ಮಂಗಳೂರಿಗೆ ಕಾಶ್ಮೀರ, ಪಾಕಿಸ್ತಾನದ ಉಗ್ರರು ಬಂದಿದ್ದಾರಾ? ಸಂಸದೆ ಶೋಭಾಗೆ ಈ ಡೌಟು ಯಾಕೆ ಬಂತು ಅಂದ್ರೆ..

ಮಂಗಳೂರಿಗೆ ಕಾಶ್ಮೀರ, ಪಾಕಿಸ್ತಾನದ ಉಗ್ರರು ಬಂದಿದ್ದಾರಾ? ಗೋಡೆ ಮೇಲೆ ಬರೆದಿರುವವರು ಯಾರೆಂದು ಪತ್ತೆ ಹಚ್ಚಬೇಕು ಎಂದು ಮಂಗಳೂರಲ್ಲಿ ಲಷ್ಕರ್​ ಉಗ್ರ ಸಂಘಟನೆ ಪರ ಬರಹ ವಿಚಾರವಾಗಿ ಉಡುಪಿಯಲ್ಲಿ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದ್ದಾರೆ.

ಮಂಗಳೂರಿಗೆ ಕಾಶ್ಮೀರ, ಪಾಕಿಸ್ತಾನದ ಉಗ್ರರು ಬಂದಿದ್ದಾರಾ? ಸಂಸದೆ ಶೋಭಾಗೆ ಈ ಡೌಟು ಯಾಕೆ ಬಂತು ಅಂದ್ರೆ..
ಶೋಭಾ ಕರಂದ್ಲಾಜೆ (ಸಂಗ್ರಹ ಚಿತ್ರ)

Updated on: Nov 27, 2020 | 6:14 PM

ಉಡುಪಿ: ಮಂಗಳೂರಿಗೆ ಕಾಶ್ಮೀರ, ಪಾಕಿಸ್ತಾನದ ಉಗ್ರರು ಬಂದಿದ್ದಾರಾ? ಗೋಡೆ ಮೇಲೆ ಬರೆದಿರುವವರು ಯಾರೆಂದು ಪತ್ತೆ ಹಚ್ಚಬೇಕು ಎಂದು ಮಂಗಳೂರಲ್ಲಿ ಲಷ್ಕರ್​ ಉಗ್ರ ಸಂಘಟನೆ ಪರ ಬರಹ ವಿಚಾರವಾಗಿ ಉಡುಪಿಯಲ್ಲಿ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದ್ದಾರೆ.

ಇವರು ಮಂಗಳೂರಿನವರಾ? ಕೇರಳದವರಾ? ಕಾಶ್ಮೀರಿಗಳಾ? ಅವರು ಯಾರೆಂದು ರಾಜ್ಯ ಸರ್ಕಾರವೇ ಕಂಡುಹಿಡಿಯಬೇಕು. ಗೃಹ ಇಲಾಖೆ ತಕ್ಷಣ ಕಟ್ಟೆಚ್ಚರ ವಹಿಸಬೇಕೆಂದು ಒತ್ತಾಯ ಮಾಡುತ್ತೇನೆ. ಇದರ ಬಗ್ಗೆ ಕೇಂದ್ರ ಗೃಹ ಸಚಿವರು ಗಮನ ಹರಿಸಬೇಕು ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಕಡಲ ನಗರಿಯಲ್ಲಿ ಉಗ್ರ ಸಂಘಟನೆಗಳ ಪರ ಗೋಡೆ ಬರಹ, ಲಷ್ಕರ್ ಉಗ್ರರನ್ನ ಕರೆಸುವುದಾಗಿ ಬೆದರಿಕೆ..

‘ಗೋಹತ್ಯೆ ನಿಷೇಧ ಕಾನೂನು ಕಟ್ಟುನಿಟ್ಟಾಗಿ ಜಾರಿಗೆ ಬರಬೇಕು’
ಗೋವುಗಳನ್ನು ಅಮಾನವೀಯವಾಗಿ ಸಾಗಿಸಲಾಗುತ್ತಿದೆ. ಅಂತಹವರಿಗೆ ಕಠಿಣ ಶಿಕ್ಷೆ ಕೊಡುವಂಥ ಕಾನೂನು ಬರಬೇಕು. ಮುಂದಿನ ವಿಧಾನಸಭೆ ಅಧಿವೇಶವನದಲ್ಲಿ ಕಾಯ್ದೆ ಜಾರಿಯಾಗಲಿ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಗೋಹತ್ಯೆ ನಿಷೇಧ ಕಾನೂನು ನಮ್ಮ ಹಳೆಯ ಕಾನೂನು. 2008 ರಲ್ಲೂ ಈ ಕಾನೂನನ್ನು ನಾವು‌‌ ಮಾಡಿದ್ದೆವು. ಆದರೆ ಅಂದಿನ ರಾಜ್ಯಪಾಲರು ಅದನ್ನು ತಿರಸ್ಕರಿಸಿದ್ದರು. ಗೋಹತ್ಯೆ ನಿಷೇಧ ಕಾನೂನು ಕಟ್ಟುನಿಟ್ಟಾಗಿ ಜಾರಿಗೆ ಬರಬೇಕು ಎಂದು ಹೇಳಿದರು.

‘ಲವ್ ಜಿಹಾದ್ ಹೆಸರಿನಲ್ಲಿ ಹೆಣ್ಣುಮಕ್ಕಳಿಗೆ ಅನ್ಯಾಯವಾಗ್ತಿದೆ’
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿ ಇದರ ಬಗ್ಗೆ ಸಮಗ್ರವಾದ ತನಿಖೆಯಾಗಬೇಕೆಂದು ಆಗ್ರಹಿಸುತ್ತೇನೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ಲವ್ ಜಿಹಾದ್ ಹೆಸರಿನಲ್ಲಿ ಹೆಣ್ಣುಮಕ್ಕಳಿಗೆ ಅನ್ಯಾಯವಾಗ್ತಿದೆ. ಹೆಣ್ಣುಮಕ್ಕಳಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯಬೇಕಿದೆ. ಸರ್ಕಾರ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿ ಮಾಡಲಿದೆ. ರಾಜ್ಯ ಸರ್ಕಾರ ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Published On - 6:09 pm, Fri, 27 November 20