ದಾವಣಗೆರೆಯಲ್ಲಿ ನಡೆದಿದ್ದು ಸಿದ್ದರಾಮೋತ್ಸವ ಅಲ್ಲ, ಚುನಾವಣೆ ಉತ್ಸವ -ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ವಾಗ್ದಾಳಿ

ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ ಮುಂದುವರಿದಿದೆ. ಡಿಕೆಶಿ, ಸಿದ್ದರಾಮಯ್ಯ ಬಲವಂತಕ್ಕೆ ಅಪ್ಪಿಕೊಂಡಿದ್ದಾರೆ. ರಾಹುಲ್ ಗಾಂಧಿಯ ಬಲವಂತದಿಂದ ಆಲಿಂಗನ ಮಾಡಿದ್ದಾರೆ. ಇದು ಕೇವಲ ಒಂದು ನಿಮಿಷದ ಆಲಿಂಗನದ ಲವ್ ಎಂದು ಸಿದ್ದರಾಮಯ್ಯ, ಡಿಕೆಶಿ ಅಪ್ಪುಗೆಗೆ ಈಶ್ವರಪ್ಪ ಲೇವಡಿ ಮಾಡಿದ್ದಾರೆ.

ದಾವಣಗೆರೆಯಲ್ಲಿ ನಡೆದಿದ್ದು ಸಿದ್ದರಾಮೋತ್ಸವ ಅಲ್ಲ, ಚುನಾವಣೆ ಉತ್ಸವ -ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ವಾಗ್ದಾಳಿ
ಸಿದ್ದರಾಮಯ್ಯ ಮತ್ತು ಕೆ.ಎಸ್.ಈಶ್ವರಪ್ಪ
Follow us
TV9 Web
| Updated By: ಆಯೇಷಾ ಬಾನು

Updated on: Aug 07, 2022 | 2:50 PM

ಶಿವಮೊಗ್ಗ: ದಾವಣಗೆರೆಯಲ್ಲಿ ನಡೆದಿದ್ದು ಸಿದ್ದರಾಮೋತ್ಸವ(Siddaramotsava) ಅಲ್ಲ. ಅದು ಚುನಾವಣೆ ಉತ್ಸವ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ(KS Eshwarappa) ಸಿದ್ದರಾಮಯ್ಯ(Siddaramaiah) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ. ಈ ದೇಶದಲ್ಲಿ ಕಾಂಗ್ರೆಸ್ ಪಕ್ಷ ಮೂಲೆ ಗುಂಪಾಗಿದೆ. ಮುಂದಿನ ಚುನಾವಣೆಯಲ್ಲಿ ಸೋತು ಮನೆ ಸೇರಲಿದೆ ಎಂದು ವಾಗ್ದಾಳಿ ನಡೆಸಿದರು.

ಇನ್ನು ಈ ವೇಳೆ ಅವರು, ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ ಮುಂದುವರಿದಿದೆ. ಡಿಕೆಶಿ, ಸಿದ್ದರಾಮಯ್ಯ ಬಲವಂತಕ್ಕೆ ಅಪ್ಪಿಕೊಂಡಿದ್ದಾರೆ. ರಾಹುಲ್ ಗಾಂಧಿಯ ಬಲವಂತದಿಂದ ಆಲಿಂಗನ ಮಾಡಿದ್ದಾರೆ. ಇದು ಕೇವಲ ಒಂದು ನಿಮಿಷದ ಆಲಿಂಗನದ ಲವ್ ಎಂದು ಸಿದ್ದರಾಮಯ್ಯ, ಡಿಕೆಶಿ ಅಪ್ಪುಗೆಗೆ ಈಶ್ವರಪ್ಪ ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಪಿದೆ. ನಾನು ಅದನ್ನು ಹೆಮ್ಮೆಯಿಂದ ಹೇಳುತ್ತೇನೆ. ಸರ್ಕಾರ ವಲ್ಲಭಭಾಯ್ ಪಟೇಲ್, ಸುಭಾಷ ಚಂದ್ರ ಬೋಸ್ ಇದ್ದ ಕಾಂಗ್ರೆಸ್ ನಿಂದ ಸ್ವಾತಂತ್ರ್ಯ ಸಿಕ್ತು. ಈ ಕಾಂಗ್ರೆಸ್ ಪಕ್ಷ ದೇಶವನ್ನು ಹಾಳುಮಾಡಿದೆ. 370 ಆರ್ಟಿಕಲ್ ಬರುವ ಮೊದಲು ಕಾಶ್ಮೀರದಲ್ಲಿ ಭಯದ ವಾತಾವರಣ ಇತ್ತು. ಈಗ ಅಲ್ಲಿರುವ ಸೈನಿಕರಿಗೆ ಮತ್ತು ಜನರಿಗೆ ಧೈರ್ಯ ಬಂದಿದೆ. ಕಾಂಗ್ರೆಸ್ ಸರಕಾರ ತುರ್ತು ಪರಿಸ್ಥಿತಿ ಘೋಷಣೆ ಮಾಡಿ. ಪತ್ರಿಕಾ ಸ್ವಾತಂತ್ರ್ಯ ಕೂಡಾ ಹತ್ತಿಕ್ಕಿದ್ದರು. ಇದರ ವಿರುದ್ಧ ಪತ್ರಕರ್ತರು ಖಾಲಿ ಪೇಪರ್ ಪ್ರಕಟಣೆ ಮೂಲಕ ಉತ್ತರ ಕೊಟ್ಟಿದ್ದರು. ದೇಶಕ್ಕೆ ಸ್ವಾತಂತ್ರ್ಯ ಬರಲು ಪತ್ರಿಕೋದ್ಯಮದ ಪಾತ್ರ ಕೂಡಾ ಇದೆ. ಕಾಂಗ್ರೆಸ್ ಪಕ್ಷದ ನಾಯಕರು ದೇಶದ್ರೋಹಿಗಳ ಪರ ನಿಂತು ಕೆಟ್ಟ ಸಂದೇಶ ರವಾನಿಸಿದ್ರು. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಕಾಂಗ್ರೆಸ್ ಮೂಲೆ ಗುಂಪು ಆಗುತ್ತಿದೆ. ಮೋದಿ ಸರ್ಕಾರ ಬಂದ ನಂತರ ದೇಶದ್ರೋಹಿಗಳನ್ನು ಹುಡುಕಿ ಹೊರ ತೆಗೆಯುತ್ತಿದ್ದಾರೆ. ಇವರೆಲ್ಲರೂ ತಪ್ಪಿಸಿಕೊಂಡು ಹೋಗುವ ಚಾನ್ಸ್ ಇಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಈಶ್ವರಪ್ಪ ವಾಗ್ದಾಳಿ ನಡೆಸಿದ್ರು.

ಇನ್ನು ಇದೇ ವೇಳೆ ಮುಂದಿನ ಚುನಾವಣೆಯಲ್ಲಿ ಕೆ.ಎಸ್.ಈಶ್ವರಪ್ಪ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಪಕ್ಷ ಸ್ಪರ್ಧಿಸಲು ಹೇಳಿದ್ರೆ ಸ್ಪರ್ಧಿಸುತ್ತೇನೆ, ಬೇಡ ಅಂದ್ರೆ ಇಲ್ಲ. ಸಂಪುಟ ವಿಸ್ತರಣೆ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ನಮ್ಮ ಪಕ್ಷದ ವರಿಷ್ಠರ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಸಂಪುಟ ಮರು ಸೇರ್ಪಡೆ ಗುಟ್ಟು ಬಿಟ್ಟು ಕೊಟ್ಟಿಲ್ಲ.