AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿದ್ದೆ ಹಾಳು ಮಾಡಿತೆಂದು 1 ವರ್ಷದ ಮಗುವನ್ನು ಗೋಡೆಗೆ ಎಸೆದ ತಂದೆ; ಚಿಕಿತ್ಸೆ ಫಲಿಸದೆ ಸಾವು, ತಾಯಿಯ ಆಕ್ರಂದನ

ಅತ್ತು ಅತ್ತು ನಿದ್ದೆಯನ್ನು ಕೆಡಿಸುತ್ತಿದೆ ಎಂದು ರೊಚ್ಚಿಗೆದ್ದ ತಂದೆ ತನ್ನ ಒಂದು ವರ್ಷದ ಪುಟ್ಟ ಹೆಣ್ಣುಮಗುವನ್ನು ಗೋಡೆಗೆ ಎಸೆದಿದ್ದಾನೆ. ಮಗು ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ. ತಾಯಿ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪಾಪಿ ತಂದೆಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ನಿದ್ದೆ ಹಾಳು ಮಾಡಿತೆಂದು 1 ವರ್ಷದ ಮಗುವನ್ನು ಗೋಡೆಗೆ ಎಸೆದ ತಂದೆ; ಚಿಕಿತ್ಸೆ ಫಲಿಸದೆ ಸಾವು, ತಾಯಿಯ ಆಕ್ರಂದನ
ಮಗು ಕಳೆದುಕೊಂಡ ತಾಯಿಯ ಆಕ್ರಂದನ
TV9 Web
| Updated By: ಆಯೇಷಾ ಬಾನು|

Updated on: Feb 29, 2024 | 3:11 PM

Share

ಧಾರವಾಡ, ಫೆ.29: ತನ್ನ ನಿದ್ದೆ ಹಾಳು ಮಾಡುತ್ತಿದೆ ಎಂದು ಕೋಪಗೊಂಡ ತಂದೆ ಒಂದು ವರ್ಷದ ಪುಟ್ಟ ಕಂದಮ್ಮನ ಗೋಡೆಗೆ ಎಸೆದು ಕೊಲೆ ಮಾಡಿರುವ ಅಮಾನುಷ ಕೃತ್ಯ ಧಾರವಾಡದಲ್ಲಿ (Dharwad) ನಡೆದಿದೆ. ಮಲಗಿದ್ದಾಗ ಅಳುತ್ತಿದ್ದ ಹೆಣ್ಣು ಮಗುವಿನ ಮೇಲೆ ಸಿಟ್ಟಿಗೆದ್ದ ತಂದೆ ಮಗುವನ್ನ ಗೋಡೆಗೆ ಎಸೆದಿದ್ದಾನೆ. ಒಂದು ವರ್ಷದ ಶ್ರೇಯಾಳನ್ನು ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು ಚಿಕಿತ್ಸೆ ಫಲಿಸದೆ ಮಗು ಮೃತಪಟ್ಟಿದೆ.

ಧಾರವಾಡ ತಾಲೂಕಿನ ಯಾದವಾಡ ಗ್ರಾಮದಲ್ಲಿ ಶಂಭುಲಿಂಗಯ್ಯ ಶಾಪೂರಮಠ ಎಂಬ ಪಾಪಿ ತಂದೆ ಮಗುವಿನ ಮೇಲೆ ಕೋಪ ತೋರಿಸಿಕೊಂಡಿದ್ದಾನೆ. ಕುಡಿತದ ನಶೆಯಲ್ಲಿದ್ದಾಗ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಸದ್ಯ ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಗು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: Kalaburagi News: ಗಂಡ ಬದುಕಿದ್ದಾಗಲೇ ವಿಧವಾ ವೇತನ ಪಡೆದ ಮಹಿಳೆ! ಸ್ವತಃ ಪತಿಯಿಂದಲೇ ದೂರು

HOD ಕಿರುಕುಳಕ್ಕೆ ವಿದ್ಯಾರ್ಥಿ ಆತ್ಮಹತ್ಯೆ ಆರೋಪ

HOD ಕಿರುಕುಳದಿಂದ 18 ವರ್ಷದ ವಿದ್ಯಾರ್ಥಿ ಋಷ್ಯಂತ್ ಆತ್ಮಹತ್ಯೆ ಆರೋಪ ಕುರಿತು, ಬೆಂಗಳೂರಿನ ಪೀಣ್ಯದ ಎನ್‌ಟಿಟಿಎಫ್ ಕಾಲೇಜಿನ ವೈಸ್ ಪ್ರಿನ್ಸಿಪಾಲ್ ಹೇಳಿಕೆ ನೀಡಿದ್ದಾರೆ. ಋಷ್ಯಂತ್​ ನಮ್ಮ ಕಾಲೇಜಿನ ಒಳ್ಳೆಯ ವಿದ್ಯಾರ್ಥಿ. ಯಾಕೆ ಇಂತಹ ನಿರ್ಧಾರ ತೆಗೆದುಕೊಂಡಿದ್ದಾರೋ ನನಗೆ ಗೊತ್ತಿಲ್ಲ. ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಯಾವತ್ತೂ ಸಹಾನುಭೂತಿ ತೋರುತ್ತೆ. ಕಾಲೇಜು ಆಡಳಿತ ಮಂಡಳಿ ಋಷ್ಯಂತ್​ ಸಾವಿಗೆ ಸಂತಾಪ ಸೂಚಿಸುತ್ತೆ. ಘಟನೆ ಸಂಬಂಧ ಕಾಲೇಜು ಆಡಳಿತ ಮಂಡಳಿ ಅಗತ್ಯ ಕ್ರಮಕೈಗೊಳುತ್ತೇವೆ ಅಂತೇಳಿದ್ದಾರೆ.

ಜೆಸಿಬಿಗೆ ಬೆಂಕಿ ಹಚ್ಚಿದವನ ವಿರುದ್ಧ ಕೇಸ್

ಒತ್ತುವರಿ ತೆರವು ವೇಳೆ ಜೆಸಿಬಿಗೆ ಬೆಂಕಿ ಹಚ್ಚಿದ ಪ್ರಕರಣ ಸಂಬಂಧ ಯಲಹಂಕ ತಹಶೀಲ್ದಾರ್ ಅನಿಲ್ ರಾಜಾನುಕುಂಟೆ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ. ಸರ್ಕಾರಿ ಕೆಲಸಕ್ಕೆ ಅಡ್ಡಿ, ಅಧಿಕಾರಿಗಳ ಕೊಲೆಗೆ ಯತ್ನ, ಆಸ್ತಿ ಪಾಸ್ತಿ ನಷ್ಟ ಆರೋಪದಡಿ ದೂರು ದಾಖಲಿಸಿದ್ದಾರೆ. ಜೆಸಿಬಿ ಬೆಂಕಿ ಹಚ್ಚಿದ್ದ ಆರೋಪಿಗಳಾದ ಬಚ್ಚೇಗೌಡ, ಚೇತನ್ ಅನ್ನೋರನ್ನು ಈಗಾಗಲೇ ಪೊಲೀಸ್ರು ಬಂಧಿಸಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