ಕೊರೊನಾದಿಂದ ಸತ್ತರೇ ಕೊಡ್ಬೇಕಂತೆ ಕಂತೆ ಕಂತೆ ಹಣ.. ಇಲ್ಲಿದೆ ಹೆಣದಿಂದ ಹಣ ಮಾಡೋ ಬೆಚ್ಚಿ ಬೀಳಿಸೋ ರಿಪೋರ್ಟ್

|

Updated on: Apr 16, 2021 | 8:42 AM

ಬೆಂಗಳೂರಲ್ಲಿ ಕೊರೊನಾ ಎಷ್ಟು ರಣಭೀಕರ ಅನ್ನೋದು, ಚಿತಾಗಾರದ ಮುಂದೆ ಬಯಲಾಗ್ತಿದೆ. ಸತ್ತರೂ ಮುಕ್ತಿಯಿಲ್ಲ. ಸಂಸ್ಕಾರವಂತೂ ಇಲ್ವೇ ಇಲ್ಲ. ಸಾವಿರಾರು ರೂಪಾಯಿ ದುಡ್ಡು ಕೊಡ್ಲಿಲ್ಲ ಅಂದ್ರೆ, ಶವಸಂಸ್ಕಾರ ಆಗೋದೇ ಇಲ್ಲ. ಅದೂ ಕೂಡಾ ಕಾಟಾಚಾರದ ಅಂತ್ಯಸಂಸ್ಕಾರ. ಚಿತಾಗಾರದ ಮುಂದೆ ಸಾವಿನಲ್ಲೂ ನಡೆಯೋ ಸುಲಿಗೆ ಬಗ್ಗೆ ಇಲ್ಲಿದೆ ರಿಪೋರ್ಟ್

ಕೊರೊನಾದಿಂದ ಸತ್ತರೇ ಕೊಡ್ಬೇಕಂತೆ ಕಂತೆ ಕಂತೆ ಹಣ.. ಇಲ್ಲಿದೆ ಹೆಣದಿಂದ ಹಣ ಮಾಡೋ ಬೆಚ್ಚಿ ಬೀಳಿಸೋ ರಿಪೋರ್ಟ್
ಚಿತಾಗಾರ (ಪ್ರಾತಿನಿಧಿಕ ಚಿತ್ರ)
Follow us on

ಬೆಂಗಳೂರು: ಹೆಮ್ಮಾರಿ ಕೊರೊನಾ ಒಂದು ಸಲ ವಕ್ಕರಿಸಿದ್ರೆ ಬದುಕೇ ದುಸ್ತರ. ಮನುಷ್ಯನ ದೇಹವನ್ನ ಹಿಂಡಿ ಹಿಪ್ಪೆ ಮಾಡುವ ಕಿಲ್ಲರ್, ವಕ್ಕರಿಸಿಕೊಳ್ತು ಅಂದ್ರೆ ಆಸ್ಪತ್ರೆಯಲ್ಲಿ ಬೆಡ್ ಹಿಡಿದ್ರೂ ಜೀವಕ್ಕೆ ಗ್ಯಾರಂಟಿ ಇಲ್ಲ. ಸತ್ತರೂ ಸಮಾಧಾನವಿರಲ್ಲ. ಯಾಕೆಂದ್ರೆ, ಆಸ್ಪತ್ರೆಯಿಂದ ಹಿಡಿದು, ಚಿತಾಗಾರದಲ್ಲಿ ಭಸ್ಮ ಆಗೋವರೆಗೂ ವಸೂಲಿ ವಸೂಲಿ ವಸೂಲಿ.

