Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತಿ- ಪತ್ನಿ ಜಗಳದಲ್ಲಿ ಪತಿರಾಯನ ಕಿವಿ ಕಟ್: ಬುದ್ಧಿವಾದ ಹೇಳಿದ ಪತಿಗೆ, ಪತ್ನಿ ಕುಟುಂಬದವರಿಂದ ಹಲ್ಲೆ

ಬೇರೆ ಯುವಕರ ಜತೆ ಓಡಾಡುವುದರಿಂದ ಮನೆಯ ಮರ್ಯಾದೆ ಹೋಗುತ್ತದೆಂದು ಹೇಳದ್ದನಂತೆ ಅಷ್ಟೇ. ಗಂಡ ಹೆಂಡಿರ ನಡುವೆ ಕದನ ಶುರುವಾಗಿದೆ. ಹೇಮಾಳ ತಾಯಿ ಚಂದ್ರಮ್ಮ ಹಾಗೂ ಹೇಮಾಳ ಸಹೋದರ ಶ್ಯಾಮಪ್ರಸಾದ್ ಸೇರಿಕೊಂಡು ಮೈಲಾರಿ ಮೇಲೆ ತೀವ್ರ ಹಲ್ಲೆ ನಡೆಸಿದರಂತೆ

ಪತಿ- ಪತ್ನಿ ಜಗಳದಲ್ಲಿ ಪತಿರಾಯನ ಕಿವಿ ಕಟ್: ಬುದ್ಧಿವಾದ ಹೇಳಿದ ಪತಿಗೆ, ಪತ್ನಿ ಕುಟುಂಬದವರಿಂದ ಹಲ್ಲೆ
ಹಲ್ಲೆಗೊಳಗಾದ ಮೈಲಾರಿ
Follow us
ಪೃಥ್ವಿಶಂಕರ
|

Updated on: Mar 07, 2021 | 12:18 PM

ಚಿತ್ರದುರ್ಗ: ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತೊಂದಿದೆ. ಆದ್ರೆ,‌ ಕೋಟೆನಾಡು ಚಿತ್ರದುರ್ಗದಲ್ಲಿ ಮಾತ್ರ ಗಂಡ ಹೆಂಡತಿ ಜಗಳ ಅತಿರೇಕಕ್ಕೆ ತಲುಪಿದೆ. ಪರಿಣಾಮ ಪತಿ ಪತ್ನಿಯ ಕದನದಲ್ಲಿ ಪತಿರಾಯನ ಕಿವಿಯೇ ಕಟ್ಟಾಗಿ ಹೋದ ಘಟನೆ ನಡೆದಿದೆ. ಈ ಕುರಿತು ಒಂದು ವರದಿ‌ ಇಲ್ಲಿದೆ.

ಚಳ್ಳಕೆರೆ ಪಟ್ಟಣದ ಗಾಂಧಿ‌ನಗರದ ನಿವಾಸಿ ಮೈಲಾರಿ ಮತ್ತು ಚಳ್ಳಕೆರೆ ಪಟ್ಟಣದ ತ್ಯಾಗರಾಜ್ ನಗರದ ಹೇಮಾ ಮೂರ್ನಾಲ್ಕು ವರ್ಷಗಳ ಹಿಂದೆಯೇ ಮದುವೆ ಆಗಿದ್ದರು. ಆದ್ರೆ,‌ ಹೊಂದಾಣಿಕೆ ಕೊರತೆಯಿಂದ ಆಗಾಗ ಇಬ್ಬರ ನಡುವೆ ಜಗಳ ನಡೆಯುತ್ತಲೇ ಇತ್ತು. ನಿನ್ನೆಯೂ ಮೈಲಾರಿ ಮನೆಗೆ ಬಂದು ಪತ್ನಿ ಹೇಮಾಗೆ ಬುದ್ಧಿವಾದ ಹೇಳಲು ಮುಂದಾಗಿದ್ದನಂತೆ.

ಗಂಡ ಹೆಂಡಿರ ನಡುವೆ ಕದನ ಶುರುವಾಗಿದೆ.. ಬೇರೆ ಯುವಕರ ಜತೆ ಓಡಾಡುವುದರಿಂದ ಮನೆಯ ಮರ್ಯಾದೆ ಹೋಗುತ್ತದೆಂದು ಹೇಳದ್ದನಂತೆ ಅಷ್ಟೇ. ಗಂಡ ಹೆಂಡಿರ ನಡುವೆ ಕದನ ಶುರುವಾಗಿದೆ. ಹೇಮಾಳ ತಾಯಿ ಚಂದ್ರಮ್ಮ ಹಾಗೂ ಹೇಮಾಳ ಸಹೋದರ ಶ್ಯಾಮಪ್ರಸಾದ್ ಸೇರಿಕೊಂಡು ಮೈಲಾರಿ ಮೇಲೆ ತೀವ್ರ ಹಲ್ಲೆ ನಡೆಸಿದರಂತೆ. ತೆಂಗಿನ ಕಾಯಿ‌ಕೊಚ್ಚುವ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಅಳಿಯ ಶ್ಯಾಮ್ ಪ್ರಸಾದ್ ಬಾಯಿಯಿಂದಲೇ‌ ಕಚ್ಚಿ ಕಿವಿ ತುಂಡರಿಸಿದ್ದಾನೆ ಎಂದು ಗಾಯಾಳು ಮೈಲಾರಿ ಆರೋಪಿಸಿದ್ದಾರೆ.

ಇನ್ನು ಗಾಯಾಳು ಮೈಲಾರಿ ತನ್ನ ಪತ್ನಿ ಹೇಮಾ, ಅತ್ತೆ ಚಂದ್ರಮ್ಮ ಹಾಗೂ ಅಳಿಯ ಶ್ಯಾಮ್ ಪ್ರಸಾದ್ ವಿರುದ್ಧ ಚಳ್ಳಕೆರೆ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಾರೆ. ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು‌ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಇನ್ನು ಮಾರಣಾಂತಿಕ‌ ಹಲ್ಲೆ ಮಾಡಿ ಕೊಲೆ ಯತ್ನ ನಡೆಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗಾಯಾಳು ಸಹೋದರಿ ಆಗ್ರಹಿಸಿದ್ದಾರೆ.

ಒಟ್ಟಾರೆಯಾಗಿ ಪತ್ನಿ ಮೇಲೆ ಶಂಕೆ ಪಟ್ಟು ಬುದ್ಧಿವಾದ ಹೇಳಲು ಹೋದ ಪತಿ ಮೇಲೆ ತೀವ್ರ ಹಲ್ಲೆ ನಡೆದಿದೆ. ಕಿವಿ ಕಟ್ ಆಗಿದ್ದು ತೀವ್ರ ಗಾಯಗೊಂಡ ಗಾಯಾಳು ಪತಿ ಆಸ್ಪತ್ರೆ ಸೇರಿದ್ದಾನೆ. ಚಳ್ಳಕೆರೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೂಲಂಕುಷ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ಇದನ್ನೂ ಓದಿ:ಗಂಡ ಹೆಂಡತಿ ಜಗಳಕ್ಕೆ ಬಲಿಯಾಯ್ತು ಕಂದಮ್ಮ: ತಂದೆಯಿಂದಲೇ ಮಗನ ಹತ್ಯೆ