AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಪುರುಷರೇ…. ನಿಮ್ಮ ಹೆಂಡ್ತಿಯ ಈ ಸಂಗತಿಯನ್ನು ಯಾರ ಬಳಿಯೂ ಹೇಳಬೇಡಿ

ನಮ್ಮ ಜೀವನದ ಕೆಲವು ರಹಸ್ಯಗಳನ್ನು ನಾವು ಬೇರೆಯವರೊಂದಿಗೆ ಎಂದಿಗೂ ಹಂಚಿಕೊಳ್ಳಬಾರದು. ಇದರಿಂದ ಒಳ್ಳೆಯದಕ್ಕಿಂತ ಕೆಟ್ಟದ್ದಾಗುವುದೇ ಹೆಚ್ಚು. ಅದರಲ್ಲೂ ಗಂಡನಾದವನು ತನ್ನ ಹೆಂಡತಿಯ ಈ ಕೆಲವೊಂದು ವಿಚಾರಗಳನ್ನು ತಪ್ಪಿಯೂ ಯಾರ ಬಳಿಯೂ ಹೇಳಬಾರದು, ಏನಾದ್ರೂ ಈ ತಪ್ಪನ್ನು ಮಾಡಿದರೆ ಸುಂದರ ಸಂಸಾರ ಹಾಳಾಗುವ ಸಾಧ್ಯತೆ ಇರುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಹಾಗಿದ್ದರೆ ಪತಿ ತನ್ನ ಪತ್ನಿಗೆ ಸಂಬಂಧಿಸಿದ ಯಾವ ವಿಚಾರಗಳನ್ನು ಯಾರಿಗೂ ಹೇಳಬಾರದು ಎಂಬುದನ್ನು ನೋಡೋಣ ಬನ್ನಿ.

Chanakya Niti: ಪುರುಷರೇ…. ನಿಮ್ಮ ಹೆಂಡ್ತಿಯ ಈ ಸಂಗತಿಯನ್ನು ಯಾರ ಬಳಿಯೂ ಹೇಳಬೇಡಿ
ಚಾಣಕ್ಯ ನೀತಿImage Credit source: Pinterest
ಮಾಲಾಶ್ರೀ ಅಂಚನ್​
|

Updated on: May 21, 2026 | 7:29 PM

Share

ಗಂಡ ಹೆಂಡತಿ ನಡುವಿನ ಸಂಬಂಧ ತುಂಬಾನೇ ಸುಂದರವಾದದ್ದು. ಈ ಸಂಬಂಧ ಶಾಶ್ವತವಾಗಿ ಸುಂದರವಾಗಿರಬೇಕೆಂದರೆ  ಗಂಡ ಹೆಂಡತಿ (husband-wife) ತಮ್ಮ ನಡುವಿನ ಸಂಬಂಧದ ಬಗ್ಗೆ ಯಾರೊಂದಿಗೂ ಚರ್ಚಿಸಬಾರದು. ಕೆಲವೊಂದು ರಹಸ್ಯಗಳನ್ನು ಯಾರಿಗೂ ಶೇರ್‌ ಮಾಡಬಾರದು. ಇಬ್ಬರ ನಡುವೆ ಮೂರನೇ ವ್ಯಕ್ತಿ ಬರಲು ಬಿಡಲೇಬಾರದು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಹೀಗೆ ಗಂಡ ಹೆಂಡತಿ ನಡುವೆ ಮೂರನೇ ವ್ಯಕ್ತಿ ಬಂದರೆ ಸಂಬಂಧವೇ ಹಾಳಾಗುತ್ತದೆ. ಜೊತೆಗೆ ಗಂಡನಾದವನು ತನ್ನ ಹೆಂಡತಿಯ ಕೆಲವೊಂದು ವಿಚಾರಗಳನ್ನು ಇತರರ ಬಳಿ ಹಂಚಿಕೊಳ್ಳುವುದರಿಂದಲೂ ಸಂಬಂಧ ಹಾಳಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪತಿ ತನ್ನ ಪತ್ನಿಯ ಈ ವಿಚಾರಗಳನ್ನು ಯಾರಿಗೂ ಹೇಳಬಾರದು ಅದನ್ನು ಆದಷ್ಟು ಖಾಸಗಿಯಾಗಿರಿಸಬೇಕು ಎಂದು ಚಾಣಕ್ಯರು ಸಲಹೆ ನೀಡಿದ್ದಾರೆ. ಆ ವಿಚಾರಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಗಂಡ ತನ್ನ ಹೆಂಡತಿಯ ಈ ವಿಷಯಗಳನ್ನು ಯಾರಿಗೂ ಹೇಳಬಾರದು:

