ಮಹಿಳಾ ಐಪಿಎಲ್ ಶುರು ಬೆನ್ನಲ್ಲೇ ಬುಕ್ಕಿಗಳ ಮೇಲೆ ರೌಡಿಗಳ ಕಣ್ಣು: ಹಣಕ್ಕೆ ಬೇಡಿಕೆಯಿಟ್ಟಿದ್ದ ರೌಡಿಶೀಟರ್ ಅರೆಸ್ಟ್

ಮಹಿಳಾ ಐಪಿಎಲ್ ಶುರು ಬೆನ್ನಲ್ಲೆ ರೌಡಿಗಳ ಕಣ್ಣು ಬುಕ್ಕಿಗಳ ಮೇಲೆ ಬಿದ್ದಂತಿದೆ. ಬುಕ್ಕಿ ಕಿಡ್ನ್ಯಾಪ್ ಮಾಡಿ ಹಣಕ್ಕೆ ಬೇಡಿಕೆಯಿಟ್ಟಿದ್ದ ರೌಡಿಶೀಟರ್​ನನ್ನು ಪೊಲೀಸರು ಬಂಧಿಸಿದ್ದಾರೆ. ಸಿಸಿಬಿ ಪೊಲೀಸರಿಂದ ಐವರನ್ನು ವಶಕ್ಕೆ ಪಡೆಯಲಾಗಿದ್ದು, ಕಿಡ್ನ್ಯಾಪ್ ಆಗಿದ್ದ ವ್ಯಕ್ತಿಯ ರಕ್ಷಣೆ ಮಾಡಲಾಗಿದೆ. ಸದ್ಯ ಸಿಸಿಬಿ ಪೊಲೀಸರಿಂದ ಆರೋಪಿಗಳ ತನಿಖೆ ಮಾಡಲಾಗುತ್ತಿದೆ. ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಮಾಡಲಾಗಿದೆ. 

ಮಹಿಳಾ ಐಪಿಎಲ್ ಶುರು ಬೆನ್ನಲ್ಲೇ ಬುಕ್ಕಿಗಳ ಮೇಲೆ ರೌಡಿಗಳ ಕಣ್ಣು: ಹಣಕ್ಕೆ ಬೇಡಿಕೆಯಿಟ್ಟಿದ್ದ ರೌಡಿಶೀಟರ್ ಅರೆಸ್ಟ್
ರೌಡಿಶೀಟರ್ ಆ್ಯಂಡ್​ ಗ್ಯಾಂಗ್ ಬಂಧನ
Follow us
Jagadisha B
| Updated By: ಗಂಗಾಧರ​ ಬ. ಸಾಬೋಜಿ

Updated on:Feb 29, 2024 | 4:47 PM

ಬೆಂಗಳೂರು, ಫೆಬ್ರವರಿ 29: ಮಹಿಳಾ ಐಪಿಎಲ್ ಶುರು ಬೆನ್ನಲ್ಲೆ ರೌಡಿಗಳ (rowdy sheeter) ಕಣ್ಣು ಬುಕ್ಕಿಗಳ ಮೇಲೆ ಬಿದ್ದಂತಿದೆ. ಬುಕ್ಕಿ ಕಿಡ್ನ್ಯಾಪ್ ಮಾಡಿ ಹಣಕ್ಕೆ ಬೇಡಿಕೆಯಿಟ್ಟಿದ್ದ ರೌಡಿಶೀಟರ್​ನನ್ನು ಪೊಲೀಸರು ಬಂಧಿಸಿದ್ದಾರೆ. ರೌಡಿಶೀಟರ್ ಇಟ್ಟಮಡು ಸಾಗರ್ ಅಂಡ್ ಗ್ಯಾಂಗ್ ಬಂಧಿತರು. ಸಿಸಿಬಿ ಪೊಲೀಸರಿಂದ ಐವರನ್ನು ವಶಕ್ಕೆ ಪಡೆಯಲಾಗಿದ್ದು, ಕಿಡ್ನ್ಯಾಪ್ ಆಗಿದ್ದ ವ್ಯಕ್ತಿಯ ರಕ್ಷಣೆ ಮಾಡಲಾಗಿದೆ. ಕ್ರಿಕೆಟ್ ಬುಕ್ಕಿಯಾಗಿದ್ದ ಸಂತೋಷ್ ಎಂಬಾತನನ್ನು ಆರೋಪಿಗಳು ಕಿಡ್ನ್ಯಾಪ್ ಮಾಡಿದ್ದರು. ಮಹಿಳಾ ಐಪಿಎಲ್ ನಲ್ಲಿ ಸಂತೋಷ್​​ಗೆ ಸಾಕಷ್ಟು ಹಣ ಬಂದಿತ್ತು. ಈ ಹಿನ್ನೆಲೆ ಹಣಕ್ಕಾಗಿ ರೌಡಿಗಳು ಆತನನ್ನು ಟಾರ್ಗೆಟ್​ ಮಾಡಿದ್ದಾರೆ.

