AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಸಾರಕ್ಕೆ ಹುಳಿ ಹಿಂಡಿದ ಕೊರೊನಾ.. ಸೌದಿಗೆ ವಾಪಸ್ ಹೋಗದಿದ್ದಕ್ಕೆ ಗಂಡನ ಜೊತೆ ಪತ್ನಿಯ ನಿರಂತರ ಫೈಟಿಂಗ್, ಆತ್ಮಹತ್ಯೆಗೆ ಯತ್ನಿಸಿ ಪತಿ ಆಸ್ಪತ್ರೆ ಪಾಲು

ಆತ ಮದುವೆಯಾಗಿ 18 ವರ್ಷವಾಗಿತ್ತು. ಕುಟುಂಬಕ್ಕಾಗಿ ವಿದೇಶದಲ್ಲಿ ದುಡಿದು ಜೀವನ ಸವೆಸಿದ್ದ. ಆದರೆ ಲಾಕ್ಡೌನ್ ಕಾರಣ ವಾಪಸ್ ಸೌದಿಗೆ ಹೋಗಲು ಆಗಿರಲಿಲ್ಲ. ಈ ನಡುವೆ ದಂಪತಿ ಮಧ್ಯೆ ಭಿನ್ನಾಭಿಪ್ರಾಯ ಶುರುವಾಯ್ತು. ಕಡೆಗೆ ಪತ್ನಿ ಎದುರಲ್ಲೇ ಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅಷ್ಟಕ್ಕೂ ಅವರ ದಾಂಪತ್ಯದಲ್ಲಿ ಆಗಿದ್ದಾದ್ರು ಏನು?

ಸಂಸಾರಕ್ಕೆ ಹುಳಿ ಹಿಂಡಿದ ಕೊರೊನಾ.. ಸೌದಿಗೆ ವಾಪಸ್ ಹೋಗದಿದ್ದಕ್ಕೆ ಗಂಡನ ಜೊತೆ ಪತ್ನಿಯ ನಿರಂತರ ಫೈಟಿಂಗ್, ಆತ್ಮಹತ್ಯೆಗೆ ಯತ್ನಿಸಿ ಪತಿ ಆಸ್ಪತ್ರೆ ಪಾಲು
ಮೆಗ್ಗಾನ್ ಆಸ್ಪತ್ರೆ
ಆಯೇಷಾ ಬಾನು
|

Updated on:Mar 25, 2021 | 8:02 AM

Share

ಶಿವಮೊಗ್ಗದ ಆರ್​ಎಂಎಲ್ ನಗರದ ನಿವಾಸಿ ಫಯಾಜ್ ಅಹ್ಮದ್ ಸೌದಿಯಲ್ಲಿ ದುಡಿದು ಕುಟುಂಬಕ್ಕೆ ಬೆನ್ನೆಲುಬಾಗಿದ್ದ. ಸುಖ ಸಂಸಾರಕ್ಕೆ 1 ಗಂಡು ಹಾಗೂ 1 ಹೆಣ್ಣು ಮಗುವಿದೆ. ಪತ್ನಿ ಜೊತೆ ಸಂಸಾರವು ಇಷ್ಟು ವರ್ಷ ಚೆನ್ನಾಗಿಯೇ ಇತ್ತು. ಆದರೆ ಪತಿರಾಯ ಕೊವಿಡ್ ಹಿನ್ನೆಲೆ ವಾಪಸ್ ಸೌದಿಗೆ ಹೋಗಲು ಆಗಿರಲಿಲ್ಲ. ಈ ಒಂದೇ ಒಂದು ಕಾರಣಕ್ಕೆ ಸುಖವಾಗಿದ್ದ ಸಂಸಾರದಲ್ಲಿ ಕಿರಿಕಿರಿ, ಭಿನ್ನಾಭಿಪ್ರಾಯ ಶುರುವಾಗಿದೆ.