ಮನಸ್ತಾಪ, ಜಗಳ: ಪ್ರತಿಯೊಂದು ಮನೆಯಲ್ಲೂ ಜಗಳಗಳು ನಡೆಯುತ್ತವೆ. ಅದರಲ್ಲೂ ಗಂಡ ಹೆಂಡತಿಯ ನಡುವೆ ಸಣ್ಣಪುಟ್ಟ ಮನಸ್ತಾಪ, ಜಗಳ ನಡೆಯುವುದು ಸಾಮಾನ್ಯ. ಕೆಲವು ಜನರು ತಮ್ಮ ಕುಟುಂಬ ವಿವಾದಗಳನ್ನು ಇತರರ ಮುಂದೆ ಹಂಚಿಕೊಳ್ಳುತ್ತಾರೆ. ಇದು  ಕೆಟ್ಟ ಅಭ್ಯಾಸ ಎಂದು ಚಾಣಕ್ಯ ಹೇಳುತ್ತಾರೆ. ಗಂಡನೇ ಆಗಿರಲಿ ಅಥವಾ ಹೆಂಡತಿಯೇ ಆಗಿರಲಿ ತಮ್ಮ ದಾಂಪತ್ಯ ಜೀವನದಲ್ಲಿ ನಡೆದ ಮನಸ್ತಾಪಗಳನ್ನು ಇತರರ ಬಳಿ ಹೇಳಿದಾಗ ಕೆಲವರು ಗೇಲಿ ಮಾಡುತ್ತಾರೆ, ನಿಮ್ಮ ಜಗಳದ ಲಾಭವನ್ನು ಪಡೆದು ಪತಿ ಪತ್ನಿಯ ನಡುವಿನ ಸುಂದರ ಬಂಧವನ್ನು ಹಾಳು ಮಾಡುತ್ತಾರೆ. ಹಾಗಾಗಿ ಗಂಡ ಹೆಂಡತಿ ತಮ್ಮ ನಡುವೆ ಜಗಳ ಏರ್ಪಟ್ಟರೆ ಅದನ್ನು ಯಾರ ಬಳಿಯೂ ಹೇಳಬಾರದು ಎನ್ನುತ್ತಾರೆ ಚಾಣಕ್ಯ.

ಪ್ರೀತಿ ವಿಚಾರ: ನಿಮ್ಮ ಹೆಂಡತಿ ನಿಮ್ಮನ್ನು ಎಷ್ಟು ಪ್ರೀತಿಸುತ್ತಿದ್ದಾಳೆ ಎಂಬುದನ್ನು ಯಾರಬಳಿಯೂ ಹಂಚಿಕೊಳ್ಳಲು ಹೋಗಬೇಡಿ. ಅಂತಹ ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳುವುದರಿಂದ ಸಂಬಂಧ ಹಾಳಾಗುವ ಅಪಾಯ ಹೆಚ್ಚಿರುತ್ತದೆ ಎನ್ನುತ್ತಾರೆ ಚಾಣಕ್ಯ.