ರೌಡಿಶೀಟರ್ ಸಾಗರ್​ಗೆ ತಿಂಗಳಿಗೆ ಎರಡು ಲಕ್ಷ ರೂ. ಹಪ್ತಾ ಕೊಡುವಂತೆ ಸಂತೋಷ್ ಎಂಬಾತನಿಗೆ ಬೆದರಿಕೆ ಹಾಕಿದ್ದರು. ಹಣ ನೀಡಲು ನಿರಾಕರಿಸಿದ ವೇಳೆ ಸಂತೋಷ್​ನನ್ನ ಕಿಡ್ನ್ಯಾಪ್ ಮಾಡಿ ಕನಕಪುರದ ಕಡೆಗೆ ಹೋಗಿದ್ದಾರೆ. ಖಚಿತ ಮಾಹಿತಿ ಅಧಾರಿಸಿ ಆರೋಪಿಗಳ ಬೆನ್ನುಬಿದ್ದ ಸಿಸಿಬಿ ಪೊಲೀಸರು ಕನಕಪುರದ ನಿರ್ಜನ ಪ್ರದೇಶದ ಬಳಿ ರೌಡಿಶೀಟರ್ ಸಾಗರ್ ಸೇರಿ ನಾಲ್ವರ ಬಂಧನ ಮಾಡಿದ್ದಾರೆ. ಸದ್ಯ ಸಿಸಿಬಿ ಪೊಲೀಸರಿಂದ ಆರೋಪಿಗಳ ತನಿಖೆ ಮಾಡಲಾಗುತ್ತಿದೆ. ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಮಾಡಲಾಗಿದೆ.

ಮಹಿಳೆಯ ಭೀಕರ ಕೊಲೆ

ನೆಲಮಂಗಲ: ಬೆಂಗಳೂರು ಉತ್ತರ ತಾಲ್ಲೂಕಿನ ವಡ್ಡರಹಳ್ಳಿ ಗ್ರಾಮದ ಬಳಿ ಮಹಿಳೆಯ ಭೀಕರ ಕೊಲೆ ಮಾಡಿರುವಂತಹ ಘಟನೆ ನಡೆದಿದೆ. ಬೇರೆಡೆ ಕೊಲೆಗೈದು ನರಸಿಂಹ ಮೂರ್ತಿ ಎಂಬುವರಿಗೆ ಸೇರಿದ ಜಮೀನಿನಲ್ಲಿ ಬಿಸಾಡಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ನಿದ್ದೆ ಹಾಳು ಮಾಡಿತೆಂದು 1 ವರ್ಷದ ಮಗುವನ್ನು ಗೋಡೆಗೆ ಎಸೆದ ತಂದೆ; ಚಿಕಿತ್ಸೆ ಫಲಿಸದೆ ಸಾವು, ತಾಯಿಯ ಆಕ್ರಂದನ

ಕೊಲೆಯ ಉದ್ದೇಶ ತಿಳಿದು ಬಂದಿಲ್ಲ. ಸ್ಥಳಕ್ಕೆ ನೆಲಮಂಗಲ ಡಿವೈಎಸ್ಪಿ ಜಗದೀಶ್, ಎಎಸ್ಪಿ ಪುರುಷೋತ್ತಮ್​ ಭೇಟಿ ನೀಡಿದ್ದಾರೆ. ಸೋಕೋ ಟೀಮ್, ಡಾಗ್ ಸ್ಕೋರ್ಡ್ ತಂಡದಿಂದ ಪರಿಶೀಲನೆ ಮಾಡಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಸುಮಾರು 1.37 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳು ನಾಶ

ಮೈಸೂರು: ಅಬಕಾರಿ ಇಲಾಖೆ ವತಿಯಿಂದ ಸುಮಾರು 1.37 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ನಾಶ ಮಾಡಲಾಗಿದೆ. ಮೈಸೂರು ವಿಭಾಗದ ಮೈಸೂರು ಜಿಲ್ಲೆ, ಮೈಸೂರು ಗ್ರಾಮಾಂತರ ಮಂಡ್ಯ, ಚಾಮರಾಜನಗರ, ಹಾಸನ, ಜಿಲ್ಲೆಗಳಲ್ಲಿ ವಸ್ತುಗಳು ವಶಪಡಿಸಿಕೊಂಡಿದ್ದಾರೆ. ಎನ್‌ಡಿಪಿಎಸ್ ಆ್ಯಕ್ಟ್ ಅಡಿಯಲ್ಲಿ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿತ್ತು.

ಇದನ್ನೂ ಓದಿ: ದಪ್ಪ ಆಗುವ ಔಷಧಿ ಎಂದು ಹೇಳಿ ಪ್ರೀತಿಸಿ ಮದುವೆಯಾದವಳಿಗೆ ವಿಷ ಉಣಿಸಿದ್ನಾ ಗಂಡ?

ಹತ್ತು ವರ್ಷಗಳಿಂದ ಜಪ್ತಿ ಮಾಡಿ ಇಟ್ಟಿದ್ದ ಮಾದಕ ವಸ್ತುಗಳು ಇಂದು ಮೈಸೂರಿನಲ್ಲಿ ನಾಶ ಮಾಡಲಾಗಿದೆ. ಜಿಲ್ಲೆಯ ಎಚ್​ಡಿ ಕೋಟೆ ತಾಲೂಕಿನ ಗುಜ್ಜೆ ಗೌಡನಾಪುರದಲ್ಲಿರುವ GIPS ಬಯೋಟೆಕ್ ಫಾರ್ಮ್​​ನಲ್ಲಿ ಮಾದಕ ವಸ್ತುಗಳ ವಿಲೇವಾರಿ ಮಾಡಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:46 pm, Thu, 29 February 24

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್