ಅಮಿತ್ ಶಾಗೆ ಮುಟ್ಟಿದ ಯಾದಗಿರಿ ಪಿಎಸ್ಐ ಪರಶುರಾಮ ನಿಗೂಢ ಸಾವಿನ ಸುದ್ದಿ

|

Updated on: Aug 05, 2024 | 10:46 PM

ಯಾದಗಿರಿ ಪಿಎಸ್​​​ಐ ಆಗಿದ್ದ ಪರಶುರಾಮ ಅನುಮಾಸ್ಪದ ಸಾವಿನ ಸುದ್ದಿ ಇದೀಗ ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಈ ಸಾವಿನ ಪ್ರಕರಣದಲ್ಲಿ ಕಾಂಗ್ರೆಸ್​​ ಶಾಸಕ ಚನ್ನರೆಡ್ಡಿ ಪಾಟೀಲ್ ಹಾಗೂ ಅವರ ಪುತ್ರನ ಹೆಸರು ಕೇಳಿಬಂದಿದೆ. ಇನ್ನು ಈ ನಿಗೂಢ ಸಾವಿನ ಸುದ್ದಿ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಮುಟ್ಟಿದೆ.

ಅಮಿತ್ ಶಾಗೆ ಮುಟ್ಟಿದ ಯಾದಗಿರಿ ಪಿಎಸ್ಐ ಪರಶುರಾಮ ನಿಗೂಢ ಸಾವಿನ ಸುದ್ದಿ
ಅಮಿತ್ ಶಾ, ಪರಶುರಾಮ
Follow us on

ಬೆಂಗಳೂರು.ಯಾದಗಿರಿ, (ಆಗಸ್ಟ್​ 05): ಯಾದಗಿರಿ ಪಿಎಸ್​ಐ ಪರಶುರಾಮ ನಿಗೂಢವಾಗಿ ಸಾವನ್ನಪ್ಪಿರುವ ಪ್ರಕರಣದ ತನಿಗೆಯನ್ನು ಸರ್ಕಾರ ಸಿಐಡಿಗೆ ನೀಡಿದೆ. ಈ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಸಹ ಯಾದಗಿರಿಗೆ ಆಗಮಿಸಿದ್ದು, ಯಾದಗಿರಿ ಪೊಲೀಸರು ಪ್ರಕರಣದ ಫೈಲ್​ ಅನ್ನು ಸಿಐಡಿಗೆ ಹಸ್ತಾಂತರಿಸಿದ್ದಾರೆ. ಇನ್ನು ಪರಶುರಾಮ ಅನುಮಾಸ್ಪ ಪ್ರಕರಣ ಸಂಬಂಧ ಶೋಭಾ ಕರಂದ್ಲಾಜೆ ಅವರು ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆದಿದ್ದಾರೆ. ಈ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪರಶುರಾಮ ಸಾವಿನ ಸುದ್ದಿ ಮುಟ್ಟಿಸಿದ್ದಾರೆ.

ಯಾದಗಿರಿ ಪಿಎಸ್ಐ ಪರಶುರಾಮ​​ ಅನುಮಾನಾಸ್ಪದ ಸಾವು ಪ್ರಕರಣದ ಸಂಬಂಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಅಮಿತ್ ಶಾಗೆ ಪತ್ರ ಬರೆದಿದ್ದು, ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡುವಂತೆ ಒತ್ತಾಯಿಸಿದ್ದಾರೆ. ಇತ್ತ ಯಾದಗಿರಿ ಪೊಲೀಸರು ಪ್ರಕರಣದ ಫೈಲ್​ ಅನ್ನು ಸಿಐಡಿಗೆ ಹಸ್ತಾಂತರಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್​ಪಿ) ಸಂಗೀತಾ ಅವರು ತನಿಖಾಧಿಕಾರಿ ಸಿಐಡಿ ಡಿವೈಎಸ್​ಪಿ ಪುನೀತ್​ ಅವರಿಗೆ ಪರಶುರಾಮ ಸಾವಿನ ಪ್ರಕರಣದ ಮಾಹಿತಿಯನ್ನು ನೀಡಿದ್ದಾರೆ.

ಇದನ್ನೂ ಓದಿ: ಸರ್ಕಾರವೇ ಶಾಸಕ, ಅವರ ಪುತ್ರನ ರಕ್ಷಣೆ ಮಾಡುತ್ತಿದೆ; ಪಿಎಸ್​ಐ ಪರಶುರಾಮ್ ಪತ್ನಿ ಶ್ವೇತಾ ಆರೋಪ

ಈ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಚನ್ನರೆಡ್ಡಿ ಪಾಟೀಲ್ ಹಾಗೂ ಅವರ ಪುತ್ರನ ಹೆಸರು ಕೇಳಿಬಂದಿದೆ. ಯಾದಗಿರಿ ಪಿಎಎಸ್​​​ ಆಗಿ ಮುಂದುವರಿಯಲು 30 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ. ಸದ್ಯ ಈ ಬಗ್ಗೆ ಸಿಐಡಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.  ಆದ್ರೆ, ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್​​ ನಾಯಕರು ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿದ್ದಾರೆ.

ಇನ್ನು ಈ ಆರೋಪವನ್ನು ಕಾಂಗ್ರೆಸ್ ಶಾಸಕ ಅಲ್ಲಗಳೆದಿದ್ದಾರೆ. ಈ ಬಗ್ಗೆ ಟಿವಿ9ಗೆ ಪ್ರತಿಕ್ರಿಯಿಸಿರುವ ಶಾಸಕ ಚೆನ್ನಾರೆಡ್ಡಿ ಪಾಟೀಲ್, ನನ್ನ ವಿರುದ್ಧದ ಆರೋಪ ಸತ್ಯಕ್ಕೆ ದೂರವಾದದ್ದು. ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ. ಸಿಐಡಿ ನೀಡುವ ತನಿಖಾ ವರದಿಗೆ ನಾವೆಲ್ಲಾ ಬದ್ಧರಾಗಿರುತ್ತೇವೆ. ನನ್ನ ಪುತ್ರನ ವಿರುದ್ಧದ ಆರೋಪ ಸಹ ಸತ್ಯಕ್ಕೆ ದೂರವಾಗಿದೆ. ನನ್ನ ವಿರುದ್ಧ ಷಡ್ಯಂತ್ರ ನಡೆದಿರಬಹುದು. ಯಾವುದೇ ಶಾಸಕರಾಗಲಿ ಜಾತಿ ನಿಂದನೆ ಮಾಡಲು ಆಗುತ್ತಾ? ಸಿಐಡಿ ವಿಚಾರಣೆಗೆ ಕರೆದರೆ ತಪ್ಪದೇ ಹಾಜರಾಗುವೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