ಕನ್ನಡ ನಾಮಫಲಕ: ಗಡುವು ವಿಸ್ತರಿಸಿದ್ದಕ್ಕೆ ಕರವೇ ನಾರಾಯಣಗೌಡ ಗರಂ, ಸರ್ಕಾರಕ್ಕೆ ಖಡಕ್ ಎಚ್ಚರಿಕೆ

ಕರ್ನಾಟಕದ ಎಲ್ಲಾ ಅಂಗಡಿ ಮಳಿಗೆಗಳ ಬೋರ್ಡ್​ಗಳಲ್ಲಿ ಶೇ.60 ರಷ್ಟು ಕನ್ನಡ ಇರಬೇಕು ಎಂಬ ನಿಯಮ ಜಾರಿಯಾಗಿದೆ. ಅದರಂತೆ, ಬೋರ್ಡ್​ಗಳ ಬದಲಾವಣೆಗೆ ನೀಡಲಾಗಿದ್ದ ಗಡುವು ನಿನ್ನೆಗೆ (ಫೆಬ್ರವರಿ 28) ಮುಕ್ತಾಯಗೊಂಡಿದೆ. ಈ ನಡುವೆ ಒಂದಷ್ಟು ವ್ಯಾಪಾರಸ್ತರು ಹಾಗೂ ಕಂಪನಿಗಳು ನಿಯಮಾನುಸಾರ ಬೋರ್ಡ್ ಅಳವಡಿಕೆಗೆ ಮತ್ತಷ್ಟು ಸಮಯಾವಕಾಶ ಕೇಳಿದ್ದರು. ಹೀಗಾಗಿ ಶೇ.60 ರಷ್ಟು ಕನ್ನಡದಲ್ಲಿ ನಾಮಫಲಕ ಅಳವಡಿಕೆಗೆ ಇದ್ದ ಗಡುವನ್ನು ವಿಸ್ತರಿಸಲಾಗಿದೆ. ಆದ್ರೆ, ಇದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸರ್ಕಾರಕ್ಕೆ ಖಡಕ್​ ಎಚ್ಚರಿಕೆ ನೀಡಿದ್ದಾರೆ.

ಕನ್ನಡ ನಾಮಫಲಕ: ಗಡುವು ವಿಸ್ತರಿಸಿದ್ದಕ್ಕೆ ಕರವೇ ನಾರಾಯಣಗೌಡ ಗರಂ, ಸರ್ಕಾರಕ್ಕೆ ಖಡಕ್ ಎಚ್ಚರಿಕೆ
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Feb 29, 2024 | 5:33 PM