ಕೊರೊನಾದಿಂದ ಮೃತಪಟ್ಟವರ ಸಂಬಂಧಿಕರ ಈ ಭಯಾನಕ ಮಾತುಗಳನ್ನು ಕೇಳಿದ್ರೆ ನಡುಕು ಹುಟ್ಟುತ್ತೆ. ಯಾಕಂದ್ರೆ ಕೊರೊನಾ ಅಂತ ಆಸ್ಪತ್ರೆ ಸೇರುವಾಗ್ಲೇ, ಸ್ಮಶಾನದವರೆಗೂ ಪ್ಯಾಕೇಜ್‌ ರೆಡಿ ಮಾಡ್ತಾರಂತೆ. ಕೊರೊನಾ ಹೆಸರಲ್ಲಿ ರಕ್ತ ಹೀರ್ತಾರಂತೆ. ಜನರ ಜೀವ ಉಳಿಸ್ತಿದ್ದಾರೋ.. ಜೀವ ತೆಗಿತ್ತಿದ್ದಾರೋ…ಗೊತ್ತಿಲ್ಲ. ಆದ್ರೆ, ಹೆಜ್ಜೆ ಹೆಜ್ಜೆಗೂ ಹಣ ವಸೂಲಿ ಮಾಡ್ತಾರಂತೆ. ಹೆಣದ ಮುಂದೆಯೇ ಹಣ ನುಂಗ್ತಾರೆ ಎಂದು ಕೊರೊನಾ ಪೀಡಿತ ವ್ಯಕ್ತಿಯ ಕುಟುಂಬಸ್ಥರೊಬ್ಬರು ಹೇಳಿಕೊಂಡು ಕಣ್ಣೀರಿಟ್ಟಿದ್ದಾರೆ.

ಇನ್ನು ಹೋದ್ರೆ ಹೋಗ್ಲಿ ಅಂತಾ ಹಣ ಕೊಟ್ರು, ನೆಟ್ಟಗೆ ಶವ ಸಂಸ್ಕಾರ ಮಾಡ್ತಾರಾ? ಇಲ್ವೇ ಇಲ್ಲ. ಕಾಟಾಚಾರಕ್ಕೆ ಹಾದಿಬೀದಿಯಲ್ಲೇ ಹಾರ ಹಾಕಿ ಮುಗಿಸಿ ಬಿಡ್ತಾರೆ. ಚಿತಾಗಾರದಲ್ಲಿ ಘನಘೋರ ಮಾಫಿಯಾ ನಡೀತಿದೆ.

ಸಾವಿನ ಸಂಖ್ಯೆ ಹೆಚ್ಚಾಗ್ತಿದ್ದಂತೆ ಚಿತಾಗಾರ ಮಾಫಿಯಾ ಮತ್ತೆ ಌಕ್ಟೀವ್
ಬೆಂಗಳೂರಿನ ಯಲಹಂಕ ಬಳಿಯ ಮೇಡಿ ಅಗ್ರಹಾರ ಚಿತಾಗಾರದ ಮುಂದೆ ಮಧ್ಯಾಹ್ನವಾದ್ರೆ ಸಾಕು, ಹತ್ತಾರು ಆ್ಯಂಬುಲೆನ್ಸ್‌ಗಳು ಹತ್ತಾರು ಶವ ಹೊತ್ತು, ಶವ ಸಂಸ್ಕಾರಕ್ಕೆ ಕಿಲೋಮೀಟರ್‌ಗಟ್ಟಲೇ ಕ್ಯೂ ನಿಲ್ಲುತ್ವೆ. ಹೊರಗೆ ಗಂಟೆಗಟ್ಟಲೆ ಕಾಯೋ ಮೃತರ ಸಂಬಂಧಿಕರಲ್ಲಿ ಕಣ್ಣಲ್ಲಿ ರಕ್ತ ಬಂದ್ರೂ ಚಿತಾಗಾರದಲ್ಲಿ ದಂಧೆ ಮಾತ್ರ ನಿಲ್ಲೋದಿಲ್ಲ.

ಇಷ್ಟೆಕ್ಕೆಲ್ಲ ಕಾರಣ ಓಬಿರಾಯನ ಕಾಲದ ಚಿತಾಗಾರಗಳು ಬೆಂಗಳೂರಲ್ಲಿ ಮೂರೇ ಮೂರು ಚಿತಾಗಾರವನ್ನ ಕೊರೊನಾದಿಂದ ಸತ್ತವರ ಅಂತ್ಯಸಂಸ್ಕಾರಕ್ಕೆ ಮೀಸಲಿಟ್ಟಿದೆ. ಅಲ್ಲದೇ ಒಂದು ಡೆಡ್‌ಬಾಡಿ ಸುಡೋವರೆಗೂ ಎರಡು ಎರಡೂವರೆ ಗಂಟೆ ಕಾಯ್ಬೇಕು. ಅಷ್ಟೊತ್ತಿಗಾಗ್ಲೇ ಸಂಬಂಧಿಕರಿಂದ ಸಾವಿರಾರು ಹಣ ವಸೂಲಿ ಮಾಡಿರ್ತಾರೆ.

