ಕಲಬುರಗಿಯಲ್ಲಿ ರೆಮ್‌ಡಿಸಿವಿರ್ ಇಂಜೆಕ್ಷನ್ ಸಿಗ್ತಾಯಿಲ್ಲಾ.. ಸೋಂಕಿತರ ಅಳಲು; ಆದ್ರೆ ಇದು ಸತ್ಯಕ್ಕೆ ದೂರ ಎಂದ ಸಚಿವರು
ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ಪಾಸಿಟಿವ್ ಹಿನ್ನೆಲೆಯಲ್ಲಿ ಕುಟುಂಬಸ್ಥರು ಸೋಂಕಿತನನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ವೈದ್ಯರು ರೆಮ್‌ಡಿಸಿವಿರ್ ಲಸಿಕೆ ತರುವಂತೆ ಸೂಚಿಸಿದ್ದರು. ಹೀಗಾಗಿ ಕಲಬುರಗಿಯ ಎಲ್ಲ ಮೆಡಿಕಲ್ ಶಾಪ್‌ಗಳಲ್ಲಿ ಲಸಿಕೆಗಾಗಿ ಹುಡುಕಾಡಿದ್ದಾರೆ. ಆದ್ರೆ ಯಾವ ಮೆಡಿಕಲ್ ಶಾಪ್‌ನಲ್ಲೂ ಲಸಿಕೆ ಸಿಕಿಲ್ಲ.
ಕಲಬುರಗಿ: ದಿನ ದಿನಕ್ಕೂ ಕೊರೊನಾ ವೈರಸ್ ಸ್ಫೋಟ ಹೆಚ್ಚುತ್ತಿದ್ದು ಕೊರೊನಾ ನಡೆಸ್ತಿರೋ ದಾಳಿ ಭಯಾನಕವಾಗಿದೆ. ಇದರ ಮಧ್ಯೆ ಕೊರೊನಾ ಲಸಿಕೆಗಳು ಸಿಗುತ್ತಿಲ್ಲ. ಲಸಿಕೆ ಪ್ರಮಾಣ ಕಡಿಮೆಯಾಗಿದೆ. ಸೋಂಕಿತರು ಪರದಾಡುತ್ತಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ರೆಮ್‌ಡಿಸಿವಿರ್ ಲಸಿಕೆಯ ಕೊರತೆ ಇದ್ದು ಸೋಂಕಿತನಿಗೆ ಲಸಿಕೆ ಸಿಗದೆ ಕುಟುಂಬಸ್ಥರು ಪರದಾಡುತ್ತಿರುವಂತಹ ಸನ್ನಿವೇಶ ನಿರ್ಮಾಣವಾಗಿದೆ.
ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ಪಾಸಿಟಿವ್ ಹಿನ್ನೆಲೆಯಲ್ಲಿ ಕುಟುಂಬಸ್ಥರು ಸೋಂಕಿತನನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ವೈದ್ಯರು ರೆಮ್‌ಡಿಸಿವಿರ್ ಲಸಿಕೆ ತರುವಂತೆ ಸೂಚಿಸಿದ್ದರು. ಹೀಗಾಗಿ ಕಲಬುರಗಿಯ ಎಲ್ಲ ಮೆಡಿಕಲ್ ಶಾಪ್‌ಗಳಲ್ಲಿ ಲಸಿಕೆಗಾಗಿ ಹುಡುಕಾಡಿದ್ದಾರೆ. ಆದ್ರೆ ಯಾವ ಮೆಡಿಕಲ್ ಶಾಪ್‌ನಲ್ಲೂ ಲಸಿಕೆ ಸಿಕಿಲ್ಲ. ಕಳೆದ ಐದು ದಿನಗಳಿಂದ ರೆಮ್‌ಡಿಸಿವಿರ್ ಲಸಿಕೆಗಾಗಿ ಸೋಂಕಿತ ವ್ಯಕ್ತಿಯ ಕುಟುಂಬಸ್ಥರು ಬೀದಿ ಬೀದಿ ಅಲೆಯುತ್ತ ಚಿಂತೆಯಲ್ಲಿ ಮುಳುಗಿದ್ದಾರೆ.
