ದಪ್ಪ ಆಗುವ ಔಷಧಿ ಎಂದು ಹೇಳಿ ಪ್ರೀತಿಸಿ ಮದುವೆಯಾದವಳಿಗೆ ವಿಷ ಉಣಿಸಿದ್ನಾ ಗಂಡ?
ಬಳ್ಳಾರಿ (Ballari) ನಗರದ ಕೌಲಬಜಾರ್ನಲ್ಲಿ ಗಂಡನೇ ಹೆಂಡತಿಗೆ ಊಟದಲ್ಲಿ ವಿಷ ಹಾಕಿ ಕೊಲೆ ಮಾಡಿದ ಆರೋಪ ಕೇಳಿಬಂದಿದೆ. ಪ್ರೀತಿಸಿ ಮದುವೆಯಾಗಿದ್ದ ಸಾಧಿಕ್ ಸಾಬ್ ಮತ್ತು ಫರ್ಜಾನಾಭಿ ಜೋಡಿ ಪ್ರೀತಿಗೆ ಕೌಲಬಜಾರ್ ಜನರು ಆಸರೆಯಾಗಿದ್ದರು. ಇಂತಹ ಸುಖ ಸಂಸಾರದಲ್ಲಿ ಎಲ್ಲವೂ ಚೆನ್ನಾಗಿದೆ ಎನ್ನುವಷ್ಟರಲ್ಲಿ ಇದೀಗ ಈ ದುರ್ಘಟನೆ ನಡೆದಿದೆ. ಈ ಕುರಿತು ಮೃತಳ ಪೋಷಕರು ಬಳ್ಳಾರಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ಬಳ್ಳಾರಿ, ಫೆ.29: ಗಂಡನೇ ಹೆಂಡತಿಗೆ ಊಟದಲ್ಲಿ ವಿಷ ಹಾಕಿ ಕೊಲೆ ಮಾಡಿದ ಆರೋಪ ಬಳ್ಳಾರಿ (Ballari) ನಗರದ ಕೌಲಬಜಾರ್ನಲ್ಲಿ ಕೇಳಿಬಂದಿದೆ. ಈ ಕುರಿತು ಮೃತಳ ಪೋಷಕರು ಆರೋಪಿಸಿದ್ದಾರೆ. ಹೆಂಡತಿ ದಪ್ಪ ಆಗಲಿ ಎಂದು ಔಷಧೀಯ ನೆಪದಲ್ಲಿ ಗಂಡ ಸಾಧಿಕ ಸಾಬ್ (25) ವಿಷ ಬೆರಸಿದ್ದನಂತೆ. ಈ ಹಿನ್ನಲೆ ಮೂರು ದಿನಗಳ ಕಾಲ ವಿಮ್ಸ್ ಆಸ್ಪತ್ರೆಯಲ್ಲಿ ಮೃತ ಫರ್ಜಾನಾಭಿ (22) ಚಿಕಿತ್ಸೆಗೆ ದಾಖಲಾಗಿದ್ದರು. ಇಂದು(ಫೆ.28) ಚಿಕಿತ್ಸೆ ಫಲಿಸದೆ ಫರ್ಜಾನಾಭಿ ಮೃತರಾಗಿದ್ದಾರೆ.
ಪ್ರೀತಿಸಿ ಮದುವೆಯಾಗಿದ್ದ ಸಾಧಿಕ್ ಸಾಬ್ ಮತ್ತು ಫರ್ಜಾನಾಭಿ
ಮೃತ ಮಹಿಳೆ ಶವದ ಮುಂದೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಪ್ರೀತಿಸಿ ಮದುವೆಯಾಗಿದ್ದ ಸಾಧಿಕ್ ಸಾಬ್ ಮತ್ತು ಫರ್ಜಾನಾಭಿ ಜೋಡಿ ಪ್ರೀತಿಗೆ ಕೌಲಬಜಾರ್ ಜನರು ಆಸರೆಯಾಗಿದ್ದರು. ಸಾರ್ವಜನಿಕರೆ ಹಣ ಹೊಂದಿಸಿ ಈ ಪ್ರೀತಿಗೆ ಬೆಂಬಲಿಸಿ ಮದುವೆ ಮಾಡಿದ್ದರು. ಮದುವೆಯಾಗಿ ಐದು ವರ್ಷ ಸಂಸಾರ ಮಾಡಿದ್ದ ಇವರಿಗೆ ಎರಡು ಹೆಣ್ಣು ಮಕ್ಕಳನ್ನು ಕೂಡ ಇದ್ದರು. ಇಂತಹ ಸುಖ ಸಂಸಾರದಲ್ಲಿ ಎಲ್ಲವೂ ಚೆನ್ನಾಗಿದೆ, ಎನ್ನುವಷ್ಟರಲ್ಲಿ ಪತಿ, ಕಿರುಕುಳ ನೀಡಲು ಪ್ರಾರಂಭಿಸಿದ್ದ.
ಹೌದು, ಪದೇ ಪದೇ ಪರ್ಜಾನಾಭಿಗೆ ಗಂಡ ಸಾಧಿಕ್ ಕಿರುಕುಳ ನೀಡುತ್ತಿದ್ದನಂತೆ. ಪರ್ಜಾನಿಭಿಗೆ ತಂದೆ ಇಲ್ಲ, ಬಡತನದ ಕುಟುಂಬದಿಂದ ಬಂದ ಹೆಣ್ಣು ಮಗಳು, ಬಡತನ ಇರುವ ಹಿನ್ನೆಲೆ ಗಂಡನಿಗೆ ಹೆದರಿ ಜೀವನ ನಡೆಸುತ್ತಿದ್ದಳು. ಆದರೂ ಕೂಡ ಕರಗದ ಗಂಡನ ಮನಸ್ಸು, ಪ್ರೀತಿಸಿದ ಹೆಂಡತಿಯನ್ನ ಕೊಂದನಾ? ಎಂಬ ಪ್ರಶ್ನೆ ಮೂಡಿದೆ. ಇನ್ನು ಮೃತಳ ಪೋಷಕರು, ಆರೋಪಿಗೆ ತಕ್ಕ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿ, ಬಳ್ಳಾರಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