ಬೆಂಗಳೂರು, (ಫೆಬ್ರವರಿ 29): ಕರ್ನಾಟಕದ (Karnataka) ಎಲ್ಲಾ ಅಂಗಡಿ ಮಳಿಗೆಗಳ ಬೋರ್ಡ್​ಗಳಲ್ಲಿ (Kannada Board)  ಶೇ.60 ರಷ್ಟು ಕನ್ನಡ ಅಳವಡಿಕೆಗೆ ಎರಡು ವಾರಗಳ ಕಾಲಾವಕಾಶ ನೀಡಲಾಗಿದೆ. ಇದರಿಂದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ (karave Narayana Gowda) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಬಿಎಂಪಿ (BBMP) ಆಯುಕ್ತರ ಜತೆ ನಿನ್ನೆ(ಫೆಬ್ರವರಿ 28) ಮಾತನಾಡಿದಾಗ ಮಧ್ಯರಾತ್ರಿ ತನಕ ಗಡುವು ಅಂದಿದ್ದರು. ಅಲ್ಲದೇ ನಿಯಮ ಉಲ್ಲಂಘಿಸಿದರೆ. ಮುಲಾಜಿಲ್ಲದೇ ಕ್ರಮ ಕೈಗೊಳ್ಳುವ ಕುರಿತು ಬಿಬಿಎಂಪಿ ಕಮೀಷನರ್ ತಿಳಿಸಿದ್ದರು. ಆದ್ರೆ, ಡಿಕೆ ಶಿವಕುಮಾರ್ ಅವರು ಇದೀಗ 2 ವಾರ ಗಡುವು ಕೊಟ್ಟಿದ್ದಾರೆ. ಸರ್ಕಾರ ಹೀಗೆ ಗಡುವು ವಿಸ್ತರಣೆ ಮಾಡ್ತಾ ಹೋದ್ರೆ ಯಾರು ಕೂಡ ನಾಮಫಲಕ ಹಾಕುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಬಗ್ಗೆ ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ನಾರಾಯಣಗೌಡ, 45 ಸಾವಿರ ವ್ಯಾಪಾರಿಗಳು ಈ ತನಕ ಕನ್ನಡದಲ್ಲಿ ನಾಮಫಲಕ ಹಾಕಿದ್ದಾರೆ. ಆಂಗ್ಲ ಫಲಕಕ್ಕೆ ಕೇವಲ ಬಟ್ಟೆ ಮುಚ್ಚಿದ್ದಾರೆ. ಆದರೆ ಇಂತಹ ಮೂರ್ಖತನಕ್ಕೆ ನಾವು ಅವಕಾಶ ಕೊಡುವುದಿಲ್ಲ. ಸರ್ಕಾರ, ಬಿಬಿಎಂಪಿ ಬಿಟ್ಟರೂ ಕರ್ನಾಟಕ ರಕ್ಷಣಾ ವೇದಿಕೆ ಬಿಡುವುದಿಲ್ಲ. ಹೀಗೆ ಗಡುವು ಕೊಟ್ಟರೆ ಯಾರು ಕೂಡ ಸರ್ಕಾರದ ಮಾತಿಗೆ ಬೆಲೆ ಕೊಡುವುದಿಲ್ಲ. ಸರ್ಕಾರ ಎರಡು ವಾರ ಕಾಯಲಿ , ನಾವು ಕೂಡ ಕಾಯುತ್ತೇವೆ. ಇನ್ನೂ ಕೂಡ ಆಂಗ್ಲ ಫಲಕ ಇದ್ದರೆ ನಮ್ಮ ಕಾರ್ಯಕರ್ತರು ಕಿತ್ತು ಹಾಕುತ್ತಾರೆ. ಈ ರಾಜ್ಯದಲ್ಲಿ ವ್ಯಾಪಾರ ಮಾಡಬೇಕು, ಬದುಕಬೇಕು ಅಂದರೆ ನಮ್ಮ ನೆಲಕ್ಕೆ, ಭಾಷೆಗೆ ಗೌರವ ಕೊಡಿ ಎಂದು ಹೇಳಿದರು.

ಇದನ್ನೂ ಓದಿ: 60% Signboards in Kannada: ಶೇ.60 ರಷ್ಟು ಕನ್ನಡ ಬೋರ್ಡ್ ಅಳವಡಿಕೆಗೆ ಇದ್ದ ಗಡುವು ವಿಸ್ತರಣೆ

ಒಂದು ನಾಮಫಲಕ ಹಾಕಲು ಪದೇ ಪದೇ ಗಡುವು ಕೇಳಿದರೆ ಹೇಗೆ? ಎಂದು ಪ್ರಶ್ನಿಸಿದ ನಾರಾಯಣಗೌಡ, ಯಾರು ಕನ್ನಡ ನಾಮಫಲಕ ಹಾಕಿಲ್ಲ ಅಂದರೆ ಅಂತವರಿಗೆ ಎಚ್ಚರಿಕೆ ನೀಡಬೇಕು ಎಂದು ನಾವು ಈಗಾಗಲೇ ನಮ್ಮ ರಾಜ್ಯದ ಕರವೇಯ ಎಲ್ಲಾ ಜಿಲ್ಲಾ, ತಾಲೂಕು, ವಾರ್ಡ್ ಅಧ್ಯಕ್ಷರಿಗೆ ಕರೆ ನೀಡಿದ್ದೇವೆ. ಕೇಳದಿದ್ದರೆ ತೆರವು ಮಾಡಬೇಕೆಂದು ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.

ನಾಳೆ(ಮಾರ್ಚ್ 01) ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಮಟ್ಟದ ಸಭೆ ನಡೆಸಲಿದೆ. ಕೇವಲ ರಾಜಧಾನಿಯಲ್ಲಿ ಮಾತ್ರವಲ್ಲ. ಇಡೀ ರಾಜ್ಯದಲ್ಲಿ ಕನ್ನಡ ನಾಮಫಲಕ ಇರಬೇಕು. ಬೆಳಗಾವಿ, ಮಂಗಳೂರು , ಗಡಿ ಭಾಗದಲ್ಲಿ ಕನ್ನಡ ನಾಮಫಲಕ ಇರಬೇಕು. ಒಂದು ವೇಳೆ ಇಲ್ಲದಿದ್ದರೆ ಡಿಸೆಂಬರ್ 27 ರಂದು ಆದ ಘಟನೆ ಮತ್ತೆ ಸಂಭವಿಸಲಿದೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