ಜಿಲ್ಲೆಯ ಖಾಸಗಿ ಆಸ್ಪತ್ರೆ, ಮೆಡಿಕಲ್ನಲ್ಲಿ ರೆಮ್‌ಡಿಸಿವಿರ್ ಖಾಲಿಯಾಗಿದೆಯಂತೆ. ನಮ್ಮ ಕುಟುಂಬದಲ್ಲಿ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿದೆ. ಖಾಸಗಿ ಆಸ್ಪತ್ರೆಯಲ್ಲಿ ಅವರನ್ನು ದಾಖಲಿಸಿದ್ದೇವೆ. ವೈದ್ಯರು ರೆಮ್‌ಡಿಸಿವಿರ್ ಚುಚ್ಚು ಮದ್ದು ಬರೆದಿದ್ದಾರೆ. ಆದ್ರೆ ಜಿಲ್ಲೆಯ ಯಾವುದೇ ಮೆಡಿಕಲ್ಸ್ನಲ್ಲಿ ಕೂಡಾ ಇಂಜೆಕ್ಷನ್ ಸಿಗ್ತಾಯಿಲ್ಲಾ. ಹೆಚ್ಚಿನ ಹಣ ಕೊಡೋದಾಗಿ ಹೇಳಿದರೂ ಸಹ ಇಂಜೆಕ್ಷನ್ ಸಿಗ್ತಾಯಿಲ್ಲಾ. ರೆಮ್‌ಡಿಸಿವಿರ್ ನೀಡಿದ್ರೆ ಸೋಂಕಿತ ಬೇಗನೆ ಗುಣಮುಖರಾಗ್ತಾರೆ ಅಂತ ವೈದ್ಯರು ಹೇಳ್ತಾರೆ. ಆದ್ರೆ ರೆಮ್‌ಡಿಸಿವಿರ್ ಇಂಜೆಕ್ಷನ್ ಸಿಗ್ತಾಯಿಲ್ಲಾ. ಸರ್ಕಾರ ಕೂಡಲೇ ಇಂಜೆಕ್ಷನ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಸೋಂಕಿತನ ಕುಟುಂಬ ಸದಸ್ಯರೊಬ್ಬರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಕೊರೊನಾದ ಎರಡನೇ ಅಲೆ ಅಬ್ಬರ ಜೋರಾಗಿದೆ. ಪ್ರತಿನಿತ್ಯ 250-300ಜನರಿಗೆ ಸೋಂಕು ತಗುಲುತ್ತಿದೆ. ಜೊತೆಗೆ ಪ್ರತಿ ದಿನ ಇಬ್ಬರಿಂದ ನಾಲ್ವರು ಸೋಂಕಿಗೆ ಬಲಿಯಾಗುತ್ತಿದ್ದಾರೆ. ಇದೇ ಸಮಯದಲ್ಲಿ ಸೋಂಕಿತರು ಗುಣಮುಖರಾಗಲು ನೀಡುವ ರೆಮ್‌ಡಿಸಿವಿರ್ ಚುಚ್ಚುಮದ್ದಿನ ಕೊರತೆ ಉಂಟಾಗಿದೆ. ಚುಚ್ಚುಮದ್ದಿನ ಸ್ಟಾಕ್ ಬಾರದೇ ಇರುವುದರಿಂದ ಎಲ್ಲಿಯೂ ಒಂದು ವಾರದಿಂದ ರೆಮ್‌ಡಿಸಿವಿರ್ ಸಿಗ್ತಾಯಿಲ್ಲಾ.
ಹೀಗಾಗಿ ಕೊರೊನಾ ಸೋಂಕಿತರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಒಬ್ಬ ಸೋಂಕಿತನಿಗೆ ಆರರಿಂದ ಒಂಬತ್ತು ಡೋಸ್ ನೀಡಬೇಕಾಗುತ್ತದೆ. ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾದವರಿಗೆ ಸರ್ಕಾರದಿಂದ ಉಚಿತವಾಗಿ ರೆಮ್‌ಡಿಸಿವಿರ್ ಚುಚ್ಚುಮದ್ದು ನೀಡಲಾಗುತ್ತದೆ. ಆದ್ರೆ ಜಿಲ್ಲೆಯಲ್ಲಿ ಅನೇಕ ಸೋಂಕಿತರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜಿಮ್ಸ್ ಆಸ್ಪತ್ರೆಯಲ್ಲಿ ಕೂಡಾ ಇನ್ನು ಎರಡು ದಿನಕ್ಕೆ ಮಾತ್ರ ರೆಮ್‌ಡಿಸಿವಿರ್ ಸ್ಟಾಕ್ ಇದೆ. ಎರಡು ದಿನವಾದ್ರೆ ಅಲ್ಲಿಯೂ ಕೂಡಾ ಖಾಲಿಯಾಗಲಿದೆ.
