ಶಿವಮೊಗ್ಗದ ಶಂಕಿತ ಉಗ್ರರ ಜೊತೆ ಸಂಪರ್ಕದಲ್ಲಿರುವವರ ವಿಚಾರಣೆ: ಎಸ್​ಪಿ ಲಕ್ಷ್ಮಿಪ್ರಸಾದ್

| Updated By: ವಿವೇಕ ಬಿರಾದಾರ

Updated on: Sep 21, 2022 | 1:24 PM

ಇಬ್ಬರು ಶಂಕಿತ ಉಗ್ರರು ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿಪ್ರಸಾದ್ ಮಾತನಾಡಿ ನಿನ್ನೆ ಯುಎಪಿಎ ಕೇಸ್ ದಾಖಲಾಗಿದೆ. ಕೇಸ್ ದಾಖಲಾದ ಹಿನ್ನೆಲೆಯಲ್ಲಿ ತನಿಖೆ ಮುಂದುವರಿದಿದೆ ಎಂದು ಹೇಳಿದರು.

ಶಿವಮೊಗ್ಗದ ಶಂಕಿತ ಉಗ್ರರ ಜೊತೆ ಸಂಪರ್ಕದಲ್ಲಿರುವವರ ವಿಚಾರಣೆ: ಎಸ್​ಪಿ ಲಕ್ಷ್ಮಿಪ್ರಸಾದ್
ಶಿವಮೊಗ್ಗ ಎಸ್​ಪಿ ಲಕ್ಷ್ಮಿಪ್ರಸಾದ್
Follow us on

ಶಿವಮೊಗ್ಗ: ಇಬ್ಬರು ಶಂಕಿತ ಉಗ್ರರು ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿಪ್ರಸಾದ್ ಮಾತನಾಡಿ ನಿನ್ನೆ ಯುಎಪಿಎ ಕೇಸ್ ದಾಖಲಾಗಿದೆ. ಕೇಸ್ ದಾಖಲಾದ ಹಿನ್ನೆಲೆಯಲ್ಲಿ ತನಿಖೆ ಮುಂದುವರಿದಿದೆ ಎಂದು ಹೇಳಿದರು. ಶಿವಮೊಗ್ಗ ಸುತ್ತಮುತ್ತ ಭಾಗದಲ್ಲಿ ಸರ್ಚ್ ಆಗಿದೆ  ಮಂಗಳೂರು, ಶಿವಮೊಗ್ಗ ಭಾಗದಲ್ಲಿ ಇನ್ನು ರೇಡ್ ಮಾಡೋದು ಇದೆ. ಮೆಟಿರೀಯಲ್ಸ್ ಸೀಜ್ ಆಗುತ್ತಿದೆ. ಬಂಧಿತರ ಜೊತೆ ಸಂಪರ್ಕದಲ್ಲಿ ಇದ್ದವರ ವಿಚಾರಣೆ ಸಹ ಮಾಡಲಾಗುತ್ತದೆ. ಸದ್ಯಕ್ಕೆ ತನಿಖೆ ಮುಂದುವರಿದಿದೆ ಹೀಗಾಗಿ ಬೇರೆನೂ ಹೇಳಲು ಆಗುವುದಿಲ್ಲ ಎಂದರು.

ಬಂಧಿತ ಸೈಯದ್ ಯಾಸೀನ್ ಶಿವಮೊಗ್ಗದ ಸಿದ್ದೇಶ್ವರ ನಗರದ ಒಂದನೇ ಕ್ರಾಸ್​ನಲ್ಲಿ ವಾಸವಾಗಿದ್ದಾನೆ. ಸೈಯದ್ ಯಾಸೀನ್ ಉಗ್ರ ಸಂಘಟನೆಗಳ ಜೊತೆ ನಂಟು ಹಿನ್ನೆಲೆ ಬಂಧನಕ್ಕೊಳಗಾಗಿದ್ದಾನೆ. ಇನ್ನು ಸೈಯದ್ ಯಾಸೀನ್ ಕುಟುಂಬ ಸದಸ್ಯರು ಮನೆಗೆ ಬೀಗ ಹಾಕಿಕೊಂಡು ಸಂಬಂಧಿಕರ ಮನೆಗೆ ಹೋಗಿದ್ದಾರೆ. ಅಕ್ಕ ಪಕ್ಕದವರು ಹಾಗೂ ಸಂಬಂಧಿಕರು ಯಾಸೀನ್ ಬಗ್ಗೆ ಮಾತಾಡಲು ಹಿಂದೇಟು ಹಾಕುತ್ತಿದ್ದಾರೆ. ಎನಿದ್ದರು ಕೋರ್ಟಗೆ ಅಗತ್ಯ ಮಾಹಿತಿ ನೀಡುವುದಾಗಿ ಹೇಳಿದ್ದಾರೆ.

