Bengaluru Rain: ನಗರದಲ್ಲಿ ಹಲವೆಡೆ ರಾತ್ರಿಯಿಡೀ ಧಾರಾಕಾರ ಮಳೆ.. ಇಂದೂ ಮಳೆ ಬೀಳುವ ಸಾಧ್ಯತೆ: ಹವಾಮಾನ ಇಲಾಖೆ ಸೂಚನೆ

Bangalore Rain Update: ನಿನ್ನೆ ಬುಧವಾರ ಬೆಂಗಳೂರಿನಲ್ಲಿ ಧಾರಾಕಾರ ಮಳೆಯಿಂದಾಗಿ ನಗರ ತಂಪಾಗಿದೆ. ಬಿಸಿಲಿಗೆ ಬೆಂದಿದ್ದ ನಗರದ ಜನರಿಗೆ ತಂಪಾದ ವಾತಾವರಣ ಕಂಡು ಮನಸ್ಸಿಗೆ ಹಿತವೆನಿಸುತ್ತಿದೆ.

Bengaluru Rain: ನಗರದಲ್ಲಿ ಹಲವೆಡೆ ರಾತ್ರಿಯಿಡೀ ಧಾರಾಕಾರ ಮಳೆ.. ಇಂದೂ ಮಳೆ ಬೀಳುವ ಸಾಧ್ಯತೆ: ಹವಾಮಾನ ಇಲಾಖೆ ಸೂಚನೆ
ಮಳೆ (ಸಾಂಕೇತಿಕ ಚಿತ್ರ)
Follow us
shruti hegde
|

Updated on: Apr 15, 2021 | 11:11 AM

ಬೆಂಗಳೂರು: ನಗರದಲ್ಲಿ ಹಲವೆಡೆ ಬುಧವಾರ ರಾತ್ರಿಯಿಡೀ ಧಾರಾಕಾರ ಮಳೆಯಾಗಿದೆ. ಹಲವು ದಿನಗಳಿಂದ ರಣ ಬಿಸಿಲು ಕಂಡಿದ್ದ ಜನರಿಗೆ ವರುಣನ ಆಗಮನ ಖುಷಿ ನೀಡಿದೆ. ಬೆಂಗಳೂರು ದಕ್ಷಿಣ ಭಾಗದಲ್ಲಿ ಹೆಚ್ಚು ಮಳೆ ದಾಖಲಾಗಿದ್ದು, ಇಂದು (ಏಪ್ರಿಲ್ 15) ಗುರುವಾರ ಬೆಳಿಗ್ಗೆಯಿಂದ ನಗರದಲ್ಲಿ ತಂಪಾದ ವಾತಾವರಣವಿದೆ. ನಗರದ ಸುದ್ದುಗುಂಟೆ ಪಾಳ್ಯ, ಸಿದ್ದಾಪುರ, ಜಯನಗರದಲ್ಲಿ 45 ಮಿಲಿಮೀಟರ್​ ಮಳೆಯಾಗಿದೆ.

ಕೋರಮಂಗಲದಲ್ಲಿ ‌24 ಮಿಲಿಮೀಟರ್​ ಮಳೆಯಾಗಿದೆ. ಹೊಯ್ಸಳ ‌ನಗರ 18 ಮಿ.ಮಿ, ಗುಟ್ಟಹಳ್ಳಿ 15 ಮಿ.ಮೀ, ಮನೋರಾಯನ ಪಾಳ್ಯದಲ್ಲಿ 15 ಮಿಲಿಮೀಟರ್ ಮಳೆಯಾಗಿದೆ. ಹೆಚ್​ಆರ್​ಎಸ್​ ಲೇಔಟ್​ನಲ್ಲಿ 13 ಮಿ.ಮೀ, ಶಾಂತಲನಗರ 10 ಮಿ.ಮೀ, ಈಜೀಪುರ 10 ಮಿ.ಮೀ ಮಳೆ ದಾಖಲಾಗಿದೆ. ವರ್ತೂರಿನಲ್ಲಿ 22 ಮಿ.ಮೀ ಮಳೆಯಾಗಿದ್ದು, ಬೆಳ್ಳಂದೂರಿನಲ್ಲಿ 21 ಮಿಲಿಮೀಟರ್ ಮಳೆ ದಾಖಲಾಗಿದೆ.