ರಾಜ್ಯದಲ್ಲಿ ರೆಮ್‌ಡಿಸಿವಿರ್ ಲಸಿಕೆ ಕೊರತೆ ಇಲ್ಲ ರಾಜ್ಯದಲ್ಲಿ 3 ಸಂಸ್ಥೆಗಳು ರೆಮ್‌ಡಿಸಿವಿರ್ ತಯಾರಿಸುತ್ತವೆ. ಹೀಗಾಗಿ ರಾಜ್ಯದಲ್ಲಿ ರೆಮ್‌ಡಿಸಿವಿರ್ ಲಸಿಕೆ ಕೊರತೆ ಇಲ್ಲ ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಸರ್ಕಾರದಿಂದ ಕಳಿಸುವ ರೋಗಿಗಳಿಗೆ ಉಚಿತವಾಗಿ ಲಸಿಕೆ ನೀಡಲಾಗುತ್ತೆ. ಖಾಸಗಿ ಆಸ್ಪತ್ರೆಗೆ ಸೇರುವ ರೋಗಿಗಳಿಗೆ ಲಸಿಕೆ ಸಿಗದಿದ್ದರೆ ರೋಗಿಯ ಮಾಹಿತಿ ನೀಡಿದರೆ ಲಸಿಕೆ ಕಳಿಸಲಾಗುವುದು ಎಂದು ತಿಳಿಸಿದ್ರು.
ರೆಮ್‌ಡಿಸಿವಿರ್ ಕೊರತೆ ಇಲ್ಲ, ಇದು ಸತ್ಯಕ್ಕೆ ದೂರವಾದದ್ದು ಕೊರೊನಾ ಸೋಂಕಿತರ ನರಳಾಟ ವಿಡಿಯೋ ವೈರಲ್ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಸಚಿವ ಬಸವರಾಜ ಬೊಮ್ಮಾಯಿ “ಈ ಬಗ್ಗೆ ನನ್ನ ಗಮನಕ್ಕೆ ಬಂದಿದೆ ಪರಿಶೀಲಿಸಿ ಕ್ರಮಕೈಗೊಳ್ತೇವೆ. 3 ವಾರಗಳಿಂದ ಕೊರೊನಾ ಹೆಚ್ಚಾದ ಹಿನ್ನೆಲೆ ಸ್ವಲ್ಪ ಸಮಸ್ಯೆಯಾಗುತ್ತಿದೆ. ಆದ್ರೆ ಮೊದಲಿಗಿಂತ ಈಗ ಮೂಲಸೌಕರ್ಯ ಉತ್ತಮವಾಗಿದೆ. ರೆಮ್‌ಡಿಸಿವಿರ್ ಕೊರತೆ ಇಲ್ಲ, ಇದು ಸತ್ಯಕ್ಕೆ ದೂರವಾದದ್ದು. ಕಳೆದ ಬಾರಿ ಕೃತಕ ಅಭಾವ ಸೃಷ್ಟಿಸುವ ಘಟನೆ ನಡೆದಿತ್ತು. ಆದರೆ ಈ ಬಾರಿ ಲಸಿಕೆ ದಾಸ್ತಾನು, ಪೂರೈಕೆ ಮೇಲೆ ನಿಗಾ ಇಡಲಾಗಿದೆ. ತಪ್ಪಿತಸ್ಥರ ವಿರುದ್ಧ ಕಾನೂನಿನಡಿ ಕ್ರಮಕೈಗೊಳ್ಳಲಾಗುವುದು. ನಾಳೆ ಗೃಹ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಯುತ್ತೆ. ಗೃಹ ಇಲಾಖೆಯ ಸಿಬ್ಬಂದಿಯ ಸುರಕ್ಷತೆ ಬಗ್ಗೆ ಚರ್ಚೆಯಾಗುತ್ತೆ ಎಂದ ಬೀದರ್ ಜಿಲ್ಲೆ ಹುಮ್ನಾಬಾದ್‌ನಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇದನ್ನೂ ಓದಿ:ರೆಮ್ಡೆಸಿವಿರ್ ಚುಚ್ಚುಮದ್ದಿನ ಉತ್ಪಾದನೆ ಹೆಚ್ಚಳ; ಬೆಲೆ ಇಳಿಕೆಗೆ ಅನುಮತಿ ನೀಡಿದ ಕೇಂದ್ರ ಸರ್ಕಾರ
Published On - 10:14 am, Thu, 15 April 21