ಬಂಧಿತ ಶಂಕಿತ ಉಗ್ರ ಮಾಜ್ ಮೊಬೈಲ್​ನಲ್ಲಿ ಸ್ಪೋಟಕ ಮಾಹಿತಿ ದೊರೆತಿದೆ. ಮಾಜ್ ಆನ್ ಲೈನ್ ಮೂಲಕ ಮೊಬೈಲ್ ರೋಬಟ್ ಡಿಪ್ಲೋಮಾ ಕೋರ್ಸ್​ನ್ನು ಪಡೆಯುತ್ತಿದ್ದನು. ರೋಬೊಟ್ ಮೂಲಕ ಬಾಂಬ್ ಬ್ಲಾಸ್ಟ್ ಮಾಡುವುದು ಕುರಿತು ಅಧ್ಯಯನ ಮಾಡುತ್ತಿದ್ದನು. ಹೀಗೆ ಚಿಕ್ಕ ವಯಸ್ಸಿನಲ್ಲೆ ವಿಧ್ವಂಸಕ ಕೃತ್ಯಗಳ ತರಬೇತಿಗೆ ಮುಂದಾಗಿದ್ದನು. ಪೊಲೀಸರು ಶಂಕಿತ ಉಗ್ರ ಮಾಜ್​​ನನ್ನ ಮೆಗ್ಗಾನ್ ಆಸ್ಪತ್ರೆಗೆ ಮೆಡಿಕಲ್​​ ಟೆಸ್ಟ್​ಗೆ ಕರೆತಂದಿದ್ದಾರೆ.

ಶಾರೀಕ್ ಮನೆಯಿಂದ ಮಿಸ್ಸಿಂಗ್ ಆಗಿ 20 ದಿನ ಆಗಿದೆ. ಕಳೆದ 8 ದಿನಗಳ ಹಿಂದೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಮಿಸ್ಪಿಂಗ್ ಕೇಸ್​ದಾಖಲಾಗಿದೆ. ಕಳೆದ ಒಂದೂವರೆ ತಿಂಗಳ ಹಿಂದೆ ಶಾರೀಕ್ ತಂದೆ ಕ್ಯಾನ್ಸರ್ ಕಾಯಿಲೆಯಿಂದ ಮೃತಪಟ್ಟಿದ್ದು. ತಾಯಿ ತೀರಿ ಹೋಗಿ 15 ವರ್ಷ ಆಗಿದೆ. ತಂದೆ ಎರಡನೆ ಮದುವೆ ಮಾಡಿಕೊಂಡಿದ್ದಾರೆ. 20 ದಿನಗಳ ಹಿಂದೆ ದೆಹಲಿಗೆ ಬಟ್ಟೆ ತರಲು ಹೋಗಿದ್ದನು ವಾಪಸ್ ಬಂದಿಲ್ಲ. ತಂದೆ ತೀರಿ ಹೋದ ಮೇಲೆ ತಂದೆ ಬಟ್ಟೆ ಅಂಗಡಿ ಜವಾಬ್ದಾರಿ ವಹಿಸಿಕೊಂಡಿದ್ದನು. ಎಂದು ತೀರ್ಥಹಳ್ಳಿಯಲ್ಲಿ ಶಾರೀಕ್ ಚಿಕ್ಕಮ್ಮ ಶಬನಾ ಬಾನು ಹೇಳಿದ್ದಾರೆ.

ಈಗಾಗಲೇ ರಾಜ್ಯಕ್ಕೆ ಎನ್​​ಐಎ ತಂಡ ಬಂದಿದೆ

ಬೆಂಗಳೂರು: ಮೂವರು ಶಂಕಿತ ಉಗ್ರರನ್ನು ನಾವು ವಶಕ್ಕೆ ಪಡೆದಿದ್ದು, ಮೂವರ ಪೈಕಿ ಇಬ್ಬರು ಶಂಕಿತರನ್ನು ವಿಚಾರಣೆ ಮಾಡುತ್ತಿದ್ದೇವೆ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಇನ್ನೊಬ್ಬ ಆರೋಪಿ ಬಂಧನ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಈಗಾಗಲೇ ರಾಜ್ಯಕ್ಕೆ ಎನ್​​ಐಎ ತಂಡ ಬಂದಿದೆ ಎಂದು ತಿಳಿಸಿದರು.

ಭಯಾನಕ ಸಂಗತಿ ಅಂದರೆ ಆರೋಪಿಗಳು ಬಾಂಬ್ ತಯಾರಿಸಿ, ಪ್ರಾಯೋಗಿಕವಾಗಿ ಸ್ಫೋಟಿಸಲು ಯತ್ನ ಮಾಡಿದ್ದಾರೆ. FSL ತಂಡ ಕೂಡ ಸ್ಥಳಕ್ಕೆ ಬಂದು ಪರಿಶೀಲನೆ ಮಾಡುತ್ತಿದೆ. ಆರೋಪಿಗಳಿಗೆ ಬಾಂಬ್​ ತಯಾರು ಮಾಡುವ ನೈಪುಣ್ಯತೆ ಇದೆ. ಶಂಕಿತ ಉಗ್ರರ ಹಿಂದೆ ಬೇರೆ ಕೈವಾಡ ಇರುವ ಶಂಕೆ ಇದೆ. ದೇಶದ ಏಕತೆ ಸಮಗ್ರತೆ ಭಂಗ ತರುವ ಕೆಲಸದಲ್ಲಿ ಇವರು ಭಾಗಿಯಾಗಿದ್ದಾರೆ. ದೇಶ ದ್ರೋಹಿ ಸಂಘಟನೆ ಜೊತೆ ಭಾಗಿಯಾಗಿರೋದು ಆತಂಕ ತಂದಿದೆ ಎಂದು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 1:00 pm, Wed, 21 September 22