ಶಿವಮೊಗ್ಗ, ಸೆ.18: ತುಂಗಾ ನದಿಯಲ್ಲಿ ಮುಳುಗಿ ಇಬ್ಬರು ಮೀನುಗಾರರು ನೀರುಪಾಲಾದ ಘಟನೆ ಶಿವಮೊಗ್ಗ (Shivamogga) ನಗರದ ಕುರುಬರ ಪಾಳ್ಯ ಬಳಿ ನಡೆದಿದೆ. ಫಯಾಜ್ ಅಹ್ಮದ್ (18), ಅಂಜುಂ ಖಾನ್ (19) ನೀರುಪಾಲಾದ ಮೀನುಗಾರರು. ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ದೊಡ್ಡಪೇಟೆ ಠಾಣಾ ಪೊಲೀಸರು ನೀರುಪಾಲಾದವರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಈ ವೇಳೆ ತುಂಗ ನದಿ ದಂಡೆ ಮೇಲೆ ಮೊಬೈಲ್ ಹಾಗೂ ಬಟ್ಟೆಗಳು ಪತ್ತೆಯಾಗಿವೆ.
ಮೀನು ಹಿಡಿಯಲು ಹೋದ ವೇಳೆ ಯುವಕರು ನೀರು ಪಾಲಾಗಿದ್ದಾರೆ. ಸದ್ಯ ಬೋಟ್ ಮೂಲಕ ಅಗ್ನಿಶಾಮಕ ದಳದ ಸಿಬ್ಬಂದಿ ಪತ್ತೆಕಾರ್ಯ ನಡೆಸುತ್ತಿದ್ದಾರೆ.
ಬೆಂಗಳೂರು: ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಸಂಭವಿಸಿದ ಅಗ್ನಿ ಅವಘಡದಲ್ಲಿ ಚಿನ್ನಾಭರಣ, ಹಣ ಸಹಿತ ಪೀಠೋಪಕರಣಗಳು ಬೆಂಕಿಗೆ ಆಹುತಿಯಾದ ಘಟನೆ ಬೆಂಗಳೂರು ನಗರದ ಚಾಮರಾಜಪೇಟೆಯ ಆನಂದಪುರದಲ್ಲಿ ನಡೆದಿದೆ.
ಇದನ್ನೂ ಓದಿ: ಪ್ರತ್ಯೇಕ ಪ್ರಕರಣ: ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲು, ಆಡು ಮೇಯಿಸಲು ಹೋಗಿದ್ದ ಯುವಕ ನದಿಯಲ್ಲಿ ಮುಳುಗಿ ಸಾವು ಶಂಕೆ
ಭಾಗ್ಯಮ್ಮ, ಮುರುಗನ್ ಎಂಬುವರಿಗೆ ಸೇರಿದ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಈ ದುರ್ಘಟನೆ ಸಂಭವಿಸಿದೆ. ಸ್ಫೋಟದ ವೇಳೆ ಸಮೀಪದಲ್ಲೇ ಇದ್ದ ಹಸ್ಸೀಬುಲ್ಲಾ ಎಂಬವರಿಗೆ ಗಾಯಗಳಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಒಟ್ಟು ಐದು ಸಿಲಿಂಡರ್ಗಳ ಪೈಕಿ ಮೂರು ಸ್ಫೋಟಗೊಂಡಿವೆ. ಉಳಿದ ಎರಡು ಸಿಲಿಂಡರ್ಗಳು ಖಾಲಿಯಾಗಿದ್ದವು.
ಕೊಡಗು: ವಿರಾಜಪೇಟೆ ತಾಲ್ಲೂಕಿನ ಮಾಕುಟ್ಟ ಅರಣ್ಯ ಪೃದೇಶದಲ್ಲಿ ಸೂಟ್ಕೇಸ್ನಲ್ಲಿ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ಸ್ಥಳಕ್ಕೆ ಆಗಮಿಸಿದ ವಿರಾಜಪೇಟೆ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:48 pm, Mon, 18 September 23