿದ್ದಾರೆ. ಅವರಿಗೆ ಏಕೆ ಅವಕಾಶ ನೀಡಿದಿರಿ’ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ‘ನಾನು ಈ ಮೊದಲು ಗೋ ಮಾಂಸ ತಿಂದಿದ್ದೆ. ಈಗಲೂ ತಿನ್ನುತ್ತೇನೆ’ ಎಂದು ವಿವೇಕ್ ಅಗ್ನಿಹೋತ್ರಿ ವಿಡಿಯೋದಲ್ಲಿ ಹೇಳಿದ್ದರು.

ಇದನ್ನೂ ಓದಿ

‘ಬ್ರಹ್ಮಾಸ್ತ್ರ’ ಸಿನಿಮಾಗೆ ಬೈಕಾಟ್ ಬಿಸಿ ತಟ್ಟುವ ಲಕ್ಷಣ ಗೋಚರವಾಗಿದೆ. ಅನೇಕರು ಚಿತ್ರವನ್ನು ನೋಡದಂತೆ ಸೋಶಿಯಲ್ ಮೀಡಿಯಾದಲ್ಲಿ ಒತ್ತಾಯಿಸುತ್ತಿದ್ದಾರೆ. ಆದಾಗ್ಯೂ ಅಡ್ವಾನ್ಸ್ ಬುಕಿಂಗ್​ನಲ್ಲಿ ಸಿನಿಮಾ ಒಳ್ಳೆಯ ಬಿಸ್ನೆಸ್ ಮಾಡಿದೆ. 21 ಕೋಟಿ ರೂಪಾಯಿ ಹಣವನ್ನು ಚಿತ್ರ ಅಡ್ವಾನ್ಸ್​ ಬುಕಿಂಗ್​ನಿಂದ ಮಾಡಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada