ರಾಮನಗರ ಕ್ವಾರಂಟೈನ್ ಕೇಂದ್ರದಲ್ಲಿ ಗರ್ಭಿಣಿಯರ ಗೋಳಾಟ.. ಊಟದಲ್ಲಿ ಹುಳು, ಮಾತ್ರೆ ತಿಂದ್ರೆ ಹೊಟ್ಟೆ ನೋವು, ಸ್ವಚ್ಛತೆ ಇಲ್ಲವೇ ಇಲ್ಲ
ರಾಮನಗರದ ಸುಗ್ನಳ್ಳಿ ಆಯುಷ್ ತರಬೇತಿ ಕೇಂದ್ರದಲ್ಲಿ ಈ ತೆರನಾದ ಸಮಸ್ಯೆಗಳು ತಲೆದೋರಿದ್ದು, ಮನೆಯಲ್ಲಿಯೇ ಕ್ವಾರಂಟೈನ್ ಆಗುತ್ತೇವೆಂದು ಮನವಿ ಮಾಡಿದರೂ ಬಿಡದೇ ಕ್ವಾರಂಟೈನ್ ಕೇಂದ್ರಗಳಿಗೆ ಕರೆತಂದು ನಿರ್ಲಕ್ಷ್ಯ ತೋರುತ್ತಿರುವುದಕ್ಕೆ ಗರ್ಭಿಣಿಯರು ಅಳಲು ತೋಡಿಕೊಂಡಿದ್ದಾರೆ.

ರಾಮನಗರ: ರಾಜ್ಯದಲ್ಲಿ ಕೊರೊನಾ ವೈರಾಣು ಎರಡನೇ ಅಲೆ ತೀವ್ರತೆ ಹೆಚ್ಚುತ್ತಿದ್ದು ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ ಕೆಲ ದಿನಗಳಿಂದ ಹೆಚ್ಚು ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗುತ್ತಿದ್ದು, ಕೆಲವೆಡೆ ಸೋಂಕಿತರು ಸರಿಯಾದ ಸೌಲಭ್ಯ ಸಿಗದೇ ಪರದಾಡುತ್ತಿದ್ದಾರೆ. ರಾಮನಗರದ ಕ್ವಾರಂಟೈನ್ ಕೇಂದ್ರದಲ್ಲಿ ಸಮಯಕ್ಕೆ ಸರಿಯಾಗಿ ಊಟ ಸಿಗದೆ ಗರ್ಭಿಣಿಯರು ಪರದಾಟ ನಡೆಸುತ್ತಿರುವುದು ಬೆಳಕಿಗೆ ಬಂದಿದ್ದು, ಕ್ವಾರಂಟೈನ್ ಕೇಂದ್ರಗಳು ಅವ್ಯವಸ್ಥೆಯ ಆಗರವಾಗಿರುವುದು ಗೊತ್ತಾಗಿದೆ.
ರಾಮನಗರದ ಸುಗ್ನಳ್ಳಿ ಆಯುಷ್ ತರಬೇತಿ ಕೇಂದ್ರದಲ್ಲಿ ಈ ತೆರನಾದ ಸಮಸ್ಯೆಗಳು ತಲೆದೋರಿದ್ದು, ಮನೆಯಲ್ಲಿಯೇ ಕ್ವಾರಂಟೈನ್ ಆಗುತ್ತೇವೆಂದು ಮನವಿ ಮಾಡಿದರೂ ಬಿಡದೇ ಕ್ವಾರಂಟೈನ್ ಕೇಂದ್ರಗಳಿಗೆ ಕರೆತಂದು ನಿರ್ಲಕ್ಷ್ಯ ತೋರುತ್ತಿರುವುದಕ್ಕೆ ಗರ್ಭಿಣಿಯರು ಅಳಲು ತೋಡಿಕೊಂಡಿದ್ದಾರೆ. ಸಮಯಕ್ಕೆ ಸರಿಯಾಗಿ ಊಟವೂ ಇಲ್ಲ, ಶೌಚಾಲಯಗಳೂ ಸರಿಯಾಗಿಲ್ಲವೆಂದು ಗರ್ಭಿಣಿಯರು ಸಂಕಷ್ಟ ವ್ಯಕ್ತಪಡಿಸಿದ್ದಾರೆ.
ಕ್ವಾರಂಟೈನ್ ಕೇಂದ್ರದಲ್ಲಿರುವ ಸುಮಾರು 30 ಸೋಂಕಿತರು ಸಹ ಈ ಸಮಸ್ಯೆ ಬಗ್ಗೆ ಆಕ್ರೋಶ ಹೊರಹಾಕಿದ್ದು, ನಮಗೆ ಕೊರೊನಾ ಲಕ್ಷಣವಿಲ್ಲದಿದ್ದರೂ ಕ್ವಾರೆಂಟೈನ್ ಮಾಡಿದ್ದಾರೆಂದು ದೂರಿದ್ದಾರೆ. ಅಲ್ಲದೇ, ಯುಗಾದಿ ಹಬ್ಬ ಆಚರಣೆ ಮಾಡೋಕೆ ಅವಕಾಶ ಕೊಟ್ಟಿಲ್ಲ. ನಿನ್ನೆ ಊಟದಲ್ಲಿ ಹುಳು ಸಿಕ್ಕಿದೆ. ವೈದ್ಯರು ಕೊಟ್ಟಿರೋ ಮಾತ್ರೆ ಸೇವಿಸಿದ್ರೆ ಹೊಟ್ಟೆನೋವು, ತಲೆನೋವು ಬರ್ತಿದೆ. ಕಳೆದ 5 ದಿನಗಳಿಂದಲೂ ಆಯುಷ್ ತರಬೇತಿ ಕೇಂದ್ರಲ್ಲಿ ಕ್ವಾರೆಂಟೈನ್ ಆಗಿದ್ದೇವೆ. ನಮ್ಮ ಗೋಳು ಕೇಳೋರಿಲ್ಲ ಅಂತ ಒದ್ದಾಡುತ್ತಿದ್ದಾರೆ.
ಇದನ್ನೂ ಓದಿ: ಹೋಂ ಕ್ವಾರಂಟೈನ್ನಲ್ಲಿದ್ದ ಅಕ್ಷಯ್ ಕುಮಾರ್ ಏಕಾಏಕಿ ಆಸ್ಪತ್ರೆಗೆ ದಾಖಲು! ಅವರ ಆರೋಗ್ಯ ಹೇಗಿದೆ?
ಕಲಬುರಗಿಯಲ್ಲಿ ರೆಮ್‌ಡಿಸಿವಿರ್ ಇಂಜೆಕ್ಷನ್ ಸಿಗ್ತಾಯಿಲ್ಲಾ.. ಸೋಂಕಿತರ ಅಳಲು; ಆದ್ರೆ ಇದು ಸತ್ಯಕ್ಕೆ ದೂರ ಎಂದ ಸಚಿವರು