ನಗರದ ಹಲವೆಡೆ ರಾತ್ರಿ ಪೂರ್ತಿ ಮಳೆಯಾಗಿದ್ದು, ಬೆಳಿಗ್ಗೆ ರಸ್ತೆಯ ಅಕ್ಕ-ಪಕ್ಕದ ಮರಗಳೆಲ್ಲಾ ಹಚ್ಚಹಸಿರಿನಂದ ಕಂಗೊಳಿಸುತ್ತಿದೆ. ತಂಪಾದ ವಾತಾವರಣ ಇದ್ದು, ಬೆಳಿಗ್ಗೆ ಜಾಗಿಂಗ್​ ಹೊರಟಿರುವವರ ಮನಸ್ಸಿಗೆ ಖುಷಿ ತಂದಿದೆ. ಜಯನಗರ, ಬಿಟಿಎಂ ಲೇಔಟ್, ಹೊಯ್ಸಳ ನಗರದಲ್ಲಿ ಅಧಿಕ ಮಳೆಯಾಗಿದ್ದು, ಬೆಳಗಿನ ಜಾವ ಹಲವೆಡೆ ಭಾರೀ ಮಳೆಯಾಗಿದೆ. ಬೆಂಗಳೂರಲ್ಲಿ ಇನ್ನೂ ಮೂರು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮಳೆಯ ಜೊತೆಗೆ ಗಾಳಿಯ ಆರ್ಭಟವೂ ಜೋರಾಗಿದ್ದು, ರಸ್ತೆಯಲ್ಲಿ ಸಾಗುತ್ತಿದ್ದ ದ್ವಿಚಕ್ರ ವಾಹನ ಸವಾರರು ಜಾರಿ ಬಿದ್ದಿರುವ ಘಟನೆ ಕೆಲವೆಡೆ ನಡೆದಿದೆ. ಅವರಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳೂ ಆಗಿವೆ. ಕೆ.ಜಿ ರಸ್ತೆಯ ಕಂದಾಯ ಭವನದ ಬಳಿ ದ್ವಿಚಕ್ರ ವಾಹನ ಸವಾರರು ಜಾರಿಬಿದ್ದಿದ್ದು, ಕೆಲಕಾಲ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿದೆ. ಪೊಲೀಸರು ತಕ್ಷಣವೇ ಸ್ಥಳಕ್ಕೆ ಆಗಮಿಸಿದ್ದು, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಗಾಳಿ ಜೊತೆಗೆ ಮಳೆಯಾಗುತ್ತಿರುವುದರಿಂದ ವಾಹನ ಸವಾರರು ಅಥವಾ ರಸ್ತೆಯಲ್ಲಿ ನಡೆದು ಸಾಗುವವರು ಹೆಚ್ಚು ಎಚ್ಚರದಿಂದ ಸಾಗಬೇಕು. ಹಲವು ಜಿಲ್ಲೆಗಳಲ್ಲಿ ಗುಡು ಸಹಿತ ಮಳೆ ಕಾಣಿಸಿಕೊಂಡಿದೆ. ಗುರುವಾರವೂ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ: Bengaluru Rain: ಬಿಸಿಲಿನಿಂದ ಬೆಂದಿದ್ದ ಸಿಲಿಕಾನ್ ಸಿಟಿಗೆ ತಂಪೆರೆದ ವರುಣ; ರಾಜಧಾನಿಯ ಹಲವೆಡೆ ಜಿಟಿಜಿಟಿ ಮಳೆ

Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?