ಅಷ್ಟಕ್ಕೂ ಅಂತರಾಷ್ಟ್ರೀಯ ವಿಮಾನ ಸಂಚಾರ ಸ್ಥಗಿತವಾಗಿತ್ತು. ಸೌದಿಯಲ್ಲಿ ಲಾಕ್​ಡೌನ್ ಜಾರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಫಯಾಜ್ ಅಹ್ಮದ್ ಶಿವಮೊಗ್ಗದಲ್ಲೇ ಕಳೆದ ಕೆಲವು ತಿಂಗಳಿಂದ ಪತ್ನಿ ಜೊತೆ ಇದ್ದ. ಈ ನಡುವೆ ಪತಿ ಪತ್ನಿ ನಡುವೆ ಗಲಾಟೆ ಶುರುವಾಗಿದೆ. ಪತ್ನಿಯು ಪತಿ ಹೆಸರಿನಲ್ಲಿದ್ದ 2 ಸೈಟ್ ಮತ್ತು ಮನೆ ಹಾಗೂ 1 ಶಾಲೆ ಕಟ್ಟಡವು ಪತ್ನಿ ಹೆಸರಿಗೆ ವರ್ಗಾವಣೆಯಾಗಿದೆ. ಪತಿ ಆಸ್ತಿಯನ್ನ ಪತ್ನಿ ಹೆಸರಿನಲ್ಲಿ ಮಾಡಿದ್ರೂ ಪತ್ನಿಗೆ ಅದ್ಯಾಕೋ ಗಂಡನ ಮೇಲೆ ಸಿಟ್ಟು. ಗಂಡ ವಾಪಸ್ ಸೌದಿಗೆ ಹೋಗಿದ್ದರೆ ಎಲ್ಲವೂ ಚೆನ್ನಾಗಿತ್ತು. ಆದ್ರೆ ಪತಿ ಕೆಲವು ತಿಂಗಳನಿಂದ ಪತ್ನಿಯ ಜೊತೆಗೆ ವಾಸವಾಗಿದ್ದೇ ಯಡವಟ್ಟಾಗಿತ್ತು. ಪತ್ನಿಗೆ ಪತಿ ಮನೆಯಲ್ಲಿ ಇರುವುದು ಇಷ್ಟವಿರಲಿಲ್ಲ. ಪದೇಪದೆ ಪತಿ ಜೊತೆ ಗಲಾಟೆ ಮಾಡುತ್ತಿದ್ದಳು ಕೊನೆಗೆ ಮಹಿಳಾ ಠಾಣೆಯ ಮೆಟ್ಟಿಲೂ ಸಹ ಹತ್ತಿದ್ದಳು. ಹೆಂಡತಿಯೇ ಪತಿಗೆ ವಿಷಕೊಟ್ಟು ಸಾಯೋದಕ್ಕೆ ಪ್ರಚೋದನೆ ಕೊಟ್ಟಿದ್ದಳಂತೆ. ಹೀಗಾಗಿ ಪತಿರಾಯ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗ್ತಿದೆ.

ಅಷ್ಟಕ್ಕೂ 18 ವರ್ಷಗಳ ಕಾಲ ಚೆನ್ನಾಗಿದ್ದ ಸಂಸಾರದಲ್ಲಿ ಏನಾಯ್ತೋ ಗೊತ್ತಿಲ್ಲ. ಮಕ್ಕಳು ಕೂಡ ಅಪ್ಪನ ಜತೆಯಲ್ಲಿ ಅಷ್ಟಾಗಿ ನಂಟು ಹೊಂದಿಲ್ಲವಂತೆ. ಇದೇ ಕಾರಣಕ್ಕೆ ಪತಿಯೇ ಬೇಡ ಎಂಬಂತೆ ಪತ್ನಿ ವರ್ತಿಸುತ್ತಿದ್ದಳು ಎಂಬ ಅರೋಪ ಕೇಳಿಬಂದಿದೆ. ವಿಷ ಸೇವಿಸಿದ್ದ ಫಯಾಜ್​ಗೆ ಸದ್ಯ ಚಿಕಿತ್ಸೆ ಮುಂದುವರಿದಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುವಂತಾಗಿದೆ.

ಇಷ್ಟೆಲ್ಲಾ ನಡೆದಿದ್ದರೂ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಲು ಪತ್ನಿ ನಿರಾಕರಿಸಿದ್ದು, ಪತಿ ಮನೆಯವರು ಹಲವಾರು ಆರೋಪಗಳನ್ನ ಮಾಡುತ್ತಿದ್ದಾರೆ. ಸೂಕ್ತ ತನಿಖೆ ನಡೆಸಿ ಪತ್ನಿಗೆ ಸೂಕ್ತ ಶಿಕ್ಷೆ ಕೊಡಿಸಬೇಕೆಂದು ಆಗ್ರಹಿಸುತ್ತಿದ್ದಾರೆ. ಆದ್ರೆ ಕುಟುಂಬಕ್ಕಾಗಿ ಇಷ್ಟು ವರ್ಷ ದುಡಿದವನ ಪರಿಸ್ಥಿತಿ ಮಾತ್ರ ಚಿಂತಾಜನಕವಾಗಿದೆ.

ಇದನ್ನೂ ಓದಿ: ಪತಿ- ಪತ್ನಿ ಜಗಳದಲ್ಲಿ ಪತಿರಾಯನ ಕಿವಿ ಕಟ್: ಬುದ್ಧಿವಾದ ಹೇಳಿದ ಪತಿಗೆ, ಪತ್ನಿ ಕುಟುಂಬದವರಿಂದ ಹಲ್ಲೆ

Published On - 7:59 am, Thu, 25 March 21

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