AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡ ನಾಮಫಲಕ ಅಳವಡಿಸುವಂತೆ ಗಡಿ ಜಿಲ್ಲೆಗಳ ಡಿಸಿಗಳಿಗೆ ಸೂಚಿಸಿದ ಶಿವರಾಜ ತಂಗಡಗಿ

ವಿಕಾಸಸೌಧದಲ್ಲಿ ಡಿಸಿಗಳ ಜೊತೆಗಿನ ವಿಡಿಯೋ ಕಾನ್ಫರೆನ್ಸ್​ನಲ್ಲಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಅಂಗಡಿ ಮುಂದಿನ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ವಿಚಾರವಾಗಿ ಮಾರ್ಚ್ 12ರಂದು ಅನುಷ್ಠಾನ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಗಡಿ ಜಿಲ್ಲೆಗಳಲ್ಲಿ ಮರಾಠಿ ನಾಮಫಲಕ ತೆರವುಗೊಳಿಸಿ ಕನ್ನಡ ನಾಮಫಲಕ ಅಳವಡಿಸಬೇಕು ಎಂದು ಡಿಸಿಗಳಿಗೆ ಸೂಚನೆ ನೀಡಿದ್ದಾರೆ. 

ಕನ್ನಡ ನಾಮಫಲಕ ಅಳವಡಿಸುವಂತೆ ಗಡಿ ಜಿಲ್ಲೆಗಳ ಡಿಸಿಗಳಿಗೆ ಸೂಚಿಸಿದ ಶಿವರಾಜ ತಂಗಡಗಿ
ಡಿಸಿಗಳೊಂದಿಗೆ ಸಚಿವ ಶಿವರಾಜ ತಂಗಡಗಿ ಸಭೆ
Follow us
ಕಿರಣ್​ ಹನಿಯಡ್ಕ
| Updated By: ಗಂಗಾಧರ​ ಬ. ಸಾಬೋಜಿ

Updated on: Mar 07, 2024 | 8:13 PM

ಬೆಂಗಳೂರು, ಮಾರ್ಚ್​ 07: ಅಂಗಡಿ ಮುಂದಿನ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ವಿಚಾರವಾಗಿ ಮಾರ್ಚ್ 12ರಂದು ಅನುಷ್ಠಾನ ವರದಿ ಸಲ್ಲಿಸುವಂತೆ ಡಿಸಿಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ (Shivaraj Tangadagi) ಸೂಚನೆ ನೀಡಿದ್ದಾರೆ. ವಿಕಾಸಸೌಧದಲ್ಲಿ ಡಿಸಿಗಳ ಜೊತೆಗಿನ ವಿಡಿಯೋ ಕಾನ್ಫರೆನ್ಸ್​ನಲ್ಲಿ ಮಾತನಾಡಿದ ಅವರು, ವಿಧಾನಸಭಾ ಕ್ಷೇತ್ರವಾರು ಖುದ್ದು ಭೇಟಿ ನೀಡಿ ಪರಿಶೀಲಿಸುವಂತೆ ತಾಕೀತು ಮಾಡಿದ್ದಾರೆ. ಗಡಿ ಜಿಲ್ಲೆಗಳಾದ ಚಾಮರಾಜನಗರ, ಬೆಳಗಾವಿ, ಬಳ್ಳಾರಿ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಒತ್ತು ನೀಡಿ ಎಂದಿದ್ದಾರೆ. ಇನ್ನು ಖಾನಾಪುರ, ನಿಪ್ಪಾಣಿ, ಚಿಕ್ಕೋಡಿ ತಾಲೂಕುಗಳಲ್ಲಿ ಮರಾಠಿ ನಾಮಫಲಕ ತೆರವುಗೊಳಿಸಿ ಕನ್ನಡ ನಾಮಫಲಕ ಅಳವಡಿಸಬೇಕು ಎಂದು ಡಿಸಿಗಳಿಗೆ ಸೂಚನೆ ನೀಡಿದ್ದಾರೆ.

ನೆಮ್ಮದಿಯಿಂದ ಜೀವನ ಮಾಡಲು ಕರ್ನಾಟಕ ಬೇಕು. ತಿನ್ನುವುದಕ್ಕೆ ಇಲ್ಲಿನ ಅನ್ನಬೇಕು, ಕುಡಿಯಲು ಇಲ್ಲಿನ ನೀರು ಬೇಕು. ರಾಜ್ಯದ ಎಲ್ಲಾ ಸುಖ ಸಂಪತ್ತು ಈ ಪರಭಾಷಿಕ ವ್ಯಾಪಾರಿಗಳಿಗೆ ಬೇಕು. ಆದರೆ ಕನ್ನಡ ಅಂದರೆ ಅದೇನೋ ನಿರ್ಲಕ್ಷ್ಯ, ಅಸಡ್ಡೆ ಅದಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಇತ್ತೀಚೆಗೆ ರಾಜಧಾನಿ ಬೆಂಗಳೂರಿನಲ್ಲಿ ರಣಕಹಳೆ ಮೊಳಗಿಸಿದ್ದರು. ಕನ್ನಡ ನಾಮಪಲಕ ಅಳವಡಿಸದ ಅಂಗಡಿ ಮುಗಟ್ಟುಗಳ ಮಾಲೀಕರಿಗೆ ಸರಿಯಾಗಿ ಬಿಸಿ ಮುಟ್ಟಿಸಿದ್ದರು.