ಹೆಂಡತಿಯ ನ್ಯೂನತೆಗಳನ್ನು ಯಾರಿಗೂ ಹೇಳಬೇಡಿ: ನಿಮ್ಮ ಹೆಂಡತಿಗೆ ಕೆಟ್ಟ ಅಭ್ಯಾಸವಿದ್ದರೆ ಅಥವಾ ಸಣ್ಣಪುಟ್ಟ ವಿಷಯಕ್ಕೂ ಕೋಪಮಾಡಿಕೊಳ್ಳುವಂತಹ ನ್ಯೂನತೆಗಳಿದ್ದರೆ  ನೀವು ಅದನ್ನು ಎಂದಿಗೂ ಇತರರೊಂದಿಗೆ ಹೇಳಬಾರದು. ನಿಮ್ಮ ಹೆಂಡತಿಯ ನ್ಯೂನತೆಗಳು ಅಥವಾ ಕೆಟ್ಟ ಅಭ್ಯಾಸಗಳ ಬಗ್ಗೆ ಉಲ್ಲೇಖಿಸುವುದು ನಿಮ್ಮ ಸಂಬಂಧದಲ್ಲಿ ಬಿರುಕು ಮೂಡಲು ಕಾರಣವಾಗುತ್ತದೆ. ಅಲ್ಲದೆ ನಿಮ್ಮ ಸಂಬಂಧದ ಬಗ್ಗೆ ಇತರರು ಗೇಲಿ ಮಾಡುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ಗುಣಗಳಿದ್ದರೆ ಜನ ನಿಮ್ಮನ್ನು ಸುಲಭವಾಗಿ ಅವರ ತಾಳಕ್ಕೆ ತಕ್ಕಂತೆ ಕುಣಿಸುತ್ತಾರೆ ಎಚ್ಚರ…!

ಹೆಂಡತಿಯ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳು: ನಿಮ್ಮ ಹೆಂಡತಿ ಅನಾರೋಗ್ಯದಿಂದ ಬಳಲುತ್ತಿದ್ದರೆ ಅಥವಾ ದೈಹಿಕವಾಗಿ ಅಸ್ವಸ್ಥರಾಗಿದ್ದರೆ, ನೀವು ಅದನ್ನು ಯಾರಿಗೂ ಹೇಳಬಾರದು. ಇದು ಹೆಂಡತಿಯ ಮನಸ್ಸನ್ನು ಘಾಸಿಗೊಳಿಸುತ್ತದೆ ಜೊತೆಗೆ ಮೂರನೇ ವ್ಯಕ್ತಿ ಇಲ್ಲಸಲ್ಲದ ಮಾತುಗಳನ್ನಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ನಿಮ್ಮ ಹೆಂಡತಿಗೆ ಆರೋಗ್ಯಕ ಸಮಸ್ಯೆಗಳಿದ್ದರೆ ನೀವು ಅವಳಿಗೆ ಬೆಂಬಲವಾಗಿ ನಿಲ್ಲಬೇಕು, ಆಕೆಯ ದೌರ್ಬಲ್ಯಗಳನ್ನು ಜಗತ್ತಿಗೆ ಬಹಿರಂಗಪಡಿಸಬಾರದು.

ಹೆಂಡತಿಯ ಹಿಂದಿನ ವಿಷಯಗಳ ಬಗ್ಗೆ ಮಾತನಾಡಬಾರದು: ಪ್ರತಿಯೊಬ್ಬರಿಗೂ ಪಾಸ್ಟ್‌ ಇದ್ದೇ ಇರುತ್ತದೆ. ನಿಮ್ಮ ಹೆಂಡತಿ ಮದುವೆಗೂ ಮುನ್ನ ಯಾರನ್ನೋ ಪ್ರೀತಿಸುತ್ತಿದ್ದರೆ ಅಥವಾ ಆಕೆಯ ಮನಸ್ಸಿಗೆ ಏನಾದ್ರೂ ನೋವಾಗಿದ್ದರೆ ಹೆಂಡತಿಯ ಈ ಭೂತಕಾಲದ ಸಂಗತಿಗಳನ್ನು ಗಂಡ ಯಾರ ಬಳಿಯೂ ಹಂಚಿಕೊಳ್ಳಬಾರದು. ಇದರಿಂದ ಹೆಂಡತಿ ಅಸಮಾಧಾನಗೊಳ್ಳಬಹುದು ಮತ್ತು ಇದರಿಂದ ಸಂಬಂಧದಲ್ಲಿ ಬಿರುಕು ಮೂಡುವ ಸಾಧ್ಯತೆ ಇರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್