ಆ್ಯಂಬುಲೆನ್ಸ್‌ನಲ್ಲೇ ಮೃತದೇಹಕ್ಕೆ ಪೂಜೆ.. ಶವಸಂಸ್ಕಾರ
ಬೆಂಗಳೂರಿನ ಭಯಾನಕ ಸ್ಥಿತಿ ಹೇಗಿದೆ ಅಂದ್ರೆ ಊಹಿಸೋದಕ್ಕೂ ಅಸಾಧ್ಯ. ಆಸ್ಪತ್ರೆಗೆ ಹೋದವರು ವಾಪಸ್‌ ಬರಲ್ಲ. ಸತ್ತವರ ಮುಖ ನೋಡದಕ್ಕೂ ಸಿಗಲ್ಲ. ಮೂವತ್ತು ಸಾವಿರ ಕೊಟ್ಟು ಮಾರುದ್ದ ದೂರದಲ್ಲಿ ನಿಲ್ಬೇಕು ಕೇಳಿದ್ರೆ, ಕೊರೊನಾ ಅಂತ ಭಯ ಹುಟ್ಟಿಸ್ತಾರೆ. ಚಿತಾಗಾರದಲ್ಲಿ ಅಂತ್ಯಸಂಸ್ಕಾರಕ್ಕೆ ಜಾಗ ಮೀಸಲಿದ್ರೂ, ಎಲ್ಲವನ್ನ ಆ್ಯಂಬುಲೆನ್ಸ್‌ನಲ್ಲೇ ಮಾಡ್ತಾರೆ. ಅಲ್ಲೇ ಪೂಜೆ ಅಲ್ಲೇ ಅಂತಿಮ ವಿಧಿವಿಧಾನ ಮಾಡಿ ಮುಗಿಸ್ತಾರೆ.

ಬಾಡಿ ಶಿಫ್ಟಿಂಗ್‌ಗೇ ಮೂವತ್ತು, ಮೂವತೈದು ಸಾವಿರ. ಪೂಜೆಗೆ 10 ಸಾವಿರ, ಪಿಪಿಇ ಕಿಟ್‌ಗೆ 3 ಸಾವಿರ. ಬರ್ನಿಂಗ್‌ಗೆ ನಾಲ್ಕು ಸಾವಿರ ಅಂತೆ. ಈ ದಂಧೆಯನ್ನೇ ಕೇಳಿದ್ರೆ ಪ್ರಾಣ ಹೋಗುತ್ತೆ. ಅಂತ್ಯಸಂಸ್ಕಾರ ಅಂದ್ರೆ ಅದಕ್ಕೊಂದು ಸಂಸ್ಕಾರ ಇದೆ. ಆದ್ರೆ, ಇಲ್ಲಿ ಅದ್ಯಾವುದು ನಡೀತಿಲ್ಲ. ಅಂತ್ಯಸಂಸ್ಕಾರದ ಹೆಸರಲ್ಲೇ ಹಣ ಪೀಕಿ ಎರಡು ಹೂವಿನ ಹಾರ ಹಾಕಿ, ದುಡ್ಡು ನುಂಗ್ತಿದ್ದಾರೆ. ಇಷ್ಟು ದುಡ್ಡನ್ನ ನೀವು ಕೊಡಲ್ಲ ಅನ್ನಂಗಿಲ್ಲ. ಯಾಕೆಂದ್ರೆ, ನೀವು ಆಸ್ಪತ್ರೆ ಸೇರುವಾಗ್ಲೇ ಎಲ್ಲವೂ ಪ್ಯಾಕೇಜ್. ಬೆಡ್‌ಗೂ ಪ್ಯಾಕೇಜ್‌, ಚಿತಾಗಾರಕ್ಕೂ ಪ್ಯಾಕೇಜ್.

