AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಬುರಗಿ: ಸಂಸದ ಉಮೇಶ್​ ಜಾಧವ್ ಬೆಂಬಲಿಗನ ಬರ್ಬರ ಹತ್ಯೆ

ಕಲಬುರಗಿ ಸಂಸದ ಉಮೇಶ್​ ಜಾಧವ್​ ಬೆಂಬಲಿಗನೂ ಆಗಿರುವ ಬಿಜೆಪಿ ಮುಖಂಡ ಗಿರೀಶ್ ಚಕ್ರ ಅವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಅಫಜಲಪುರ ತಾಲೂಕಿನ ಸಾಗನೂರು ಗ್ರಾಮದಲ್ಲಿ ನಡೆದಿದೆ. ನಾಲ್ಕು ದಿನಗಳ ಹಿಂದೆಯಷ್ಟೇ BSNL ಸಲಹಾ ಸಮಿತಿ ನಿರ್ದೇಶಕರನ್ನಾಗಿ ಗಿರೀಶ್ ಅವರನ್ನು ಸಂಸದ ಉಮೇಶ್ ಜಾಧವ್ ನೇಮಕ ಮಾಡಿದ್ದರು.

ಕಲಬುರಗಿ: ಸಂಸದ ಉಮೇಶ್​ ಜಾಧವ್ ಬೆಂಬಲಿಗನ ಬರ್ಬರ ಹತ್ಯೆ
ಅಫಜಲಪುರ ತಾಲೂಕಿನ ಸಾಗನೂರು ಗ್ರಾಮದಲ್ಲಿ ಸಂಸದ ಉಮೇಶ್​ ಜಾಧವ್ ಬೆಂಬಲಿಗ ಗಿರೀಶ್ ಚಕ್ರನ ಬರ್ಬರ ಹತ್ಯೆ
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: Rakesh Nayak Manchi|

Updated on:Mar 01, 2024 | 8:54 AM

Share

ಕಲಬುರಗಿ, ಮಾ.1: ಸಂಸದ ಡಾ. ಉಮೇಶ್​ ಜಾಧವ್ (Dr. Umesh Jadhav)​ ಬೆಂಬಲಿಗನೂ ಆಗಿರುವ ಬಿಜೆಪಿ ಮುಖಂಡರೊಬ್ಬರನ್ನು ಬರ್ಬರವಾಗಿ ಹತ್ಯೆ (Murder) ಮಾಡಿರುವ ಘಟನೆ ಅಫಜಲಪುರ ತಾಲೂಕಿನ ಸಾಗನೂರು ಗ್ರಾಮದಲ್ಲಿ ನಡೆದಿದೆ. ಗಿರೀಶ್ ಚಕ್ರ ಕೊಲೆಯಾದ ಬಿಜೆಪಿ ಮುಖಂಡ. ನಾಲ್ಕು ದಿನಗಳ ಹಿಂದೆಯಷ್ಟೇ BSNL ಸಲಹಾ ಸಮಿತಿ ನಿರ್ದೇಶಕರನ್ನಾಗಿ ಗಿರೀಶ್ ಅವರನ್ನು ಸಂಸದ ಉಮೇಶ್ ಜಾಧವ್ ನೇಮಕ ಮಾಡಿದ್ದರು.

ಈ ಹಿನ್ನೆಲೆ ಪಾರ್ಟಿ ಕೊಡುವುದಾಗಿ ನಂಬಿಸಿ ಗಿರೀಶ್ ಚಕ್ರ ಅವರನ್ನು ಸ್ನೇಹಿತರೇ ಜಮೀನಿಗೆ ಕರೆಸಿದ್ದರು. ಅದರಂತೆ ಜಮೀನಿಗೆ ಬಂದ ಗಿರೀಶ್ ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಘಟನೆ ಸಂಬಂಧ ಸ್ಥಳಕ್ಕೆ ಆಗಮಿಸಿದ ಗಾಣಗಾಪುರ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಮುಖ ಜಜ್ಜಿ ಅಪರಿಚಿತ ಮಹಿಳೆಯನ್ನ ಕೊಲೆಗೈದ ದುಷ್ಕರ್ಮಿಗಳು

ಗಿರೀಶ್​ ನನ್ನ ಕಟ್ಟಾ ಬೆಂಬಲಿಗ: ಸಂಸದ ಉಮೇಶ್ ಜಾಧವ್

ಕೊಲೆ ಬಗ್ಗೆ ಟಿವಿ9 ಜೊತೆ ಮಾತನಾಡಿದ ಸಂಸದ ಉಮೇಶ್ ಜಾಧವ್, ಗಿರೀಶ್ ಚಕ್ರ​​ ಕೊಲೆ ವಿಚಾರ ತಿಳಿದು ಆಘಾತ ಉಂಟಾಗಿದೆ. ಗಿರೀಶ್​ ನನ್ನ ಕಟ್ಟಾ ಬೆಂಬಲಿಗನಾಗಿದ್ದ. ಉತ್ತಮ ಕೆಲಸಗಾರ, ಆತನ ಬಗ್ಗೆ ಒಳ್ಳೆಯ ಅಭಿಪ್ರಾಯ ಇತ್ತು. ಬಿಎಸ್​​ಎನ್​ಎಲ್​​ ಸಲಹಾ ಸಮಿತಿ ನಿರ್ದೇಶಕನಾಗಿದ್ದ. ಗಿರೀಶ್​ ಚಕ್ರಗೆ ಯಾವುದೇ ವಿರೋಧಿಗಳು ಇರಲಿಲ್ಲ. ಗಿರೀಶ್ ಚಕ್ರ​​ ಕೊಲೆ ವಿಚಾರ ತಿಳಿದು ತುಂಬಾ ನೋವಾಗಿದೆ. ಆರೋಪಿಗಳನ್ನು ಬಂಧಿಸಿ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:11 am, Fri, 1 March 24