ಇದನ್ನೂ ಓದಿ: ಕನ್ನಡ ನಾಮಫಲಕ: ಗಡುವು ವಿಸ್ತರಿಸಿದ್ದಕ್ಕೆ ಕರವೇ ನಾರಾಯಣಗೌಡ ಗರಂ, ಸರ್ಕಾರಕ್ಕೆ ಖಡಕ್ ಎಚ್ಚರಿಕೆ

ಕನ್ನಡರಾಮಯ್ಯ ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಇರಬೇಕು ಅಂತ ನೀಡಿದ್ದ 2 ತಿಂಗಳ ಗಡುವು ಫೆ. 29ರಂದು ಅಂತ್ಯಗೊಂಡಿತ್ತು. ಶೇ.60ರಷ್ಟು ಕನ್ನಡರಷ್ಟು ಕನ್ನಡವಿರದ ನಾಮಫಲಕಗಳನ್ನ ಹಾಕಿದವರ ವಿರುದ್ಧ ರಾಜ್ಯಾದ್ಯಂತ ಎಲ್ಲ ನಗರಗಳಲ್ಲೂ ಕ್ರಮಕೈಗೊಳ್ಳಬೇಕಿತ್ತು. ಇದಕ್ಕಾಗಿ ಬೆಂಗಳೂರು ಸೇರಿ ಎಲ್ಲ ನಗರಗಳಲ್ಲೂ ಅಧಿಕಾರಿಗಳು ಸಿದ್ಧತೆ ನಡೆಸಿದ್ದರು. ಅಲ್ಲದೇ ಕನ್ನಡ ಪರ ಸಂಘಟನೆಗಳು ಪ್ರತಿಭಟಿಸಲು ಸಿದ್ಧತೆ ನಡೆಸಿದ್ದವು. ಆದರೆ, ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವ ಡಿ ಕೆ ಶಿವಕುಮಾರ್ ಮತ್ತು 2 ವಾರಗಳ ಗಡುವು ನೀಡಿ ಟ್ವೀಟ್‌ ಮಾಡಿದ್ದರು.

ಇದನ್ನೂ ಓದಿ: 60% Signboards in Kannada: ಶೇ.60 ರಷ್ಟು ಕನ್ನಡ ಬೋರ್ಡ್ ಅಳವಡಿಕೆಗೆ ಇದ್ದ ಗಡುವು ವಿಸ್ತರಣೆ

