ಪ್ರತ್ಯೇಕ ಪ್ರಕರಣ: ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲು, ಆಡು ಮೇಯಿಸಲು ಹೋಗಿದ್ದ ಯುವಕ ನದಿಯಲ್ಲಿ ಮುಳುಗಿ ಸಾವು ಶಂಕೆ
ಶಿವಮೊಗ್ಗ ತಾಲೂಕಿನ ಕೆಸವಿನಕಟ್ಟೆ ಗ್ರಾಮದ ಮ್ಯಾದಿನ ಕೆರೆಯಲ್ಲಿ ಶನಿವಾರ ಸಂಜೆ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲಾಗಿದ್ದಾರೆ.
ಶಿವಮೊಗ್ಗ ಸೆ.17: ಶಿವಮೊಗ್ಗ (Shivamogga) ತಾಲೂಕಿನ ಕೆಸವಿನಕಟ್ಟೆ ಗ್ರಾಮದ ಮ್ಯಾದಿನ ಕೆರೆಯಲ್ಲಿ ಶನಿವಾರ ಸಂಜೆ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲಾಗಿದ್ದಾರೆ (Drowned). ಸೈಯದ್ (13), ಫೈಸಲ್ (13) ಮೃತ ಬಾಲಕರು. ಮೃತ ಇಬ್ಬರು ಬಾಲಕರು ಹಾರನಹಳ್ಳಿಯ ಸರಕಾರಿ ಉರ್ದು ಶಾಲೆಯ 8 ನೇ ತರಗತಿಯಲ್ಲಿ ಓದುತ್ತಿದ್ದಾರೆ. ಘಟನೆ ಕುರಿತು ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಡು ಮೇಯಿಸಲು ಹೋಗಿದ್ದ ಯುವಕ ನದಿಯಲ್ಲಿ ಮುಳುಗಿ ಸಾವು, ಶಂಕೆ
ಬಾಗಲಕೋಟೆ: ಆಡು ಮೇಯಿಸಲು ಹೋಗಿದ್ದ ಯುವಕ ಇಳಕಲ್ ತಾಲ್ಲೂಕಿನ ಮುರುಡಿ ಗ್ರಾಮದ ಬಳಿಯ ಘಟಪ್ರಭಾ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಯಂಕಪ್ಪ ಭೀಮಪ್ಪ ಬಾರ್ಕಿ (22) ಮೃತ ಯುವಕ. ಮಾಚಕನೂರು ಗ್ರಾಮದ ನಿವಾಸಿ ಯಂಕಪ್ಪ ಭೀಮಪ್ಪ ಬಾರ್ಕಿ ಶನಿವಾರ ಮಧ್ಯಾಹ್ನ ಆಡುಗಳಿಗೆ ನೀರು ಕುಡಿಸಲು ಘಟಪ್ರಭಾ ನದಿಗೆ ಹೋದಾಗ ಘಟನೆ ಸಂಭವಿಸಿದೆ ಎಂದು ಶಂಕಿಸಲಾಗಿದೆ. ರವಿವಾರ ಬೆಳಿಗ್ಗೆ ನದಿ ತಂಡದಲ್ಲಿ ಯುವಕನ ಶವ ಪತ್ತೆಯಾಗಿದೆ.
ಇದನ್ನೂ ಓದಿ: ದೊಡ್ಡಬಳ್ಳಾಪುರ: ಕೆಲಸ ಅರಸಿ ಬಂದ ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದವಾಗಿ ಸಾವು
ಸುಟ್ಟ ಸ್ಥಿತಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ
ಇನ್ನು ಇದೇ ಮುರುಡಿ ಗ್ರಾಮದ ಶರಣಪ್ಪ ರಾಜೂರ ಅವರ ಹೊಲದ ಬಳಿ ಸುಟ್ಟ ಸ್ಥಿತಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ. ಅಂದಾಜು 35 ರಿಂದ 40 ವರ್ಷದ ಮಹಿಳೆಯ ಶವ ಪತ್ತೆಯಾಗಿದೆ. ದುಷ್ಕರ್ಮಿಗಳು ಹೊಡೆದು ಕೊಲೆ ಮಾಡಿ, ನಂತರ ಮೈಮೇಲೆ ಪೆಟ್ರೋಲ್ ಅಥವಾ ಸೀಮೆ ಎಣ್ಣೆ ಸುರಿದು ದೇಹ ಸುಟ್ಟಿರುವ ಶಂಕೆ ವ್ಯಕ್ತವಾಗಿದೆ. ಅಮೀನಗಢ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣದ ತನಿಖೆ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.