‘ಯಾರದ್ದೋ ಚಿತಾಭಸ್ಮವನ್ನ ಯಾರಿಗೋ ಕೊಡ್ತಾರೆ’
ದುಡ್ಡು ಪೀಕಿದ್ರು. ಹಣ ನುಂಗಿದ್ರು. ಪ್ಯಾಕೇಜ್ ತೆಗೊಂಡ್ರು. ಆದ್ರೆ, ನೆಟ್ಟಗೆ ಶವಸಂಸ್ಕಾರ ಮಾಡ್ತಾರಾ? ಖಂಡಿತ ಇಲ್ಲ. ಒಂದರ ಹಿಂದೆ ಡೆಡ್‌ಬಾಡಿ ಸುಟ್ಟು, ಭಸ್ಮ ಕೇಳಿದ್ರೆ ನಾಳೆ ಬನ್ನಿ ಅಂತಾರಂತೆ. ಕವರ್‌ನಲ್ಲಿ ಭಸ್ಮ ತುಂಬಿಟ್ಟು, ಯಾವುದೋ ಒಂದು ಭಸ್ಮವನ್ನ ಕೊಡ್ತಾರಂತೆ. ಅದು ನಮ್ಮವರದ್ದೇ ಭಸ್ಮ ಅನ್ನೋದಕ್ಕೆ ಯಾವ ಗ್ಯಾರಂಟಿನೂ ಇಲ್ಲ ಅಂತಾ ಮೃತರ ಸಂಬಂಧಿಕರು ಆರೋಪಿಸ್ತಾರೆ.

ಟಿವಿ9 ವರದಿ ಬಳಿಕ ಹಣ ವಸೂಲಿಗೆ ಬ್ರೇಕ್
ಖಾಸಗಿ ಆ್ಯಂಬುಲೆನ್ಸ್ ಸುಲಿಗೆಯ ಬಗ್ಗೆ ನಿರಂತರವಾಗಿ ಟಿವಿ9 ವರದಿ ಮಾಡಿ ಬಳಿಕ ಬಿಬಿಎಂಪಿಗೆ ಜ್ಞಾನೋದಯವಾಗಿದೆ. 30 ಸಾವಿರ ಹಣ ವಸೂಲಿಗೆ ಬ್ರೇಕ್ ಹಾಕಿ ಆದೇಶ ಹೊರಡಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಡಾ.ಕೆ ಸುಧಾಕರ್, ಖಾಸಗಿ ಆ್ಯಂಬುಲೆನ್ಸ್​ವರು ಹಣ ವಸೂಲಿ ಮಾಡಿದ್ರೆ ಕ್ರಮ ಕೈಗೊಳ್ತೇವೆ ಅಂತಾ ವಾರ್ನ್ ಮಾಡಿದ್ದಾರೆ.

ಬೆಂಗಳೂರಲ್ಲಿ ಕೊರೊನಾ ಸಾವಿನ ಸಂಖ್ಯೆ ಹೆಚ್ಚಾಗ್ತಿದ್ದಂತೆ ವಸೂಲಿ ಮಾಫಿಯನೂ ಫುಲ್ ಆ್ಯಕ್ಟಿವ್ ಆಗಿದೆ. ಕೊರೊನಾ ಎದುರಿಸಲು ಎದೆಕೊಟ್ಟು ನಿಂತ್ರೂ ನೆಮ್ಮದಿ ಇಲ್ಲ. ಸತ್ತಮೇಲೂ ಮುಕ್ತಿಯಿಲ್ಲ. ಬೆಂಗಳೂರಿನ ಸ್ಥಿತಿ ಇನ್ಯಾವ ಹಂತಕ್ಕೆ ತಲುಪುತ್ತೋ ಗೊತ್ತಿಲ್ಲ.

ಇದನ್ನೂ ಓದಿ: ಕೊವಿಡ್​ನಿಂದ ಮೃತಪಟ್ಟವರನ್ನು ಚಿತಾಗಾರಕ್ಕೆ ಸಾಗಿಸಲು ಯಾವುದೇ ಶುಲ್ಕ ಇಲ್ಲ: ಬಿಬಿಎಂಪಿ ಸ್ಪಷ್ಟನೆ