ಕನ್ನಡ ನಾಮಫಲಕ ಹಾಕದ ಅಂಗಡಿ-ಮುಂಗಟ್ಟುಗಳ ವಿರುದ್ಧ ಕ್ರಮಕೈಗೊಳ್ಳುವುದಾಗಿ ಇತ್ತೀಚೆಗೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಸುತ್ತೋಲೆ ಹೊರಡಿಸಿದ್ದರು. ಈ ಬಗ್ಗೆ ಕನ್ನಡ ಚಳವಳಿ ವಾಟಾಳ್‌ ನಾಗರಾಜ್‌ ಅನ್ಯ ಭಾಷೆಯ ನಾಮಫಲಕಗಳನ್ನ ಕಿತ್ತು ಹಾಕುವುದಾಗಿ ಗುಡುಗಿದ್ದರು. ಕರವೇ ಅಧ್ಯಕ್ಷ ನಾರಾಯಣಗೌಡರು ಮಾರ್ಚ್‌ 5ರಂದು ಉಗ್ರ ಹೋರಾಟದ ಎಚ್ಚರಿಕೆ ಕೂಡ ನೀಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಬಾಹ್ಯಾಕಾಶ ನಿಲ್ದಾಣದೊಳಗೆ ಶುಭಾಂಶು ಶುಕ್ಲಾಗೆ ಅಪ್ಪುಗೆಯ ಸ್ವಾಗತ
ಬಾಹ್ಯಾಕಾಶ ನಿಲ್ದಾಣದೊಳಗೆ ಶುಭಾಂಶು ಶುಕ್ಲಾಗೆ ಅಪ್ಪುಗೆಯ ಸ್ವಾಗತ
ಐಎಸ್​ಎಸ್ ತಲುಪಿದ ಮೊದಲ ಭಾರತೀಯನ ಹಿರಿಮಗೆ ಪಾತ್ರನಾದ ಶುಭಾಂಶು ಶುಕ್ಲಾ
ಐಎಸ್​ಎಸ್ ತಲುಪಿದ ಮೊದಲ ಭಾರತೀಯನ ಹಿರಿಮಗೆ ಪಾತ್ರನಾದ ಶುಭಾಂಶು ಶುಕ್ಲಾ
ನಿನ್ನೆ ಬಹಳ ಹೊತ್ತು ನಿದ್ರೆ ಮಾಡಿದೆ ಅಂತ ಜೊತೆಗಾರರು ಹೇಳುತ್ತಾರೆ: ಶುಕ್ಲಾ
ನಿನ್ನೆ ಬಹಳ ಹೊತ್ತು ನಿದ್ರೆ ಮಾಡಿದೆ ಅಂತ ಜೊತೆಗಾರರು ಹೇಳುತ್ತಾರೆ: ಶುಕ್ಲಾ
ಬಿಆರ್ ಪಾಟೀಲ್ ಸಮಾಜವಾದಿ ಹಿನ್ನೆಲೆಯವರು, ಸಿಎಂ ಜೊತೆ ಸಲುಗೆಯಿದೆ: ರಾಜಣ್ಣ
ಬಿಆರ್ ಪಾಟೀಲ್ ಸಮಾಜವಾದಿ ಹಿನ್ನೆಲೆಯವರು, ಸಿಎಂ ಜೊತೆ ಸಲುಗೆಯಿದೆ: ರಾಜಣ್ಣ
ಸ್ಥಳೀಯ ಪೋಲೀಸರ ಬಗ್ಗೆ ಕಳ್ಳರಿಗೆ ಕಿಂಚಿತ್ತೂ ಭಯವಿದ್ದಂತಿಲ್ಲ!
ಸ್ಥಳೀಯ ಪೋಲೀಸರ ಬಗ್ಗೆ ಕಳ್ಳರಿಗೆ ಕಿಂಚಿತ್ತೂ ಭಯವಿದ್ದಂತಿಲ್ಲ!
ತೆಲಂಗಾಣ: ರೈಲ್ವೆ ಹಳಿ ಮೇಲೆ ಕಾರು ಚಲಾಯಿಸಿದ ಯುವತಿ
ತೆಲಂಗಾಣ: ರೈಲ್ವೆ ಹಳಿ ಮೇಲೆ ಕಾರು ಚಲಾಯಿಸಿದ ಯುವತಿ
ಬಿಜೆಪಿ ಪ್ರಚಾರಕ್ಕಾಗಿ ಎಮರ್ಜೆನ್ಸಿ ವಿಚಾರ ಬಳಸಿಕೊಳ್ಳುತ್ತಿದೆ: ಶಿವಕುಮಾರ್
ಬಿಜೆಪಿ ಪ್ರಚಾರಕ್ಕಾಗಿ ಎಮರ್ಜೆನ್ಸಿ ವಿಚಾರ ಬಳಸಿಕೊಳ್ಳುತ್ತಿದೆ: ಶಿವಕುಮಾರ್
ಕೇವಲ ಬೆಳಗಾವಿ ಮತ್ತು ಖಾನಾಪುರ ತಾಲೂಕುಗಳಲ್ಲಿ ಮಳೆಯಾಗುತ್ತಿದೆ: ಜಾರಕಿಹೊಳಿ
ಕೇವಲ ಬೆಳಗಾವಿ ಮತ್ತು ಖಾನಾಪುರ ತಾಲೂಕುಗಳಲ್ಲಿ ಮಳೆಯಾಗುತ್ತಿದೆ: ಜಾರಕಿಹೊಳಿ
ದೈವ ನುಡಿದಂತೆ ಮನೆಗೆ ಬಂದ ಅಣ್ಣ: ತಮ್ಮ ಹೇಳಿದ್ದಿಷ್ಟು
ದೈವ ನುಡಿದಂತೆ ಮನೆಗೆ ಬಂದ ಅಣ್ಣ: ತಮ್ಮ ಹೇಳಿದ್ದಿಷ್ಟು
ಚಿಕ್ಕಮಗಳೂರು: ಹಾಲಿನ ಟ್ಯಾಂಕರ್ ಪಲ್ಟಿ, ಹರಿಯಿತು ಹಾಲಿನ ಹೊಳೆ
ಚಿಕ್ಕಮಗಳೂರು: ಹಾಲಿನ ಟ್ಯಾಂಕರ್ ಪಲ್ಟಿ, ಹರಿಯಿತು ಹಾಲಿನ ಹೊಳೆ